ಆಳಂದ: ಜಿಲ್ಲೆಯಲ್ಲಿ ಸಾಹಿತಿಕವಾಗಿ ಉತ್ತಮ ಸಂಘಟಕರಾಗಿರುವ ಕಸಾಪ ಚುನಾವಣೆಯ ಜಿಲ್ಲಾ ಅಧ್ಯಕ್ಷಸ್ಥಾನದ ಅಭ್ಯರ್ಥಿ ಬಿ.ಎಚ್. ನಿರಗುಡಿ ಅವರನ್ನು ಹೆಚ್ಚಿನ ಮತಗಳನ್ನು ನೀಡುವ ಮೂಲಕ ಅವರನ್ನು ಗೆಲಿಸಬೇಕು ಎಂದು ಕರ್ನಾಟಕ ನವ ನಿರ್ಮಾಣ ಸೇನೆಯ ರಾಜಾಧ್ಯಕ್ಷ ಭೀಮಾಶಂಕರ ಪಾಟೀಲ ಅವರು ಕಸಾಪ ಮತದಾರರಲ್ಲಿ ಮನವಿ ಮಾಡಿದರು.
ಪಟ್ಟಣದಲ್ಲಿ ಮಂಗಳವಾರ ಕಸಾಪ ಚುನಾವಣೆ ಜಿಲ್ಲಾ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಬಿ.ಎಚ್. ನಿರುಗುಡಿ ಅವರು ಕೈಗೊಂಡಿದ್ದ ಪ್ರಚಾರದ ವೇಳೆ ಅವರಿಗೆ ಸನ್ಮಾನಿಸಿ ಪಾಟೀಲ ಮಾತನಾಡಿದರು.
ನಿರಗುಡಿ ಪರ ಜಿಲ್ಲೆಯಲ್ಲಿಯಲ್ಲಿ ಗೆಲುವಿನ ಅಲೆಯಿದೆ, ಈ ಬಾರಿ ಗೆಲುವು ನಿಶ್ವಿತವಾಗಿದೆ. ಆದರೆ ಹೆಚ್ಚಿನ ಮತಗಳಿಂದ ಗೆಲುವಿಗೆ ಎಲ್ಲರೂ ಕೈಜೋಡಿಸೋಣಾ ಎಂದರು.
ಸದ್ಯ ಕಸಾಪ ಚುನಾವಣೆಗೆ ಸ್ಪರ್ಧಿಸಿರುವ ಕೆಲವು ಅಭ್ಯರ್ತಿಗಳು ರಾಜಕೀಯ ಪಕ್ಷಗಳ ಬೆಂಬಲದೊಂದಿಗೆ ಚುನಾವಣೆ ಎದುರಿಸುತ್ತಿರುವುದಾಗಿ ಹೇಳಿಕೊಂಡು ಪ್ರಚಾರ ನಡೆಸಿರುವುದಕ್ಕೆ ಕನ್ನಡಕ್ಕೆ ಮಾಡುತ್ತಿರುವ ಬಹುದೊಡ್ಡ ದ್ರೋಹ ಎಸಗಿದಂತೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು. ರಾಜ್ಯದಲ್ಲಿನ ೬ ಕೋಟಿ ಕನ್ನಡಿಗರ ರಾಜಕೀಯ ರಹಿತ ಪ್ರಾತಿನಿಧಿಕ ಸಂಸ್ಥೆ, ಸಾಹಿತ್ಯದ ಚಿಂತನೆ, ಚುಟುವಟಿಕೆಗಳಿಗೆ ಈ ಸಂಸ್ಥೆ ಮೀಸಲಿದೆ. ಇದನ್ನು ಮಲಿನಗೊಳಿಸುವ ಕೆಲಸ ಕಸಾಪ ಅಭ್ಯರ್ಥಿಗಳು ಮಾಡಬಾರದು ಎಂದು ಹೇಳಿದರು.
ಕಸಾಪ ರಾಜಕೀಯ ಪಕ್ಷಗಳ ಸಂಸ್ಥೆಯಲ್ಲ, ಅಭ್ಯರ್ಥಿಗಳು ತಮ್ಮ ತಮ್ಮ ಸಾರ್ಮಧ್ಯದ ಮೇಲೆ ಸ್ಪರ್ಧಿಸಿ ಗೆಲ್ಲಲಿ, ಪಕ್ಷದ ಬೆಂಬಲಿತ ಅಭ್ಯರ್ಥಿಗಳೆಂದು ಕನ್ನಡದ ಮಾನ ಕಳೆಯುವ ಕೆಲಸ ಯಾವ ಅಭ್ಯರ್ಥಿಗಳೂ ಮಾಡಬಾರದು ಒಂದು ವೇಳೆ ಹಾಗೆ ಮಾಡಿದರೆ ಅದು ಕನ್ನಡಕ್ಕೆ ಮಾಡುವ ಬಹುದೊಡ್ಡ ಅಪಮಾನ. ಇದನ್ನು ನಾನು ತೀವ್ರವಾಗಿ ವಿರೋಧಿಸುತ್ತೇನೆ ಎಂದರು.
ರಾಜಕೀಯ ಪಕ್ಷದ ನಾಯಕರುಗಳು ತಮ್ಮ ಪಕ್ಷಗಳನ್ನು ಹಾಳು ಮಾಡಿದ್ದು ಸಾಕು. ಕಸಾಪ ಹಾಳು ಮಾಡುವುದು ಬೇಡ, ಕಸಾಪ ಚುನಾವಣೆ ವಿಚಾರದಲ್ಲಿ ಈ ನಾಡಿನ ರಾಜಕೀಯ ಪಕ್ಷಗಳು ಮೂಗು ತೋರಿಸುವುದು ಬೇಡ ಕನ್ನಡ ಇದೊಂದಾದರೂ ಸಂಸ್ಥೆ ಪವಿತ್ರವಾಗಿರಲಿ ಎಂದು ಹೇಳಿದರು.
ಈ ಸಂದರ್ಭಧಲ್ಲಿ ಶರಣಗೌಡ ಪಾಳಾ, ಜಿ.ಎಸ್. ಮಾಲಿಪಾಟೀಲ, ರಾಜಕುಮಾರ ಬಟಗೇರಿ, ವಿಜಯಕುಮಾರ ಪೋಮಾಜಿ, ಕನಸೇ ಜಿಲ್ಲಾ ಅಧ್ಯಕ್ಷ ರಮೇಶ ಜಗತಿ ಮತ್ತಿತರು ಉಪಸ್ಥಿತರಿದ್ದರು.
ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…
ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…
ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…
ಕಲಬುರಗಿ : ಒತ್ತಡದ ಬದುಕಿನಲ್ಲಿ ಸಂಗೀತ ಆಲಿಸುವುದರಿಂದ ಮಾನಸಿಕ ನೆಮ್ಮದಿ, ಶಾಂತಿ ದೊರೆಯಲು ಸಾಧ್ಯವಿದೆ. ಅನೇಕ ಜನ ಸಂಗೀತ ಕಲಾವಿದರಿಂದು…
ಕಲಬುರಗಿ; ಅಲ್ಪಸುಖಕ್ಕಾಗಿ ಯುವ ಜನತೆ ಮಾದಕ ಪದಾರ್ಥಗಳಿಗೆ ದಾಸರಾಗಿ ತಮ್ಮ ಜೀವನ ಹಾಳು ಮಾಡಿಕೊಳ್ಳಬಾರದು ಎಂದು ಜಿಲ್ಲಾ ತಂಬಾಕು ನಿಯಂತ್ರಣ…
ಸೇಡಂ (ಕಲಬುರಗಿ); ಜಿಲ್ಲೆಯ ಸೇಡಂನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನ ಕೊಡಮಾಡುವ `ಅಮ್ಮ ಪ್ರಶಸ್ತಿ’ 24ನೇ ವರ್ಷದ ಸಮಾರಂಭವು…