ಶಹಾಬಾದ: ಬುತ್ತಿ ಜಾತ್ರೆಯ ನೆಪದಲ್ಲಿ ಬಸವಾದಿ ಶರಣರ ಚಿಂತನೆಗಳ ಜ್ಞಾನ ಬುತ್ತಿಯನ್ನು ಊಣಬಡಿಸುವ ಮೂಲಕ ನಮ್ಮಲ್ಲಿ ಅಂತರಂಗದ ಅರಿವನ್ನು ಜಾಗೃತಗೊಳಿಸುವ ಕೆಲಸವನ್ನು ಬಸವ ಸಮಿತಿ ಮಾಡುತ್ತಿದೆ ಎಂದು ಶಿರಗೊಪ್ಪಾದ ಶರಣ ವೆಂಕಾಟಾಪೂರ ಶರಣರು ಹೇಳಿದರು.
ಅವರು ಬುಧವಾರ ಭಂಕೂರ ಗ್ರಾಮದ ಬಸವ ಸಮಿತಿಯಲ್ಲಿ ಬುತ್ತಿ ಬಸವಲಿಂಗೇಶ್ವರ ದೇವಸ್ಥಾನ ಲಿಂಗಸ್ಥಾಪನೆ ನಿಮಿತ್ತ ಆಯೋಜಿಸಲಾದ ಆಧ್ಯಾತ್ಮಿಕ ಚಿಂತನೆ ಹಾಗೂ ಬುತ್ತಿ ಜಾತ್ರೆಯ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿದರು.
ಶರಣರ ಚಿಂತನೆಗಳು ಎಲ್ಲರಿಗೂ ಎಲ್ಲಾ ಕಾಲಕ್ಕೂ ಬೇಕಾಗಿರುವಂತಹವು. ಅವರ ಮಾರ್ಗವನ್ನು ಅನುಸರಿಸಿ ಅಂತರಂಗ-ಬಹಿರಂಗವನ್ನು ಶುದ್ಧಿಯಾಗಬಹುದು.
ಅಂತರಂಗದ ಶುದ್ಧಿಗೆ ಇಷ್ಟಲಿಂಗ ಪೂಜೆ, ಬಹಿರಂಗದ ಶುದ್ಧಿಗೆ ಸತ್ಯ ಶುದ್ಧ ಕಾಯಕ ಮಾಡಬೇಕೆಂದರು. ಅಂತರಂಗ-ಬಹಿರಂಗ ಶರಣ ಸಂಸ್ಕøತಿಯ ತಾಯಿ ಬೇರು. ನಿಜ ಸ್ವರೂಪ ಪರಮಾತ್ಮನ ಅರಿಯಬೇಕಾದರೆ ಶರಣ ಸಂಸ್ಕøತಿಯನ್ನು ಅಪ್ಪಿಕೊಳ್ಳಬೇಕು.ಇದರಿಂದ ಸಮಾಜದಲ್ಲಿ ಶಾಂತಿ, ತಾಳ್ಮೆ, ಸೌಹಾರ್ದತೆ ನೆಲೆಸುತ್ತದೆ ಎಂದು ಹೇಳಿದರು.
ಶಹಾಬಾದ-ವಾಡಿ ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಕನಕಪ್ಪ ದಂಡಗುಲಕರ್ ಮಾತನಾಡಿ, ಬಸವಾದಿ ಶರಣರ ಸಂದೇಶಗಳು ಸರ್ವಕಾಲಕ್ಕೂ ಪ್ರಸ್ತುತವಾಗಿದ್ದು, ಅದು ಸರ್ವರಿಗೂ ಒಳ್ಳೆಯ ಮಾರ್ಗ ತೋರಿಸುವಂತಹ ದೊಡ್ಡ ಶಕ್ತಿ ಹೊಂದಿದೆ.ಆದ್ದರಿಂದ ಶರಣರ ವಚನಗಳನ್ನು ಮಕ್ಕಳಿಗೆ ಪಠಣ ಮಾಡಿಸಿ, ಅದರ ಸಾರವನ್ನು ತಿಳಿ ಹೇಳುವ ಮೂಲಕ ಸಂಸ್ಕಾರಯುತ ಸಮಾಜವನ್ನು ನಿರ್ಮಾಣ ಮಾಡಬಹುದು.ಅಂಥದೊಂದು ಶಕ್ತಿ ಶರಣರ ವಚನಗಳಲ್ಲಿದೆ ಎಂದು ಹೇಳಿದರು.
ಅತಿಥಿಗಳಾಗಿ ವಿಜಯಕುಮಾರ ಪಾಟೀಲ, ಕಸಾಪ ಕಲಬುರಗಿ ಗ್ರಾಮೀಣ ಮಾಜಿಅಧ್ಯಕ್ಷ ಶರಣಗೌಡ ಪಾಟೀಲ ವೇದಿಕೆಯ ಮೇಲಿದ್ದರು. ಬಸವ ಸಮಿತಿ ಅಧ್ಯಕ್ಷ ಅಮೃತ ಮಾನಕರ ಅಧ್ಯಕ್ಷತೆ ವಹಿಸಿದ್ದರು.
ನೀಲಕಂಠ ಮುದೋಳಕರ್ ನಿರೂಪಿಸಿದರು, ಸ್ವಾಗತಿಸಿದರು, ಅಮರಪ್ಪ ಹೀರಾಳ ವಂದಿಸಿದರು.
ಸಮಿತಿ ರೇವಣಸಿದ್ದಪ್ಪ ಮುಸ್ತಾರಿ,ಮೇಟಿ ಪಂಪಾಪತಿ,ವೀರಣ್ಣ ಕುಂಬಾರ,ಅಣ್ಣಾರಾವ ಹಳ್ಳಿ, ಶಿವಪುತ್ರ ಕುಂಬಾರ, ಕುಪೇಂದ್ರ ತುಪ್ಪದ್, ಸಂತೋಷ ಪಾಟೀಲ, ಗಿರಿಮಲ್ಲಪ್ಪ ವಸಂಗ, ಶಾಂತಪ್ಪ ಬಸಪಟ್ಟಣ, ಗುರಲಿಂಗಪ್ಪ ಪಾಟೀಲ, ಹೆಚ್.ವಾಯ್.ರಡ್ಡೇರ್,ಹಣಮಂತರಾವ ದೇಸಾಯಿ, ತಿಪ್ಪಣ್ಣರೆಡ್ಡಿ, ಚಂದ್ರಕಾಂತ ಅಲಮಾ, ಶರಣಬಸಪ್ಪ ನಾಗನಳ್ಳಿ, ಸೋಮಶೇಖರ ಉಳ್ಳಾಗಡ್ಡಿ,ಭೀಮಾಶಂಕರ ದಂಡೋತಿ,ಮಲ್ಲಿಕಾರ್ಜುನ ಘಾಲಿ ಇತರರು ಇದ್ದರು.
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…