ಜೇವರ್ಗಿ: ನನ್ನ ಚುನಾವಣೆಯಲ್ಲಿ ಲೀಡರ್ಸ್ ಗಳೇ ಮೋಸ ಮಾಡಿದ್ದಾರೆ. ನಾನು ಕೇಂದ್ರ ರೈಲ್ವೆ ಮಂತ್ರಿಯಾಗಿದ್ದಾಗ ವಾಡಿಯಿಂದ ಗದಗದವರೆಗೆ ರೈಲ್ವೆ ಮಾರ್ಗ ಮಾಡಿದ್ದು ಜೇವರ್ಗಿ ಮುಖಂಡರು ಹೇಳಲೇ ಇಲ್ಲ. ಕನಿಷ್ಟ ಶಿವಾನಂದ ಪಾಟೀಲ ಅವರಿಗಾದರೂ ಗೆಲ್ಲಿಸಿ ಜೇವರ್ಗಿ ಮತದಾರರು ಪುಣ್ಯಕಟ್ಟಿಕೊಳ್ಳಿ ಎಂದು ರಾಜ್ಯಸಭೆಯ ವಿರೋದ ಪಕ್ಷದ ನಾಯಕ ಡಾ.ಮಲ್ಲಿಕಾರ್ಜುನ ಖರ್ಗೆ ಅವರು ಹೇಳಿದರು.
ಪಟ್ಟಣದ ಭೂತಪೂರ ಕಲ್ಯಾಣ ಮಂಟಪದಲ್ಲಿ ಶನಿವಾರ ಏರ್ಪಡಿಸಿದ್ದ ಜೇವರ್ಗಿ ವಿಧಾನಸಭೆ ಕ್ಷೇತ್ರದ ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್ ಚುನಾವಣೆ ನಿಮಿತ್ಯ ಏರ್ಪಡಿಸಿದ್ದ ಚುನಾವಣೆ ಪ್ರಚಾರ ಸಭೆ ಉದ್ಘಾಟಿಸಿ ಮಾತನಾಡಿದರು.
ನಾನು ಕಂದಾಯ ಮಂತ್ರಿ ಇದ್ದಾಗ ಗ್ರಾಮ ಪಂಚಾಯಿತಿ ಸದಸ್ಯರಿಗೆ ವಿಧಾನ ಪರಿಷತ್ ಗೆ ಮತದಾನ ಮಾಡುವ ಅವಕಾಶ ಕೊಡಿಸಿದ್ದೇನೆ. ಜಿಲ್ಲೆಗೆ ರೈಲ್ವೆˌ ಹೆದ್ದಾರಿˌ ಹೈಕೋರ್ಟ್ ಪೀಠˌ ನಾರಾಯಣಪುರ ಕಾಲುವೆ ಸೇರಿದಂತೆ ಹಲವು ಕಾಮಗಾರಿ ಮಾಡಿದ್ದೇನೆ. ನನಗೆ ಸೋಲಿಸಿದ್ದು ಯಾವ ಕಾರಣಕ್ಕಾಗಿ ಎಂಬುವುದು ಇಲ್ಲಿಯವರೆಗೆ ತಿಳಿದಿಲ್ಲ. ನನಗೆ ಸೋಲಿಸಿದವರನ್ನು ಬೈದರೆ ಸೇರಿದ ಹಾಲ್ ಖಾಲಿಯಾಗುತ್ತದೆ. ನನಗೆ ಸೋಲಿಸಿದ ಜನರಿಗೆ ಈಗ ಪಶ್ಚಾತಾಪ ಪಡುತ್ತಿದ್ದಾರೆ. ನನಗೆ ಸೋಲಿಸಿದ್ದನ್ನು ಮರೆಯಲು ಅಭ್ಯರ್ಥಿ ಶಿವಾನಂದ ಪಾಟೀಲ ಅವರಿಗೆ ಮತ ನೀಡಬೇಕು ಎಂದು ಮನವಿ ಮಾಡಿದರು.
ಶಾಸಕರಾದ ಡಾ.ಅಜಯಸಿಂಗ್, ಶರಣಬಸಪ್ಪ ದರ್ಶನಾಪುರˌ ಖನೀಜ್ ಫಾತಿಮಾ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಗದೇವ ಗುತ್ತೇದಾರ, ಮುಖಂಡರಾದ ಅಲ್ಲಮಪ್ರಭು ಪಾಟೀಲ, ಡಾ.ಶರಣಪ್ರಕಾಶ ಪಾಟೀಲ, ವಿಧಾನ ಪರಿಷತ್ ಚುನಾವಣೆ ಅಭ್ಯರ್ಥಿ ಶಿವಾನಂದ ಪಾಟೀಲˌ ಶಾಂತಗೌಡ ಪಾಟೀಲ ದುಮ್ಮದ್ರಿˌ ನೀಲಕಂಠರಾವ ಮೂಲಗೆˌ ಜಿಪಂ ಮಾಜಿ ಸದಸ್ಯ ಶಾಂತಪ್ಪ ಕೂಡಲಗಿˌ ಜೇವರ್ಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿದ್ದಲಿಂಗರೆಡ್ಡಿ ಇಟಗಿˌ ಯಡ್ರಾಮಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರುಕುಂಪಟೇಲ ಇಜೇರಿˌ ಶರಣಕುಮಾರ ಮೋದಿˌ ರಾಜಶೇಖರ ಸೀರಿˌ ಸಂಗಣ್ಣಗೌಡ ಪಾಟೀಲ ಗುಳ್ಯಾಳ ಹಾಗೂ ಗ್ರಾಪಂ ಅಧ್ಯಕ್ಷರುˌ ಸದಸ್ಯರುˌ ಪಟ್ಟಣ ಪಂಚಾಯತ ಸದಸ್ಯರು ಸೇರಿದಂತೆ ಇತರರು ಇದ್ದರು.
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…