ಬಿಸಿ ಬಿಸಿ ಸುದ್ದಿ

ಬ್ರಹ್ಮಾಂಡ ಭ್ರಷ್ಟ ಶಿಕ್ಷಣಾಧಿಕಾರಿ ತೊಲಗಲಿ: ಬಿಎಸ್ಪಿ ಆಗ್ರಹ

ಜೇವರ್ಗಿ: ಬಹುಜನ ಸಮಾಜ ಪಕ್ಷ ಜೇವರ್ಗಿ ವಿಧಾನಸಭಾ ವತಿಯಿಂದ ಶುಕ್ರವಾರ ಜೆವರ್ಗಿಯ ಐ‌.ಬಿ ಯಲ್ಲಿ ಪತ್ರಿಕಾ ಗೋಷ್ಠಿ ನಡೆಸಿ ಇಡೀ ಶಿಕ್ಷಣ ವ್ಯವಸ್ಥೆಗೆ ಕಳಂಕ ವಾಗಿರುವ ಭ್ರಷ್ಟ ಅಧಿಕಾರಿ ಕ್ಷೇತ್ರ ಶಿಕ್ಷಣಾಧಿಕಾರಿ ಮುಂದುವರಿಯಲು ಯೋಗ್ಯರಲ್ಲ ಎಂದು ಆರೋಪಿಸಲಾಗಿದೆ.

ಜೇವರ್ಗಿ ತಾಲೂಕಿನ ಬೀರಾಳ ಕೆ ಗ್ರಾಮದವರು ತಾಲೂಕಿನ ಒಬ್ಬ ನಿವಾಸಿ ಸ್ವಂತ ತಾಲೂಕಿನಲ್ಲಿ ಕೆಲಸ ಮಾಡುವದು ಸ್ವಜನಪಕ್ಷಪಾತ ಹಾಗೂ ಭ್ರಷ್ಟಾಚಾರಕ್ಕೆ ಎಡೆ ಮಾಡಿಕೊಡುತ್ತದೆ. ಇದು ಸರಕಾರದ ಆದೇಶ ಇದರ ಸ್ಪಷ್ಟ ಉಲ್ಲಂಘನೆ ಆಗಿದೆ. ಒಬ್ಬ ಅಧಿಕಾರಿ ಮೇಲೆ ಯಾವುದೇ ಅಪರಾಧ, ಕೇಸ್ ವಿಚಾರಣೆ ನಡೆಯುತ್ತಿದ್ದರೆ ಅಂತಹವರನ್ನು ತತಕ್ಷಣದಿಂದಲೇ ಆ ಹುದ್ದೆಯಿಂದ ಬಿಡುಗಡೆ ಗೊಳಿಸಲು ಆದೇಶ ಇದೆ. ಇದರ ಸ್ಪಷ್ಟ ಉಲ್ಲಂಘನೆಯು ಕಂಡುಬರುತ್ತದೆ. ಇವರು ಹೇಳಿದ್ದೇ ಕಾನೂನು ಮಾಡಿದ್ದೆ ಕಾಯ್ದೆ ಇದರಿಂದಾಗಿ ತಾಲೂಕಿನ ಎಲ್ಲಾ ಶಿಕ್ಷಕರು ರೋಸಿಹೋಗಿದ್ದಾರೆ ಎಂದು ತಾಲೂಕ ಅಧ್ಯಕ್ಷರು ಮುನೇಶ್ ಅಂಕಲಗಿ ತಿಳಿಸಿದರು.

ಎರಡೂ ಅಟ್ರಾಸಿಟಿ ಕೇಸ್, ಹಾಗೂ ಲೋಕಾಯುಕ್ತ ಪ್ರಕರಣ ವಿಚಾರಣೆ ನಡೆಯುತ್ತಿದೆ .ಹೀಗಿದ್ದರೂ ಕೂಡ ಅವರನ್ನು ಹುದ್ದೆಯಿಂದ ತೆರವುಗೋಳಿಸುತ್ತಿಲ್ಲ ಎಂದರೆ ಇದು ಅತ್ಯಂತ ದುರದೃಷ್ಟಕರ ಸಂಗತಿಯಾಗಿದೆ ಕಾನೂನು ಹಾಗೂ ನಿಯಮಗಳ ಮೇಲೆ ಜನರಿಗೆ ವಿಶ್ವಾಸ ಕಡಿಮೆಯಾಗಿದೆ.

ಆಳಂದದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಕರ್ತವ್ಯವನ್ನು ನಿರ್ವಹಿಸುವಾಗ ರೇಣುಕಾಚಾರ್ಯ ಎಂಬ ಶಿಕ್ಷಕ ಒಂದು ವರ್ಷದಿಂದ ಸತತವಾಗಿ ಗೈರು ಹಾಜರಾಗಿದ್ದರು ಕೂಡ ಅವರಿಗೆ ಪ್ರತಿ ತಿಂಗಳು ವೇತನ ಬಟವಾಡಿ ಮಾಡುತ್ತಿದ್ದರು. ಈ ಪ್ರಕರಣ ಗುಲ್ಬರ್ಗ ಶಿಕ್ಷಣ ಇಲಾಖೆಯ ಅಪರ ಆಯುಕ್ತರು ವಿಚಾರಣೆ ಮಾಡುತ್ತಿದ್ದಾರೆ.

ಇಂತಹ ಹಲವು ಆರೋಪ, ದೂರುಗಳು ಇವರ ಮೇಲೆ ಇದ್ದುದರಿಂದ ದಿನಾಂಕ 4/9/2021 ರಂದು ಅಪರ ಆಯುಕ್ತರು ಸಂಪೂರ್ಣ ತನಿಖೆ ಮಾಡಿ ಸರಕಾರದ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದರು ಕೂಡ 45 ದಿನಗಳಿಂದ ಸರಕಾರ ಯಾವುದೇ ಕ್ರಮ ಕೈಗೊಳ್ಳದಿರುವುದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ಕುರಿತಂತೆ ಜೇವರ್ಗಿ ತಾಸಿಲ್ದಾರರಿಗೆ ಬಹುಜನ ಸಮಾಜ ಪಕ್ಷದಿಂದ ಮನವಿ ಪತ್ರ ಕೂಡ ಸಲ್ಲಿಸಲಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯದರ್ಶಿಗಳಾದ ಪ್ರಭಾಕರ್ ಸಾಗರ್ ,ಜಿಲ್ಲಾ ಸಂಘಟನಾ ಕಾರ್ಯದರ್ಶಿಗಳಾದ ಭೀಮು ನೆಲೋಗಿ , ಜೇವರ್ಗಿ ವಿಧಾನಸಭಾ ಸಂಯೋಜಕರಾದ ಮಲ್ಲು ನೇದಲಗಿ ,ಯಡ್ರಾಮಿ ತಾಲೂಕ ಸಂಯೋಜಕರಾದ ಪರಮಾನಂದ ಯಲಗೋಡ ,ವಿಧಾನಸಭಾ ಅಧ್ಯಕ್ಷರಾದ ಯಮನೇಶ ಅಂಕಲಗಿ , ಉಪಾಧ್ಯಕ್ಷರಾದ ಮಹ್ಮದ್ ಪಟೇಲ ಕಾಸರಬೋಸಗಾ ,ಬಿ.ವ್ಹಿ.ಎಸ್ ಸಂಯೋಜಕರಾದ ಸುನಿಲ್ ಬಡಿಗೇರ ಹಾಗೂ ಕಾರ್ಯಕರ್ತರಾದ ಪ್ರದೀಪ್, ಭಾಗೇಶ ,ಮೌನೇಶ ಇತರರು ಪತ್ರಿಕಾಗೋಷ್ಠಿಯನ್ನು ಉಪಸ್ಥಿತರಿದ್ದರು.

emedialine

Recent Posts

ನಿಧನ ವಾರ್ತೆ; ಆನಂದಪ್ಪ ಉಮ್ಮನಗೋಳ್

ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…

1 hour ago

ಸಂಘಸಂಸ್ಥೆಗಳು ಸಮಾಜಕ್ಕೆ ನೀಡಿದ ಕೋಡುಗೆ ಅಪಾರ ಪಾಳಾಶ್ರೀ

ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…

1 hour ago

ಹೊಸ ಹೊಸ ಉದ್ಯೋಗ ಸೃಷ್ಟಿಸಲು HKE ಸಂಸ್ಥೆ ಕಾರ್ಯ ಶ್ಲಾಘನೀಯ

ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…

1 hour ago

ಸ್ವಾಭಿಮಾನದ ಬದುಕಿಗೆ ಸಂಗೀತ ಪೂರಕ

ಕಲಬುರಗಿ : ಒತ್ತಡದ ಬದುಕಿನಲ್ಲಿ ಸಂಗೀತ ಆಲಿಸುವುದರಿಂದ ಮಾನಸಿಕ ನೆಮ್ಮದಿ, ಶಾಂತಿ ದೊರೆಯಲು ಸಾಧ್ಯವಿದೆ. ಅನೇಕ ಜನ ಸಂಗೀತ ಕಲಾವಿದರಿಂದು…

1 hour ago

ಅಲ್ಪಸುಖಕ್ಕಾಗಿ ಯುವ ಜನತೆ ಮಾದಕ ಪದಾರ್ಥಗಳಿಗೆ ದಾಸರಾಗಬೇಡಿ

ಕಲಬುರಗಿ; ಅಲ್ಪಸುಖಕ್ಕಾಗಿ ಯುವ ಜನತೆ ಮಾದಕ ಪದಾರ್ಥಗಳಿಗೆ ದಾಸರಾಗಿ ತಮ್ಮ ಜೀವನ ಹಾಳು ಮಾಡಿಕೊಳ್ಳಬಾರದು ಎಂದು ಜಿಲ್ಲಾ ತಂಬಾಕು ನಿಯಂತ್ರಣ…

1 hour ago

ಸೇಡಂ: `ಅಮ್ಮ ಪ್ರಶಸ್ತಿ’ ಪ್ರದಾನ ಸಮಾರಂಭ ನಾಳೆ

ಸೇಡಂ (ಕಲಬುರಗಿ);  ಜಿಲ್ಲೆಯ ಸೇಡಂನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನ ಕೊಡಮಾಡುವ `ಅಮ್ಮ ಪ್ರಶಸ್ತಿ’ 24ನೇ ವರ್ಷದ ಸಮಾರಂಭವು…

2 hours ago