ಬಿಸಿ ಬಿಸಿ ಸುದ್ದಿ

ಡಾ.ಅಭಿನವ ಅನ್ನದಾನೇಶ್ವರ ಮಹಾಸ್ವಾಮೀಜಿಗಳು ಇನ್ನೂ ನೆನಪು ಮಾತ್ರವೂ..!

  • ಕೆ.ಶಿವು.ಲಕ್ಕಣ್ಣವರ

ಗಜೇಂದ್ರಗಡ ತಾಲೂಕಿನ ಹಾಲಕೇರಿ ಮಠದ ಪೀಠಾಧಿಪತಿ ಡಾ.ಅಭಿನವ ಅನ್ನದಾನೇಶ್ವರ ಮಹಾಸ್ವಾಮೀಜಿ ಅವರು ನಿಧನರಾಗಿದ್ದಾರೆ.

ಅನಾರೋಗ್ಯದಿಂದ ಬಳಲುತ್ತಿದ್ದ ಹಾಲಕೇರಿ ಮಠದ ಪೀಠಾಧಿಪತಿ ಡಾ.ಸಂಗನಬಸವ(ಅಭಿನವ ಅನ್ನದಾನೇಶ್ವರ) ಮಹಾಸ್ವಾಮೀಜಿಯವರು ಬೆಂಗಳೂರಿನ ಅಪೋಲೋ ಆಸ್ಪತ್ರೆಯಲ್ಲಿ ಕೊನೆ ಉಸಿರೆಳೆದಿದ್ದಾರೆ.

ಸ್ವಾಮೀಜಿ ಶಿವಯೋಗ ಮಂದಿರ ಅಧ್ಯಕ್ಷರೂ ಆಗಿದ್ದರು. ನವೆಂಬರ್ 8, 9, 10 ರಂದು ಮಠಕ್ಕೆ ನೂತನ ಚಿರಪಟ್ಟಾಧಿಕಾರ ಕಾರ್ಯಕ್ರಮ ನಡೆಸಿದ್ದರು. ತಮ್ಮ ಸ್ಥಾನಕ್ಕೆ ನೂತನವಾಗಿ ಮುಪ್ಪಿನ ಬಸವಲಿಂಗ ಸ್ವಾಮೀಜಿ ಅವರನ್ನು ನೇಮಿಸಿದ್ದರು.

ಗದಗ, ಹಾಲಕೇರಿ, ಬಳ್ಳಾರಿ, ಹೊಸಪೇಟೆ ಅನೇಕ ಶಾಖಾ ಮಠಗಳ ಉತ್ತರಾಧಿಕಾರಿಯಾಗಿದ್ದ ಡಾ.ಅಭಿನವ ಅನ್ನದಾನೇಶ್ವರ ಮಹಾಸ್ವಾಮೀಜಿಯವರ ನಿಧನದ ಸುದ್ದಿ ಕೇಳಿ ಅಸಂಖ್ಯಾತ ಭಕ್ತರು ನೋವಿನ ಸಾಗರದಲ್ಲಿ ಮುಳುಗಿದ್ದಾರೆ.

ಸ್ವಾಮೀಜಿಯವರ ಪಾರ್ಥಿವ ಶರೀರ ಇಂದು ಮಧ್ಯಾಹ್ನ ಹಾಲಕೇರಿ ಗ್ರಾಮಕ್ಕೆ ಬರಲಿದೆ.

# ಸಾಮಾಜಿಕ, ಧಾರ್ಮಿಕ ಭವ್ಯ ಪರಂಪರೆಯ ಶ್ರೀಅನ್ನದಾನೇಶ್ವರ ಮಠವೂ–

ಸಾಮಾಜಿಕ, ಧಾರ್ಮಿಕ ಕಾರ್ಯಗಳಿಂದ ಸಮಾಜ ಸೇವೆಯಲ್ಲಿ ಅವಿರತವಾಗಿ ಶ್ರಮಿಸುತ್ತಿದ್ದ ಹಾಲಕೆರೆಯ ಶ್ರೀಅನ್ನದಾನೇಶ್ವರ ಮಠವು ಈ ಭಾಗದ ಸರ್ವ ಜನಾಂಗದ ಶ್ರದ್ಧಾಕೇಂದ್ರವಾಗಿತ್ತು.

ಸಾಮಾಜಿಕ, ಧಾರ್ಮಿಕ ಕಾರ್ಯಗಳಿಂದ ಸಮಾಜ ಸೇವೆಯಲ್ಲಿ ಅವಿರತವಾಗಿ ಶ್ರಮಿಸುತ್ತಿದ್ದ ಹಾಲಕೆರೆಯ ಶ್ರೀಅನ್ನದಾನೇಶ್ವರ ಮಠವು ಈ ಭಾಗದ ಸರ್ವ ಜನಾಂಗದ ಶ್ರದ್ಧಾ ಕೇಂದ್ರವಾಗಿಯೂ ಆಗಿದೆ.

ಐನೂರು ವರ್ಷಗಳ ಭವ್ಯ ಆಧ್ಯಾತ್ಮಿಕ ಪರಂಪರೆ ಹೊಂದಿದ ಶ್ರೀಮಠವು 12 ನೇ ಶತಮಾನದ ಶಿವಶರಣರಿಂದ ಪ್ರವಹಿಸಿ ಬಂದಿದ್ದು, ಮಠದ ಇತಿಹಾಸದಲ್ಲಿ 9 ನೇ ಗುರುಗಳಾದ ಲಿಂ.ಗಡ್ಡದಜ್ಜನವರು ಹಿಮಾಲಯದಲ್ಲಿ ತಪ್ಪಸ್ಸನ್ನು ಆಚರಿಸಿದವರು. ಇಟಗಿಯ ಭೀಮವ್ವನಿಗೆ ಲಿಂಗದೀಕ್ಷೆ ಇವರೇ ನೀಡಿದ್ದು ಎಂಬ ಪ್ರತೀತಿ ಇದೆ. 10 ನೇ ಗುರುಗಳಾದ ಲಿಂ.ಗುರು ಅನ್ನದಾನ ಮಹಾಸ್ವಾಮಿಗಳು ಸರ್ವರಲ್ಲಿ ಆಧ್ಯಾತ್ಮ ಕೀರ್ತಿಯನ್ನು ಬೆಳಗಿಸಿ 27 ಶಾಖಾಮಠಗಳಲ್ಲಿನ ಭಕ್ತ ಸಮೂಹದಲ್ಲಿ ಧಾರ್ಮಿಕ ಜಾಗೃತಿಗೈದವರು. ಶಿವಶರಣೆ ಸಜ್ಜಲಗುಡ್ಡದ ಶರಣಮ್ಮನವರಿಗೆ ಲಿಂಗದೀಕ್ಷೆ ನೀಡಿದವರು. ಆದ್ದರಿಂದ ಈ ಮಠವನ್ನು ಬಾಗಲಕೋಟೆಯ ವೈರಾಗ್ಯ ಮಲ್ಲಣಾರ್ಯರು ಭಕ್ತಿಯ ಕಾಶಿ ಎಂದೇ ಕರೆದಿದ್ದಾರೆ.

ಹಾನಗಲ್ಲ ಕುಮಾರ ಮಹಾಸ್ವಾಮಿಗಳ ಅಪ್ಪಣೆಯ ಮೇರೆಗೆ ಸ್ವಾತಂತ್ರ್ಯ ಪೂರ್ವದಲ್ಲಿಯೇ ಶಿಕ್ಷ ಣದ ಕ್ರಾಂತಿ ಮಾಡಿ ಅಕ್ಷರ ಜ್ಯೋತಿಯ ಬೆಳಕನ್ನು ದಯಪಾಲಿಸಲು ನರೇಗಲ್ಲ ಸಮೀಪದ ಕೋಡಿಕೊಪ್ಪದ ನಿರ್ಜನ ಪ್ರದೇಶದಲ್ಲಿ 3 ವರ್ಷಗಳ ಕಾಲ ಅನುಷ್ಠಾನಗೈದು, ತಪಸ್ವಿಗಳೆನಿಸಿದವರು. ನಂತರ ವಿಜಯ ವಿದ್ಯಾಪ್ರಸಾರಕ ಸಮಿತಿ ಸ್ಥಾಪಿಸಿ ಅಸಂಖ್ಯಾತ ಬಡಮಕ್ಕಳಿಗೆ ಜ್ಞಾನದ ಬೆಳಕು ನೀಡಿದವರು.

ಈಗಿನ ಡಾ.ಅನ್ನದಾನ ಮಹಾಸ್ವಾಮಿಗಳು, ನಾಗನೂರು ಶಿವಬಸವ ಮಹಾಸ್ವಾಮಿಗಳ ಅಪ್ಪಣೆಯಂತೆ 1987 ರಲ್ಲಿಯೇ 12 ನೇ ಪೀಠಾಧಿಪತಿಗಳಾಗಿ ಪಟ್ಟಾಭಿಷಕ್ತರಾದವರು.

ಸದ್ಯದ ಶ್ರೀಗಳು ಭವ್ಯ ಬಸವ ಪುರಾಣ, 301 ಸಾಮೂಹಿಕ ವಿವಾಹ, ಶತಮಾನೋತ್ಸವ, ಸುವರ್ಣಮಹೋತ್ಸವ, 5001 ಮುತ್ತೈದೆಯರ ಉಡಿ ತುಂಬುವ ಕಾರ್ಯಕ್ರಮ, ಪುಣ್ಯಕ್ಷೇತ್ರ ಉಳವಿಯವರೆಗೆ ಪಾದಯಾತ್ರೆ, 5001 ಕೃಷಿ ಕಾರ್ಮಿಕ ತಾಯಂದಿರ ಸನ್ಮಾನ, ಜೈವಿಕ ಇಂಧನ ತಜ್ಞರ ಸಮಾವೇಶ, ಸಾವಯವ ಕೃಷಿಕರ ಸಮಾವೇಶ, ಸಾಧಕ ವಿದ್ಯಾರ್ಥಿಗಳ ಸನ್ಮಾನ ಹೀಗೆಯೇ ಹತ್ತು ಹಲವು ಕಾರ್ಯಕ್ರಮಗಳ ಮೂಲಕ ಶ್ರೀಮಠದ ಕೀರ್ತಿ ಹೆಚ್ಚಿಸಿದ್ದವರು.

# ಶೈಕ್ಷ ಣಿಕ ಕ್ರಾಂತಿಯೂ–

ಅನ್ನದಾನ ವಿಜಯ ವಿದ್ಯಾ ಪ್ರಸಾರಕ ಸಮಿತಿಯ ಶಾಲಾ ಕಾಲೇಜುಗಳನ್ನು ಮುನ್ನಡೆಸುವುದರ ಮೂಲಕ ಪ್ರಾಥಮಿಕ, ಪ್ರೌಢ, ಪಿಯುಸಿ, ಪದವಿ ಹಾಗೂ ಉನ್ನತ ಶಿಕ್ಷ ಣದ ವಿಭಾಗಗಳನ್ನು ಸ್ಥಾಪಿಸಿ ಶ್ರೀಮಠದ ಕೀರ್ತಿ ಬೆಳಗಿಸುತ್ತಿದ್ದರು ಅನ್ನದಾನೇಶ್ವರ ಶ್ರೀಗಳು.

ಹಂಪಿ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್‌ ಪದವಿ ಹೊಂದಿ 27 ಶಾಖಾಮಠಗಳ ಅಧಿಕಾರ ಸ್ವೀಕರಿಸಿದ 27 ವರ್ಷಗಳಲ್ಲಿ ಶ್ರೀಮಠದ ಇತಿಹಾಸವನ್ನು ಸುವರ್ಣಾಕ್ಷ ರಗಳಲ್ಲಿ ಬರೆಯಿಸಿದ ಕಾಯಕಯೋಗಿಗಳೂ ಆಗಿದ್ದಾರೆ.

ಇಂತಹ ನೆರೆಗಲ್ ದ ಶ್ರೀಗಳಾದ ಅನ್ನದಾನೇಶ್ವರ ಶ್ರೀಗಳು ಈಗ ಭಕ್ತರನ್ನು ಬಿಟ್ಟು ಅಗಲಿದ್ದಾರೆ. ಆದರೆ ಅವರ ಶೈಕ್ಷಣಿಕ, ಸಾಮಾಜಿಕ ಕ್ರಾಂತಿಯು ಅಜರಾಮರವಾಗಿದ್ದು ಒಂದು ಇತಿಹಾಸವೇ ಆಗಿದೆ..!

emedialine

Recent Posts

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

5 hours ago

ಸಿದ್ದ ಶ್ರೀ ಕಾರ್ಖಾನೆ ಪ್ರಾರಂಭವಾಗುವರೆಗೂ ಹೋರಾಟ: ವೀರಣ್ಣ ಗಂಗಾಣಿ

ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…

5 hours ago

ದಕ್ಷಿಣ ಭಾರತ ಅಂತರ ವಿಶ್ವವಿದ್ಯಾಲಯ ಮಹಿಳೆಯರ ಕಬಡ್ಡಿ ಕ್ರೀಡಾಕೂಟಕ್ಕೆ ಆಯ್ಕೆ

ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…

6 hours ago

ಪ್ರಿಯಾಂಕ್ ಖರ್ಗೆ ಜನ್ಮದಿನ; ರಕ್ತದಾನ ಶಿಬಿರಕ್ಕೆ ಶಾಸಕ ಪಾಟೀಲ ಚಾಲನೆ

ಕಲಬುರಗಿ: ನಗರದ ವಾರ್ಡ ನಂ.51.ರ  ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…

16 hours ago

ಬಡವರಿಗೆ ಹಣ್ಣು-ಹಂಪಲು ವಿತರಣೆ

ಕಲಬುರಗಿ: ಕರ್ನಾಟಕ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಚಿವ ಪ್ರಿಯಾಂಕ್ ಖರ್ಗೆ ಅವರ ಜನ್ಮದಿನದ ಪ್ರಯುಕ್ತ  ಜೈ ಕನ್ನಡಿಗರ…

17 hours ago

ಕಾರಾಗೃಹದ ಬಂದಿಗಳಿಗೆ ಮನಃ ಪರಿವರ್ತನೆಗೊಳ್ಳುವ ಚಲನ ಚಿತ್ರ ಸ್ಕ್ರೀನ್

ಕಲಬುರಗಿ; ಕಾರಾಗೃಹದ ಬಂದಿಗಳಿಗೆ ಉಚಿತವಾಗಿ ಅದಾನಿ ಸಕ್ಷಮ ಸ್ಕಿಲ್ ಡೆವಲಪ್‍ಮೆಂಟ್, ವಾಡಿ ಹಾಗೂ ಕೇಂದ್ರ ಕಾರಾಗೃಹದ ಸಹಯೋಗದೊಂದಿಗೆ ಬಂದಿಗಳ ಮನಃ…

17 hours ago