ಬಿಸಿ ಬಿಸಿ ಸುದ್ದಿ

ಕಾಂಗ್ರೆಸ್ ಅಭ್ಯರ್ಥಿ ಮರತೂರ ಪರ ಬಿ.ಆರ್. ಪ್ರಚಾರ: ಸ್ಥಳೀಯ ಸಂಸ್ಥೆಗಳ ಸಮಸ್ಯೆಗೆ ಸ್ಪಂದಿಸುವ ವ್ಯಕ್ತಿಯನ್ನು ಆಯ್ಕೆ ಮಾಡಿ

ಆಳಂದ: ಮಾಡಿಯಾಳ ಗ್ರಾಮದಲ್ಲಿ ವಿಧಾನಪರಿಷತ್ ಚುನಾವಣೆಯ ನಿಮಿತ್ತ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಶಿವಾನಂದ ಪಾಟೀಲ್ ಪರ ಮಾಜಿ ಶಾಸಕ ಬಿ.ಆರ್. ಪಾಟೀಲ್ ಮತಯಾಚಿಸಿ ಮಾತನಾಡಿದರು. ಕೆಎಂಎಪ್. ನಿದೇರ್ಶಕ ಈರಣ್ಣಾ ಝಳಕಿ, ಸಿದ್ದರಾಮ ಪ್ಯಾಟಿ ಇತರರಿದ್ದರು.

ಆಳಂದ: ಸರ್ಕಾರದ ಸ್ಥಳೀಯ ಸಂಸ್ಥೆಗಳಾದ ಮಹಾನಗರ ಪಾಲಿಕೆ, ಪುರಸಭೆ, ಪಟ್ಟಣ ಮತ್ತು ಗ್ರಾಮ ಪಂಚಾಯತಗಳ ಬಗ್ಗೆ ಹೆಚ್ಚಿನ ಕಾಳಜಿವಹಿಸಿ ಸದನದಲ್ಲಿ ಮಾತನಾಡುವ ವ್ಯಕ್ತಿಗೆ ಮತ ನೀಡಿ ಚುನಾಯಿಸಬೇಕೆಂದು ಮಾಜಿ ಶಾಸಕ ಬಿ.ಆರ್. ಪಾಟೀಲ್ ಹೇಳಿದರು.
ತಾಲೂಕಿನ ಮಾಡಿಯಾಳ ಗ್ರಾಮದಲ್ಲಿ ವಿಧಾನಪರಿಷತ್ ಚುನಾವಣೆಯ ನಿಮಿತ್ತ ಕಾಂಗ್ರೆಸ್ ಪಕ್ಷ ಅಭ್ಯರ್ಥಿ ಶಿವಾನಂದ ಪಾಟೀಲ್ ಮರತೂರ ಅವರ ಪರ ಹಮಿಕೊಂಡ ಪ್ರಚಾರ ಕೈಗೊಂಡು ಮಾತನಾಡಿದರು.

ಶಿವಾನಂದ ಪಾಟೀಲ್ ಒಬ್ಬ ಸಾಮಾನ್ಯ ಕಾರ್ಯಕರ್ತ ಮತ್ತು ಗ್ರಾಮ ಪಂಚಾಯತದಿಂದ ಜಿಲ್ಲಾ ಪಂಚಾಯತವರೆಗೆ ಸ್ಪರ್ಧಿಸಿ ಜನ ಸೇವೆಗೈದಿದ್ದ ಅನುಭವವಿದೆ. ಆದರೆ ಅವರೋಬ್ಬ ಬಡ ಹಾಗೂ ಪ್ರ್ರಾಮಾಣಿಕ ವ್ಯಕ್ತಿ ಇವರನ್ನು ಯಾವುದೇ ಆಸೆ ಪಡದೆ ಹೆಚ್ಚಿನ ಮತ ನೀಡಬೇಕೆಂದು ಹೇಳಿದರು.

ಬಿ.ಜಿ. ಪಾಟೀಲ್ ಅವರು ಶ್ರೀಮಂತ ಅಭ್ಯರ್ಥಿ ಆದರೆ, ಕಳೆದ ಆರು ವರ್ಷದಲ್ಲಿ ಒಮ್ಮೆಯೂ ಸ್ಥಳೀಯ ಜನಪ್ರತಿನಿದಿಗಳ ಪರ ಮಾತನಾಡಿಲ್ಲ. ಯಾವುದೇ ಪಂಚಾಯತಿಗಳಿಗೆ ಭೇಟಿ ನೀಡಿಲ್ಲ. ಹೀಗಾಗಿ ಇವರಿಗೆ ಮತ ನೀಡಬಾರದು ಎಂದು ಹೇಳದರು. ಕೆಎಂಎಪ್ ನಿದೇರ್ಶಕ ಈರಣ್ಣಾ ಝಳಕಿ, ಜಿಪಂ ಮಾಜಿ ಸದಸ್ಯ ಸಿದ್ದರಾಮ ಪ್ಯಾಟಿ. ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಜೈಚೈತ್ರಾ ವೇದಶೆಟ್ಟಿ ಮಾತನಾಡಿದರು.

ಸತೀಷ ಪನಶೆಟ್ಟಿ, ಸಂಗಣ್ಣಾ ಮುದ್ದಡಗಿ, ಬಿ.ಜಿ.ಮಡ್ಡಿತೊಟ್, ರೇವಣಸಿದ್ದಪ್ಪ ಶ್ರೀಗಣಿ, ಶಂಕರ ಬಿರಾದಾರ, ಪ್ರಭಾಕರ ಬಿರಾದಾರ, ಶಿವಾಯೋಗಿ ಕೌಲಗಿ, ಭೀಮಾಶಂಕರ ನವಲಿ, ಭೀಮಾಶಂಕರ ಖೊಂಬಿನ, ಭವಾನೆಪ್ಪ ಕೌಲಗಿ, ಹಣಮಂತ ನಡಗೇರಿ ಭಾಗವಹಿಸಿದರು.
ಇದೆ ಸಂದರ್ಭದಲ್ಲಿ ಯಳಸಂಗಿ, ಹಿತ್ತಲಶಿರೂರ, ಹಡಲಗಿ ಗ್ರಾಪಂಗಳಲ್ಲಿ ಬಿ.ಆರ್. ಪಾಟೀಲ ಅವರು ಬೆಂಬಲಿಗರೊಂದಿಗೆ ಪ್ರಚಾರ ಕೈಗೊಂಡರು.

emedialine

Recent Posts

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

11 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

13 hours ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

20 hours ago

ಸಿದ್ದ ಶ್ರೀ ಕಾರ್ಖಾನೆ ಪ್ರಾರಂಭವಾಗುವರೆಗೂ ಹೋರಾಟ: ವೀರಣ್ಣ ಗಂಗಾಣಿ

ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…

20 hours ago

ದಕ್ಷಿಣ ಭಾರತ ಅಂತರ ವಿಶ್ವವಿದ್ಯಾಲಯ ಮಹಿಳೆಯರ ಕಬಡ್ಡಿ ಕ್ರೀಡಾಕೂಟಕ್ಕೆ ಆಯ್ಕೆ

ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…

21 hours ago

ಪ್ರಿಯಾಂಕ್ ಖರ್ಗೆ ಜನ್ಮದಿನ; ರಕ್ತದಾನ ಶಿಬಿರಕ್ಕೆ ಶಾಸಕ ಪಾಟೀಲ ಚಾಲನೆ

ಕಲಬುರಗಿ: ನಗರದ ವಾರ್ಡ ನಂ.51.ರ  ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…

1 day ago