ರೈತರ ದೀನ ದಲಿತರ ಶೋಷಿತರ ಪರವಾಗಿ ಒಕ್ಕೂಟ ಹೋರಾಟ: ವೆಂಕೋಬ ದೊರೆ

0
17

ಸುರಪುರ: ರಾಜ್ಯದಲ್ಲಿನ ದೀನ ದಲಿತರು ಅಲ್ಪಸಂಖ್ಯಾತರು ಮತ್ತು ಹಿಂದುಳಿದ ವರ್ಗಗಳಿಗೆ ಸರಕಾರದಿಂದ ಸಿಗಬೇಕಾದ ಸೌಲಭ್ಯಗಳನ್ನು ಕೊಡಿಸುವ ಮತ್ತು ರೈತರು ಕಾರ್ಮಿಕರು ಹಾಗು ಶೋಷಿತರ ಏಳಿಗೆಗಾಗಿ ಹೋರಾಟವನ್ನು ರೂಪಿಸಲು ಒಕ್ಕೂಟ ರಚನೆ ಮಾಡಲಾಗಿದೆ ಎಂದು ಕರ್ನಾಟಕ ದಲಿತ ಹಿಂದುಳಿದ ಮತ್ತು ಅಲ್ಪಸಂಖ್ಯಾರ ಒಕ್ಕೂಟದ ರಾಜ್ಯಾಧ್ಯಕ್ಷ ವೆಂಕೋಬ ದೊರೆ ಮಾತನಾಡಿದರು.

ನಗರದ ಟೈಲರ್ ಮಂಜಿಲ್‍ನಲ್ಲಿ ಸುದ್ದಗೋಷ್ಟಿ ನಡೆಸಿ ಕರ್ನಾಟಕ ದಲಿತ ಹಿಂದುಳಿದ ಮತ್ತು ಅಲ್ಪಸಂಖ್ಯಾತರ ಒಕ್ಕೂಟ ರಚನೆ ಕುರಿತು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ,ಮುಖ್ಯವಾಗಿ ತಾಲೂಕಿನಲ್ಲಿ ಕೃಷ್ಣಾ ಭಾಗ್ಯ ಜಲ ನಿಗಮದ ಕಾಮಗಾರಿಗಳಲ್ಲಿನ ಅವ್ಯವಹಾರ ತನಿಖೆ,ರೈತರ ಸಮಸ್ಯೆಗಳ ಪರಿಹಾರಕ್ಕಾಗಿ ಮತ್ತು ನಗರಕ್ಕೆ ಶಾಸ್ವತ ಕುಡಿಯುವ ನೀರು ಒದಗಿಸಲು ಸೇರಿದಂತೆ ಅನೇಕ ವಿಷಯಗಳಿಗಾಗಿ ಒಕ್ಕೂಟ ಹೋರಾಟ ನಡೆಸಲಿದೆ ಎಂದರು.ಮಾಜಿ ಶಾಸಕರು ಮತ್ತು ಹಾಲಿ ಶಾಸಕರಿಂದ ಕ್ಷೇತ್ರದಲ್ಲಿ ಯಾವುದೇ ಅಭಿವೃಧ್ಧಿಯಾಗಿಲ್ಲ,ಗ್ರಾಮೀಣ ಭಾಗದಲ್ಲಿನ ರಸ್ತೆಗಳು ಹಾಳಾಗಿವೆ,ಉದ್ಯೋಗ ಖಾತ್ರಿ ಯೋಜನೆ ಸಂಪೂರ್ಣ ಹಳ್ಳಹಿಡಿದಿದೆ ಇವುಗಳ ವಿರುದ್ಧ ಹೋರಾಟ ನಡೆಸಲಿದೆ ಎಂದರು.

Contact Your\'s Advertisement; 9902492681

ನಂತರ ಒಕ್ಕೂಟದ ಉಪಾಧ್ಯಕ್ಷರಾಗಿ ನೇಮಕಗೊಂಡ ಮುಖಂಡ ನಾಗಣ್ಣ ಕಲ್ಲದೇವನಹಳ್ಳಿ ಮಾತನಾಡಿ,ರಾಜ್ಯದಲ್ಲಿನ ರೈತರಿಗಿರುವ ನೀರಾವರಿ ಸಮಸ್ಯೆಗಳಿಗಾಗಿ ಹೋರಾಟ ನಡೆಸಲಿದ್ದೇವೆ ಅಲ್ಲದೆ ಸರಕಾರದ ಸೌಲಭ್ಯಗಳನ್ನು ಜನರಿಗೆ ತಲುಪಿಸುವ ಕೆಲಸವನ್ನು ಒಕ್ಕೂಟ ಮಾಡಲಿದೆ ಎಂದರು.ನಂತರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಭೀಮರಾಯ ಸಿಂದಗೇರಿ,ಸಂಘಟನಾ ಕಾರ್ಯದರ್ಶಿ ನಿಂಗಣ್ಣ ದೇವರಗೋನಾಲ ಮಾತನಾಡಿದರು.

ಇದೇ ಸಂದರ್ಭದಲ್ಲಿ ಒಕ್ಕೂಟದ ಪದಾಧಿಕಾರಿಗಳನ್ನಾಗಿ ಮಲ್ಲಯ್ಯ ಕಮತಗಿಯವರನ್ನು ಗೌರವಾಧ್ಯಕ್ಷರಾಗಿ,ವೆಂಕೋಬ ದೊರೆ ರಾಜ್ಯಾಧ್ಯಕ್ಷರಾಗಿ,ನಾಗಣ್ಣ ಕಲ್ಲದೇವನಹಳ್ಳಿ ಉಪಾಧ್ಯಕ್ಷರಾಗಿ,ಭೀಮರಾಯ ಸಿಂದಗೇರಿ ಪ್ರಧಾನ ಕಾರ್ಯದರ್ಶಿಯಾಗಿ,ನಿಂಗಣ್ಣ ದೇವರಗೋನಾಲ ಸಂಘಟನಾ ಕಾರ್ಯದರ್ಶಿಯನ್ನಾಗಿ ಮತ್ತು ಮಾಳಪ್ಪ ಕಿರದಳ್ಳಿಯವರನ್ನು ಸಹ ಕಾರ್ಯದರ್ಶಿಯನ್ನಾಗಿ ನೇಮಕಗೊಳಿಸಿರುವ ಪದಾಧಿಕಾರಿಗಳ ಪಟ್ಟಿಯನ್ನು ಬಿಡುಗಡೆಗೊಳಿಸಿದರು.

ಈ ಸಂದರ್ಭದಲ್ಲಿ ಹೋರಾಟಗಾರ ಶಿವಶಂಕರ ಬೊಮ್ಮನಹಳ್ಳಿ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here