ಬಿಜೆಪಿ ಅಭ್ಯರ್ಥಿ ಹಣದಿಂದ ಬಲಾಢ್ಯರು, ಕಾಂಗ್ರೆಸ್ ಹುರಿಯಾಳು ಪಂಚಾಯ್ತಿ ಪ್ರಪಂಚದ ಅನುಭವ ಇರುವವರು: ಅಜಯ್ ಸಿಂಗ್
ಜೇವರ್ಗಿ: ಕಲಬುರಗಿ- ಯಾದಗಿರಿ ಜಿಲ್ಲೆಗಳ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‍ಗೆ ನಡೆಯುತ್ತಿರುವ ಚುನಾವಣೆಯಲ್ಲಿ ಕಣದಲ್ಲಿ ಪುನರಾಯ್ಕೆ ಬಯಸಿರುವ ಬಿಜೆಪಿ ಅಭ್ಯರ್ಥಿ ಬಿಜಿ ಪಾಟೀಲರು 6 ವರ್ಷ ಹಿಂದೆ ಪರಿಷತ್‍ನಲ್ಲಿದ್ದರೂ ಪಂಚಾಯ್ತಿಗಳ ಬಗ್ಗೆ ತುಟಿ ಬಿಚ್ಚಿಲ್ಲ, ಬಿಜೆಪಿ ಅಭ್ಯರ್ಥಿ ಹಣದಿಂದ ಬಲಾಢ್ಯರೇ ಹೊರತು ಪಂಚಾಯ್ತಿಗಳ ಸಮಸ್ಯೆ ಅರಿವಿಲ್ಲ, ಆದರೆ ನಮ್ಮ ಕಾಂಗ್ರೆಸ್ ಹುರಿಯಾಳು ಶಿವಾನಂದ ಪಾಟೀಲ್ ಮರತೂರ್ ಇವರು ಅನುಭವಿಗಳು, ಪಂಚಾಯ್ತಿ ಪ್ರಪಂಚದ ಎಲ್ಲಾ ವಿಚಾರಗಲು ಗೊತ್ತಿರೋರು, ಇವರು ಪರಿಷತ್‍ನಲ್ಲಿ ನಿಮ್ಮ ಪ್ರತಿನಿಧಿಯಾಗಿದ್ದರೆ ನಿಮ್ಮೆಲ್ಲ ತೊಂದರೆಗಳಿಗೆ ಪರಿಹಾರ ನಿಶ್ಚಿತ ಎಂದು ವಿಧಾನಸಬೆ ವಿರೋಧ ಪಕ್ಷದ ಮುಖ್ಯ ಸಚೇತಕರು ಹಾಗೂ ಜೇವರ್ಗಿ ಶಾಸಕರೂ ಆಗಿರುವ ಡಾ. ಅಜಯ್ ಸಿಂಗ್ ಹೇಳಿದ್ದಾರೆ.
ಕಲಬುರಗಿ- ಯಾದಗಿರಿ ಜಿಲ್ಲೆಗಳ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‍ಗೆ ನಡೆಯುತ್ತಿರುವ ಚುನಾವಣೆಯಲ್ಲಿ ಕಣದಲ್ಲಿರುವ ಕಾಂಗ್ರೆಸ್ ಹುರಿಯಾಳು ಶಿವಾನಂದ ಪಾಟೀಲ್ ಮರತೂರ ಪರ ಜೇವರ್ಗಿ ತಾಲೂಕಿನ ಹಿಪ್ಪರಹಾ ಎಸ್ ಎನ್, ಮಂದೇವಾಲ, ರಂಜಣಗಿ ಗ್ರಾಮ ಪಂಚಾಯತಿಗಳಲ್ಲಿ ಮತದಾರರ ಸಭೆ ಮಾಡಿ ಬಿರುಸಿನ ಪ್ರಚಾರ ನಡೆಸಿ ಡಾ. ಅಜಯ್ ಸಿಂಗ್ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ಬಿಜೆಪಿ ಅಭಿವೃದ್ಧಿಯಲ್ಲೂ ರಾಜಕೀಯ ಮಾಡುತ್ತದೆ. ಕಾಂಗ್ರೆಸ್ ಶಾಸಕರಿಗೆ ಅನುದಾನ ನೀಡದೆ ವಂಚಿಸಿದೆ. ಇದಕ್ಕೆಲ್ಲ ಪಾಠ ಕಲಿಸಬೇಕಾದರೆ ಪರಿಷತ್‍ನಲ್ಲಿ ನೀವೆಲ್ಲವೂ ಕೈ ಬಲಪಡಿಸಬೇಕು, ಶಿವನಂದ ಪಾಟೀಲರಿಗೆ ಪ್ರಥಮ ಪ್ರಾಶಸ್ತ್ಯ ಮತ ಹಾಕಬೇಕು ಎಂದು ಕೋರಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ರಾಜಶೇಖರ್ ಸಿರಿ, ರುಕ್ಕುಂ ಪಟೇಲ್ ಇಜೇರಿ, ನೀಲಕಂಠ ಅವಂಟಿ, ರವಿ ಕೋಳಕೂರ, ಶಂಕರೆಪ್ಪಗೌಡ ಪಾಟೀಲ್ ಹರನೂರ,ಅನ್ನು ದೇಸಾಯಿ, ಬಹದ್ದೂರ್ ರಾಥೋಡ್, ವಿಜಯಕುಮಾರ್ ಪಾಟೀಲ್ ಕಲ್ಲಹಂಗರಗಾ, ಯುವ ಘಟಕದ ಅಧ್ಯP್ಷÀ ರಿಯಾಜ್ ಪಟೇಲ್, ಶಿವಲಿಂಗಪ್ಪ ಯರಗಲ್, ಶಿವಪುತ್ರಪ್ಪ ಕೋರಿ, ದತ್ತಪ್ಪ ಪುಜಾರಿ ಸೇರಿದಂತೆ ಸ್ಥಳೀಯ ಮುಖಂಡರು, ಕಾರ್ಯಕರ್ತರು ಭಾಗಿಯಾಗಿದ್ದರು.
ಕಳೆದ 3 ದಿನದಿಂದ ಜೇವರ್ಗಿ ಹಾಗೂ ಯಡ್ರಾಮಿ ತಾಲೂಕು ಸುತ್ತುತ್ತಿರುವ ಶಾಸಕರಾದ ಡಾ. ಅಜಯ್ ಸಿಂಗ್ ಈಗಾಗಲೇ 2 ಸುತ್ತು ಬಿರುಸಿನ ಪ್ರಚಾರ ಮಾಡಿದ್ದಾರೆ. ಜೇವರ್ಗಿ ಮತಕ್ಷೇತ್ರದಲ್ಲಿ ಬರುವ ಯಡ್ರಾಮಿ ವ್ಯಾಪ್ತಿಯ ಸುಂಬಡ, ವಡಗೇರಾ, ಕಾಚಾಪುರ, ಮಳ್ಳಿ, ಅ¯್ಲÁಪುರ, ಮಾಗಣಗೇರಾ, ಕುಳಗೇರಾ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಸಭೆ ಮಾಡಿ ಬಿರುಸಿನ ಪ್ರಚಾರ ನಡೆಸಿರುವ ಡಾ. ಅಜಯ್ ಸಿಂಗ್ ಡಿ. 4 ರ ಶನಿವಾರ ಜೇವರ್ಗಿ ಪಟ್ಟಣದಲ್ಲಿ ಡಾ. ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ಪರಿಷತ್ ಪ್ರಚಾರ ಸಭೆ ಆಯೋಜಿಸಿದ್ದಾರೆ.
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…