ಕಲಬುರಗಿ: ಜೇವರ್ಗಿ ಮತಕ್ಷೇತ್ರದಡಿ ಬರುವ ಭೀಮಾನದಿ ತೀರದಲ್ಲಿ ಸಾಗಿರುವ ಅಕ್ರಮ ಮರಳುಗಾರಿಕೆ ವಿರುದ್ಧ ಯಾವುದೇ ಮುಲಾಜಿಲ್ಲದೆ ಹಾಗೂ ನಿರ್ದಾಕ್ಷಿಣ್ಯವಾಗಿ ತಾವುಗಳೆಲ್ಲರೂ ಸೇರಿಕೊಂಡು ತಂಡ ಮಾಡಿಕೊಂಡು ಕ್ರಮ ಕೈಗೊಳ್ಳಬೇಕು ಎಂದು ವಿಧಾನಸಭೆ ವಿರೋಧ ಪಕ್ಷ ಮುಖ್ಯ ಸಚೇತಕರು ಹಾಗೂ ಜೇವರ್ಗಿ ಶಾಸಕೂರ ಆಗಿರುವ ಡಾ. ಅಜಯ್ ಸಿಂಗ್ ಕಲಬುರಗಿ ಜಿಲ್ಲಾಡಳಿತವನ್ನು ಆಗ್ರಹಿಸಿದ್ದಾರೆ.
ಜೇವರ್ಗಿಯಲ್ಲಿ ಮರಳು ಮಾಫಿಯಾ ಅವ್ಯಾಹತವಾಗಿ ಸಾಗುತ್ತಿದೆ ಎಂಬ ಆರೋಪಗಳು ಈಚೆಗೆ ತುಂಬ ಕೇಳಿ ಬರುತ್ತಿವೆ. ನೀವೆಲ್ಲರೂ ಯಾಕೆ ಇಂತಹ ಆರೋಪಗಳಿಗೆ ಅವಕಾಶ ನೀಉತ್ತಿದದೀರಿ? ಕಾನೂನು ರೀತ್ಯಾ ಹಾಗೂ ರಾಜ್ಯ ಸರಕಾರದ ಪ್ರಸ್ತುತ ಚಾಲ್ತಿಯಲ್ಲಿರುವ ಮರಳು ನೀತಿಯಂತೆ ಯಾರೂ ಪರವಾನಿಗೆ ಪಡೆದಿದ್ದಾರೋ ಅವರು ಮಾತ್ರ ಪರವಾನಿಗಿಯ ಸ್ಥಳದಲ್ಲಿ ಮರಳಿಗಾರಿಕೆ ಮಾಡಲಿ, ಇನ್ನುಳಿದಂತ ಅಕ್ರಮ ಮಾಡುವವರನ್ನು ಬೆಂಡೆತ್ತಿರಿ ಎಂದು ಡಾ. ಅಜಯ್ ಸಿಂಗ್ ಮಂಗಳವಾರ ಜಿಲ್ಲಾಧಿಕಾರಿ ವಿವಿ ಜ್ಯೋತ್ಸ್ನಾ, ಜಿಲ್ಲಾ ಪೆಲೀಸ್ ವರಿಷ್ಠಾಧಿಕಾರಿ ಇಶಾ ಪಂತ್, ಜೇವರ್ಗಿ ತಹಶೀಲ್ದಾರ್ ವಿನೋದ ಪಾಟೀಲ್ ಇವರೊಂದಿಗೆ ದೂರವಾಣಿಯಲ್ಲಿ ಮತುಕತೆ ನಡೆಸಿ ಖಡಕ್ಕಾಗಿ ತಾಕೀತು ಮಾಡಿದ್ದಾರೆ.
ತಹಶೀಲ್ ಕಚೇರಿ ಮುಂದೆ ಹುಲ್ಲೂರ ಅಕ್ರಮ ಮರಳುಗಾರಿಕೆ ವಿಚಾರ ಇಟ್ಟುಕೊಂಡು ಧರಣಿ ಸಾಗಿದೆ. ಇದರಂತೆಯೇ ಭೀಮಾ ತೀರದ ಅನೇಕ ಊರುಗಳಲ್ಲಿ ಮರಳು ಕಳವು ಸಾಗಿದೆ, ರಾಜಧನ (ರಾಯಲ್ಟಿ) ಭರಿಸದೆಯೇ, ಪರವಾನಿಗೆ ಇಲ್ಲದೆಯೇ ಮರಳು ಕದ್ದೊಯ್ಯುತ್ತಿದ್ದಾರೆÀಂಬ ದೂರುಗಳಿವೆ. ಪತ್ರಿಕೆಗಳಲ್ಲಿಯೂ ಸಾಕಷ್ಟು ವರದಿಗಳು ಜೇವರ್ಗಿ ಮರಳು ಮಾಫಿಯಾಕ್ಕೆ ಸಂಬಂಧಿಸಿದಂತೆ ಬರುತ್ತಿವೆ. ಇವುಗಳಿಗೆಲ್ಲ ಇತಿಶ್ರೀ ಹೇಳಬೇಕಾದಲ್ಲಿ ಕಂದಾಯ, ಗಣಿ, ಪೆÇಲೀಸ್ ಇಲಾಖೆಯವರು ಒಂದಾಗಿ ತಕ್ಷಣ ತಂಡ ರಚಿಸಿಕೊಂಡು ವಿಶೇಷವಾಗಿ ಅಕ್ರಮದ ವಿರುದ್ಧ ಕಾರ್ಯಾಚರಣೆ ನಡೆಸಿರಿ ಎಂದೂ ಡಾ. ಅಜಯ್ ಸಿಂಗ್ ಆಡಳಿತಕ್ಕೆ ಸಲಹೆ ನೀಡಿದ್ದಾರೆ.
ಭೀಮಾ ನದಿಯಲ್ಲಿನ ಅವೈe್ಞÁನಿಕ ಮರಳುಗಾರಿಕೆಯಿಂದ ನದಿ ಪರಿಸರಕ್ಕೆ ಭಾರಿ ಪೆಟ್ಟು ಬೀಳುತ್ತಿದೆ. ಇದರಿಂದಾಗಿ ನದಿ ತೀರದಲ್ಲಿರುವ ಜಲಚರಗಳು ಸಾವನ್ನಪ್ಪುತ್ತಿವೆ. ನದಿಗಳಲ್ಲಿ ಬೃಹದಾಕಾರದ ತಗ್ಗುಗಳು ಸೃಷ್ಟಿಯಾಗಿ ರೈತರು, ಜನ, ಜಾನುವಾರುಗಳ ಬವಣೆ ಹೇಳತೀರದಾಗಿದೆ. ನದಿಗೆ ಇಳಿಯುವವರು ಮರಳು ಮಾಫಿಯಾದರು ಬಗೆದ ತಗ್ಗಿಗೇ ಬಿದ್ದು ಅಪಾಯ ಆಹ್ವಾನಿಸುವಂತಾಗಿದೆ ಎಂದು ಡಾ. ಅಜಯ್ ಸಿಂಗ್ ಕಳವಳ ಹೊರಹಾಕಿದ್ದಾರೆ.
ಇಂತಹ ಎಲ್ಲಾ ತೊಂದರೆಗಳಿಗೆ ಪರಿಹಾರ ಸಿಗಬೇಕಾದಲ್ಲಿ ಮೊದಲು ಅಕ್ರಮ ಮರಳುಗಾರಿಕೆ ನಿಲ್ಲಬೇಕು. ಈ ವಿಚಾರದಲ್ಲಿ ಆದಷ್ಟು ಬೇಗ ಖಡಕ್ ಕ್ರಮಗಳನ್ನು ಜೇವರ್ಗಿ ಭೀಮಾ ತೀರದಲ್ಲಿ ಜಿಲ್ಲಾಡಳಿತ, ತಾಲೂಕು ಆಡಳಿತ, ಪೆಲೀಸರು ಸೇರಿಕೊಂಡು ಕೈಗೊಳ್ಳುವಂತಾಗಲಿ, ಇದಕ್ಕೆ ಜಿಲ್ಲಾಧಿಕಾರಿಗಳು, ಜಿಲ್ಲಾ ಎಸ್ಪಿಯವರು ಇಬ್ಬರೂ ಸೇರಿಕೊಂಡು ಉಸ್ತುವಾರಿ ವಹಿಸಲಿ ಎಂದೂ ಡಾ. ಅಜಯ್ ಸಿಂಗ್ ತಾವು ನಡೆಸಿದ ಚರ್ಚೆಯಲ್ಲಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…
ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…
ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…
ಕಲಬುರಗಿ : ಒತ್ತಡದ ಬದುಕಿನಲ್ಲಿ ಸಂಗೀತ ಆಲಿಸುವುದರಿಂದ ಮಾನಸಿಕ ನೆಮ್ಮದಿ, ಶಾಂತಿ ದೊರೆಯಲು ಸಾಧ್ಯವಿದೆ. ಅನೇಕ ಜನ ಸಂಗೀತ ಕಲಾವಿದರಿಂದು…
ಕಲಬುರಗಿ; ಅಲ್ಪಸುಖಕ್ಕಾಗಿ ಯುವ ಜನತೆ ಮಾದಕ ಪದಾರ್ಥಗಳಿಗೆ ದಾಸರಾಗಿ ತಮ್ಮ ಜೀವನ ಹಾಳು ಮಾಡಿಕೊಳ್ಳಬಾರದು ಎಂದು ಜಿಲ್ಲಾ ತಂಬಾಕು ನಿಯಂತ್ರಣ…
ಸೇಡಂ (ಕಲಬುರಗಿ); ಜಿಲ್ಲೆಯ ಸೇಡಂನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನ ಕೊಡಮಾಡುವ `ಅಮ್ಮ ಪ್ರಶಸ್ತಿ’ 24ನೇ ವರ್ಷದ ಸಮಾರಂಭವು…