ಬಿಸಿ ಬಿಸಿ ಸುದ್ದಿ

ಪಾರ್ಲಿಮೆಂಟ್ ಚುನಾವಣೆಯ ಸೇಡು ಎಂಎಲ್‍ಸಿ ಇಲೆಕ್ಷನ್‍ನಲ್ಲಿ ಗೆಲ್ಲಿಸಿ ತೀರಿಸಿಕೊಳ್ಳಿ- ಮತದಾರರಿಗೆ ಡಾ. ಖರ್ಗೆ ಕರೆ

ಕಲಬುರಗಿ/ಜೇವರ್ಗಿ: ನನ್ನನ್ನು ಚುನಾವಣೆಯಲ್ಲಿ ಸೋಲಿಸಿದ್ರಿ, ಅದಕ್ಕೆ ಕಾರಣ ಕೇಳಲು ಹೋಗಲ್ಲ, ನಾನು ನಂಬಿದ ತತ್ವ, ಸಿದ್ಧಾಂತಗಳೇ ನನ್ನ ಸೋಲಿಗೆ ಕಾರಣವಾದವು, ಈಗಿನ ಪರಿಷತ್ ಪೈಪೆÇೀಟಿಯಲ್ಲಿ ಕಾಂಗ್ರೆಸ್ಸಿಗರೆಲ್ಲರು ನಿಮ್ಮ ಸ್ವಾಭಿಮಾನ ಪ್ರದರ್ಶನ ಮಾಡಿರಿ, ಆ ಮೂಲಕ ಕಣಲ್ಲಿರುವ ಸಾಮಾನ್ಯ ರಾಜಕೀಯ ಕಾರ್ಯಕರ್ತ ಶಿವಾನಂದನನ್ನು ಗೆಲ್ಲಿಸಿ ಪಾರ್ಲಿಮಂಟ್ ಚುನಾವಣೆಯಲ್ಲಿನ ನನ್ನ ಸೋಲಿನ ಸೇಡು ತೀರಿಸಿಕೊಳ್ಳಿ ಎಂದು ಸ್ಥಳೀಯ ಸಂಸ್ಥೆಯ ಸದಸ್ಯರಿಗೆ ರಾಜ್ಯ ಸಭೆಯಲ್ಲಿ ವಿರೋಧ ಪÀದ ನಾಯಕರಾದ  ಮಲ್ಲಿಕಾರ್ಜುನ ಖರ್ಗೆ ಕರೆ ನೀಡಿದರು.

ಜೇವರ್ಗಿಯಲ್ಲಿ ಶನಿವಾರ ಭೂತಪುರ ಕಲ್ಯಾಣ ಮಂಟಪದಲ್ಲಿ ನಡೆದ  ಕಲಬುರಗಿ- ಯಾದಗಿರಿ ವಿಧಾನಪರಿಷತ್ ಚುನಾವಣೆ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.

ಕಾಂಗ್ರೆಸ್ಸಿಗರೆಲ್ಲರೂ  ಒಗ್ಗಟ್ಟಾಗಿ ಕೆಲಸ ಮಾಡಿ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಿರಿ, ಇದು ನಮ್ಮೆಲ್ಲರ ಸ್ವಾಭಿಮಾನದ ಚುನಾವಣೆ, ಕಾಂಗ್ರೆಸ್ ಪP್ಷÀ ಹಣವಂತರಿಗೆ ಮಣೆ ಹಾಕದೆ ಸಾಮಾನ್ಯ ಕಾರ್ಯಕರ್ತನನ್ನು ಚುನಾವಣೆಗೆ ನಿಲ್ಲಿಸಿದೆ. ನೀವೆಲ್ಲ ಒಗ್ಗಟ್ಟಾಗಿ ಕೆಲಸ ಮಾಡಿ ಗೆಲ್ಲಿಸಿರಿ ಎಂದು ಕರೆ ನೀಡಿದರು. ದಿಲ್ಲಿಯಲ್ಲಿ ಸಾಕಷ್ಟು ಕೆಲಸಗಲಿದ್ದರೂ ಕೂಡಾ ಸೋನಿಯಾ ಗಾಂಧಿಯವರನ್ನು ಕೇಳಿಕೊಂಡು ಪರಿಷತ್ ಚುನಾವಣೆಯಲ್ಲಿ ಪ್ರಚಾರ ಮಾಡಿ ಹೋಗೋಣವೆಂದು ಬಂದಿರುವೆ. ಈ ತುರುಸಿನ ಚುನಾವಣೆ ಗೆಲುವು ಕಾಂಗ್ರೆಸ್ಸಿಗೆ ತುಂಬ ಮುಖ್ಯವಾಗಿದೆ ಎಂದರು.

ನಾರಾಯಣಪುರ ಜಲಾಶಯ ಸೇರಿದಂತೆ ಅನೇಕ ನೀರಾವರಿ ಯೋಜನೆ ಮಾಡಿದವರುಕಾಂಗ್ರಂಸ್ಸಿಗರು, ಆದರೂ ಕೂಡಾ ಮೋದಿ- ,ಆ ಜೋಡಿ ಸತ್ತರ್ ಸಾಲ್ ಮೇಲ ಕ್ಯಾ ಕಿಯಾ ಅಂತಾರೆ? ಅವರಿಗೆ ನೀವೆ ಎಲ್ಲರು ಒಂದಾಗಿ ಕೇಳಿರೆಂದು ಸೇರಿದ್ದವರಿಗೆ ಕರೆ ನೀಡಿದರು.

ಆರ್ಟಿಕಲ್ 371 (ಒ) ಜಾರಿಯಾಗಲೂ ಯಾರು ಕಾರಣರು? ಬಿಜೆಪಿಯವರು ಇದನ್ನು ತಿರಸ್ಕರಿಸಿದ್ದರು, ಯೂಪಿಎ ಸರಕಾರವಿದ್ದಾಗ ನಾನೇ ಮುಂದೆ ನಿಂತು ಎಲ್ಲರ ಸಹಾಯ ಸಹಕಾರ ಪಡೆದು ಈ ತಿದ್ದುಪಡಿ ನಮಗೆ ದೊರಕುವಂತೆ ಮಾಡಿದೆ, ಸಂಸತ್ತಿನಲ್ಲಿ ಎಲ್ಲ ವಿವರವನ್ನು ದಾಖಲಿಸಿz್ದÁರೆ, ವಿಶೇಷ ಸ್ಥಾನಮಾನ ಸಿಕ್ಕ ನಂತರ ಈ ಭಾಗದ ಬಡ ಮಕ್ಕಳು ಡಾಕ್ಟರ್, ಇಂಜಿನಿಯರ್ ಆಗಿz್ದÁರೆ. ಇದಕ್ಕೆ ಕಾರಣ ಕಾಂಗ್ರೆಸ್ ಪಕ್ಷ ಎಂದರು.

ಇಡೀ ದೇಶದಲ್ಲಿಯೇ ಕರ್ನಾಟಕ ಹೊರತುಪಡಿಸಿ ಬೇರೆ ಯಾವ ರಾಜ್ಯದಲ್ಲಿಯೂ ಕೂಡಾ ಗ್ರಾಮಪಂಚಾಯತಿ ಸದಸ್ಯರಿಗೆ ವಿಧಾನಪರಿಷತ್ ಅಭ್ಯರ್ಥಿಗೆ ಮತದಾನದ ಹಕ್ಕು ನೀಡಿಲ್ಲ. ಆದರೆ ಕಾಂಗ್ರೆಸ್ ಪP್ಷÀದವರು ಸಂವಿಧಾನಕ್ಕೆ ತಿದ್ದುಪಡಿ ಮಾಡಿ ಗ್ರಾಮಪಂಚಾಯತಿ ಸದಸ್ಯರಿಗೆ ಮತದಾನದ ಹಕ್ಕು ಕೊಡಿಸಿz್ದÉೀವೆ ಇದು ಇತಿಹಾಸವಾಗಿ ಉಳಿದಿದೆ ಎಂದರು.

ಬಿಜೆಪಿ ಏನು ಸಾಧನೆ ಮಾಡಿದೆ ಎಂದು ಓಟು ಕೊಡಬೇಕು? ಕೋಮು ಭಾವನೆ ಕೇರಳಿಸೋದೇ ಅವರ ಕೆಲಸ, ಹಳ್ಳಿಯಿಂದ ದಿಲ್ಲಿ ವರೆಗೂ ಅದೇ ಕೆಲಸ ಮಾಡುತ್ತ ಹೊರಟಿz್ದÁರೆ, ಬಿಜೆಪಿಗೆ ಹಾಗೂ ಆ ಪಕ್ಷದ ಡಬ್ಬಲ್ ಇಂಜಿನ್ ಎಂದು ಹೇಳುತ್ತಿರುವ ಸರ್ಕಾರಕ್ಕೆ ನಾಚಿಕೆಯಾಗಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮೂರು ಕೃಷಿ ಕಾಯಿದೆಗಳ ವಿರುದ್ದ ನಾವು ಮಾತನಾಡಿದಾಗ ನಮ್ಮ ಮಾತನ್ನು ಮೋದಿ ಒಪ್ಪಲಿಲ್ಲ. ಈಗೇನಾಗದೆ, ಯಾವುದೇ ಚರ್ಚೆ ನಡೆಸದೆ ಕಳ್ಳರ ತರ ರಾತ್ರೋರಾತ್ರಿ ಕೃಷಿ ಕಾಯಿದೆಗಳನ್ನು ವಾಪಸ್ ಪಡೆದರು ಎಂದು ಟೀಕಿಸಿದರು.
—–
ಹಣವಂತ- ಗುಣವಂತರ ನಡುವಿನ ಕದನ- ಅಜಯ್ ಸಿಂಗ್

ಜೇವರ್ಗಿ ಶಸಾಕರು ಹಾಗೂ ವಿಧಾನ ಸಬೆ ವಿರೋಧ ಪಕ್ಷದ ಮುಖ್ಯ ಸಚೇತಕರಾದ ಡಾ. ಅಜಯ್ ಸಿಂಗ್ ಮಾತನಾಡುತ್ತ ವಿಧಾನ ಸಭೆ ವಿರೋಧ ಪP್ಷÀದ ಮುಖ್ಯ ಸಚೇತಕ, ಜೇವರ್ಗಿ ಶಾಸಕರು ಅದ ಡಾ ಅಜಯ್ ಸಿಂಗ್ ಮಾತನಾಡುತ್ತ ಇದು ಹಣವಂತ ಹಾಗೂ ಗುಣವಂತರ ನಡುವಿನ ಕದನ, ಬಿಜೆಪಿ ಅಭ್ಯರ್ಥಿ ಹಣವಂತರು, ಪಂಚಾಯತಿ ಬಗ್ಗೆ ಏನು ಗೊತ್ತಿಲ್ಲ, ಕಾಂಗ್ರೆಸ್ ಅಭ್ಯರ್ಥಿ ಶಿವಾನಂದ ಪಾಟೀಲ್ ಗುಣವಂತರು, ಪಂಚಾಯತಿ ಬಗ್ಗೆ ಗೊತ್ತಿದ್ದವರು, ಈ ಚುವನಾವಣೆಯಲ್ಲಿ ಗುಣವಂತರಿಗೆ ಮತÀ ಹಾಕಿ ಗೆಲ್ಲಿಸಿರಿ, ಹಣಮಂತವರಿಗೆ ತಕ್ಕ ಪಾಠ ಕಲಿಸಿರೆಂದರು.

ಇಲ್ಲಿ ಶಿವಾನಂದರೊಬ್ಬರೇ ಅಲ್ಲ, ಹಾಲಿ ಶಾಸಕರು, ಮಾಜಿ ಶಾಸಕರು, ಮುಖಂಡರೆಲ್ಲರೂ ಅಭ್ಯರ್ಥಿಯಾಗಿ ಕಣದಲ್ಲಿz್ದÉೀವೆ, ನಿಮ್ಮ ಆಶೀರ್ವಾದ ನಮ್ಮೆಲ್ಲರ ಮೇಲಿರರಲಿ ಎಂದರು.

ಈ ಸಲದ ಪರಿಷತ್ ಚುನಾವಣೆ ಸತ್ಯ ಹಾಗೂ ಅಸತ್ಯದ ನಡುವಿನ ಹೋರಾಟವಾಗಿದೆ. ಸ್ವಾಭಿಮಾನಿ ಮತದಾರರು ಸತ್ಯದ ಪರವಾಗಿ ಮತಚಲಾಯಿಸುವ ಮೂಲಕ ಅಸತ್ಯವನ್ನು ಸೋಲಿಸುವಂತೆ ಕರೆ ನೀಡಿದರು.

ಎಷ್ಟೇ ಹಣ ಹಂಚಿದರು ಹಾಗೂ ಬಂಗಾರ ಹಂಚಿದರೆ ಏನೂ ಪ್ರಯೋಜನವಾಗುವುದಿಲ್ಲ. ಮತದಾರರ ನಿರ್ಧಾರ ಬದಲಾಗುವುದಿಲ್ಲ. ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಲಿz್ದÁರೆ ಎಂದರು ವಿಶ್ವಾಸದಿಂದ ನುಡಿದರು.

ಕಾಂಗ್ರೆಸ್ ಪP್ಷÀ ಅಧಿಕಾರದಲ್ಲಿz್ದÁಗ ಪ್ರಧಾನಿ ಮೋದಿ ರಾಜ್ಯ ಸರ್ಕಾರವನ್ನು10% ಸರ್ಕಾರ ಎಂದು ಟೀಕಿಸಿದ್ದರು. ಈಗಿನ ಬಿಜೆಪಿ ಸರ್ಕಾರ 40% ಸರ್ಕಾರವಾಗಿದೆ. ಇದನ್ನು ಕಾಂಗ್ರೆಸ್ ಹೇಳುತ್ತಿಲ್ಲ, ಬದಲಿಗೆ ಗುತ್ತಿಗೆದಾರರ ಸಂಘವೇ ಈ ಬಗ್ಗೆ ಪ್ರಧಾನಿಗೆ ಪತ್ರ ಬರೆದಿz್ದÁರೆಂದು ಟೀಕಿಸಿದರು.

ಮಾಜಿ ಸಚಿವರಾದ ಡಾ ಶರಣಪ್ರಕಾಶ್ ಪಾಟೀಲ್ ಮಾತನಾಡಿ ಬಿಜೆಪಿ ಅಭ್ಯರ್ಥಿ ಹಣಬಲದಿಂದ ಗೆಲ್ಲುವ ಹುನ್ನಾರದಲ್ಲಿz್ದÁರೆ, ಸ್ವಾಭಿಮಾನ ಇದ್ದವರು ನೀವು, ನೀವೆಲ್ಲ ಬಿಜೆಪಿಯವರನ್ನು ಸೋಲಿಸಿ ಹಣವೇ ಮುಖ್ಯ ಅಲ್ಲ, ಗುಣ ಮುಖ್ಯ ಅಂಬೋದನ್ನ ಸಾಬೀತು ಮಾಡಿರಿ, ಕಾಂಗ್ರೆಸ್ ಗೆಲ್ಲಿಸಿರಿ ಅವರನ್ನು ಗೆಲ್ಲಿಸಿರಿ ಎಂದು ಕೋರಿದರು.

ಕಳೆದ ಬಾರಿ ಹಣದಿಂದಲೇ ಬಿಜಿ ಪಾಟೀಲ್ ಗೆದ್ದರು, ಸದಾ ಜನರ ನಡುವೆ ಇರುವತ್ತಿದ್ದ ಅಲ್ಲಂಪ್ರಭು ಪಾಟೀಲ್ ಸೋಲಾಯ್ತು. ಹಿಂದಿನ ತಪ್ಪು ಈಗ ಮರುಕಳಿಸೋದು ಬೇಡ. ನೀವು ಸ್ವಾಭಿಮಾನದಿಂದ ಮತ ಹಾಕಿರಿ ಎಂದರು.

ಕಾಂಗ್ರೆಸ್ ಅಭ್ಯರ್ಥಿಯಾದ ಶಿವಾನಂದ ಪಾಟೀಲ್ ಅವರು ಮಾತನಾಡಿ, ಕಾಂಗ್ರೆಸ್ ಪP್ಷÀದ ಅಭಿವೃದ್ದಿ ಆಧಾರದ ಮೇಲೆ ನನ್ನನ್ನು ಅಭ್ಯರ್ಥಿಯನ್ನಾಗಿ ಮಾಡಿz್ದÁರೆ. ತಳಮಟ್ಟದಿಂದ ಬೆಳೆದು ಬಂದ ನಾನು ಸ್ಥಳೀಯ ಸಂಸ್ಥೆಗಳಿಗೆ ನ್ಯಾಯ ಒದಗಿಸುವ ಉz್ದÉೀಶ ಹೊಂದಿz್ದÉೀನೆ. ಬಲ್ಲಿ ಹಣವಿಲ್ಲವಾದರೂ ಅನುಭವವಿದೆ, ಅದರಿಂದಲೇ ನಾನು ಪ್ರತಿ ಪಂಚಾಯ್ತಿ ಸದಸ್ಯನ ಹಿಂದಿರುತ್ತೇನೆಂದು ವಾಗ್ದಾನ ಮಾಡುವೆನೆಂದರು.

ಮಾಜಿ ಎಂ ಎಲ್ ಸಿ ಅಲ್ಲಮಪ್ರಭು ಪಾಟೀಲ ಮಾತನಾಡಿ ನೂರಾರು ಕೆಲಸ ಕಾಂಗ್ರೆಸ್ ಪಕ್ಷ ಮಾಡಿದೆ. ಧರಂಸಿಂಗ್, ಡಾ. ಖರ್ಗೆಯವರಂತೂ ಸಾಕಷ್ಟು ಕೆಲಸಗಳನ್ನು ಈ ಬಾಗದಲ್ಲಿ ಮಾಡಿದ್ದಾರೆ. ಆದರೂ ನಾವೇನು ಮಾಡಿಲ್ಲವೆಂಬಂತೆ ಬಿಂಬಿಸಲಾಗುತ್ತಿದೆ ಎಂ ಪ್ರಗತಿ ಕೆಲಸಗಳನ್ನೆಲ್ಲ  ಹೇಳುತ್ತ ಇಂತಹ ಕೆಲಸ ಮಾಡಿದವರಿಗೆ ಮತ ಕೊಟ್ಟು ಋಣಮುಕ್ತರಾಗಿರಿ ಎಂದು ಕರೆ ನೀಡಿದರು.

ಪಂಚಾಯ್ತಿ ಸದಸ್ಯರಿಗೆ ಮತದಾನದ ಹಕ್ಕು ಕೊಟ್ಟz್ದÉೀ ಕಾಂಗ್ಸ್ ಪಕ್ಷ, ಡಾ. ಖರ್ಗೆ ಈ ಬಗ್ಗೆ ಚಿಂತಿಸಜೆ ಹೋಗಿದ್ದಲ್ಲಿ ಈ ಕೆಲಸವಾಗುತ್ತಿರಲಿಲ್ಲ. ಈಗ ಪಕ್ಷಕ್ಕೆ ಮತ ಹಾಕಿ ಆ ಋಣ ತೀರಿಸುವ ಸಮಯ ಬಂದಿದೆ ಎಂದರು. ಶಾಸಕಿ ಕನೀಜ್ ಫಾತೀಮಾ, ಯಡ್ರಾಮಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರುಕ್ಕುಂ ಪಟೇಲ್ ಇಜೇರಿ, ಜೇವರ್ಗಿಯ ಬ್ಲಾಕ್ ಕಾಂಗ್ರೆಸ್‍ನ ಸಿದ್ದಲಿಂಗ ರೆಡ್ಡಿ ಮಾತನಾಡಿದರು.

ವೇದಿಕೆಯ ಮೇಲೆ ಡಿಸಿಸಿ ಅಧ್ಯP್ಷÀರಾದ ಜಗದೇವ ಗುತ್ತೇದಾರ, ನೀಲಕಂಠರಾವ್ ಮುಲಗೆ, ಶರಣು ಮೋದಿ ಹಾಗೂ ಮತ್ತಿತರಿದ್ದರು.

emedialine

Recent Posts

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

10 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

12 hours ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

19 hours ago

ಸಿದ್ದ ಶ್ರೀ ಕಾರ್ಖಾನೆ ಪ್ರಾರಂಭವಾಗುವರೆಗೂ ಹೋರಾಟ: ವೀರಣ್ಣ ಗಂಗಾಣಿ

ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…

19 hours ago

ದಕ್ಷಿಣ ಭಾರತ ಅಂತರ ವಿಶ್ವವಿದ್ಯಾಲಯ ಮಹಿಳೆಯರ ಕಬಡ್ಡಿ ಕ್ರೀಡಾಕೂಟಕ್ಕೆ ಆಯ್ಕೆ

ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…

19 hours ago

ಪ್ರಿಯಾಂಕ್ ಖರ್ಗೆ ಜನ್ಮದಿನ; ರಕ್ತದಾನ ಶಿಬಿರಕ್ಕೆ ಶಾಸಕ ಪಾಟೀಲ ಚಾಲನೆ

ಕಲಬುರಗಿ: ನಗರದ ವಾರ್ಡ ನಂ.51.ರ  ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…

1 day ago