ಶಹಾಬಾದ: ೧೨ನೇ ಶತಮಾನದಲ್ಲಿ ತಮ್ಮ ಕಾಯಕ ನಿ?ಯ ಮೂಲಕ ಶರಣ ಸಂಸ್ಕೃತಿಯಲ್ಲಿ ತಮ್ಮದೇ ಆದ ಅನುಭವ ಹೊಂದಿ ಬಸವಣ್ಣನವರ ಮೆಚ್ಚುಗೆಗೆ ಪಾತ್ರರಾದವರು ಶಿವಶರಣ ಮಾದಾರ ಚೆನ್ನಯ್ಯನವರು ಎಂದು ದಲಿತ ಮಾದಿಗ ಸಮನ್ವಯ ಸಮಿತಿ ರಾಜ್ಯಾಧ್ಯಕ್ಷ ಲಿಂಗರಾಜ ತಾರಫೈಲ್ ಹೇಳಿದರು.
ಅವರು ರವಿವಾರ ನಗರದ ಮಾದಾರ ಚೆನ್ನಯ್ಯ ನಗರದಲ್ಲಿ ದಲಿತ ಮಾದಿಗ ಸಮನ್ವಯ ಸಮಿತಿ ವತಿಯಿಂದ ಆಯೋಜಿಸಲಾದ ಶಿವಶರಣ ಮಾದಾರ ಚೆನ್ನಯ್ಯ ಜಯಂತ್ಯುತ್ಸವದಲ್ಲಿ ಮಾತನಾಡಿದರು.
ಅವರು, ಕಾಯಾ,ವಾಚಾ, ಮನಸಾ, ಶುದ್ಧಹಸ್ತರಾದ ಚೆನ್ನಯ್ಯನವರ ದಾರಿಯಲ್ಲಿ ನಾವೆಲ್ಲ ನಡೆಯಬೇಕಾಗಿದೆ ಎಂದರು. ಮಾಜಿ ನಗರಸಭೆಯ ಅಧ್ಯಕ್ಷ ಗಿರೀಶ ಕಂಬಾನೂರ ಮಾತನಾಡಿ, ಶರಣರು ಕೇವಲ ಒಂದು ವರ್ಗಕ್ಕೆ ಸೀಮಿತರಾದವರಲ್ಲ. ಸರ್ವ ಜನಾಂಗಕ್ಕೆ ಬೇಕಾದವರು. ಇಂಥವರು ಹಾಕಿಕೊಟ್ಟ ಒಳ್ಳೆಯ ಮಾರ್ಗದಲ್ಲಿ ನಾವೆಲ್ಲ ನಡೆಯಬೇಕಾಗಿದೆ ಎಂದರು.
ದಲಿತ ಮಾದಿಗ ಸಮನ್ವಯ ಸಮಿತಿ ಅಧ್ಯಕ್ಷ ಶಿವರಾಜ ಕೋರೆ ಮಾತನಾಡಿ, ಹಸಿದವನಿಗೆ ಅನ್ನ ನೀಡುವುದೇ ನಿಜವಾದ ಧರ್ಮ. ಅಂತೆಯೇ ಕಾಯಕ ಫಲದ ಸ್ವಲ್ಪ ಭಾಗ ದೀನ-ದಲಿತರಿಗೆ ನೀಡುವ ಪರಂಪರೆ ಯನ್ನು ಪಾಲಿಸಿದವರು ಮಾದಾರ ಚೆನ್ನಯ್ಯನವರು ಎಂದರು.
ಬಹುಮುಖಿ ಸಾಹಿತಿ ನಾಗಪ್ಪ ಬೆಳಮಗಿ ಮಾದಾರ ಚೆನ್ನಯ್ಯನವರ ಕುರಿತು ಗಾಯನ ಹಾಡಿದರು. ಹಾಜಪ್ಪ ಬಳಿಚಕ್ರ, ನಗರಸಭೆಯ ಸದಸ್ಯೆ ಪೀರಮ್ಮ.ಇ.ಪಗಲಾಪೂರ,ಚಂದ್ರಕಾಂತ ಉದಯಕರ್,ರಾಜೇಶ ಯನಗುಂಟಿಕರ್,ಭೀಮರಾಯ ಕನಗನಹಳ್ಳಿ, ಹಂಪಣ್ಣ ಉಳ್ಳಾಗಡ್ಡಿ ವೇದಿಕೆಯ ಮೇಲಿದ್ದರು. ರವಿ ಬೆಳಮಗಿ ನಿರೂಪಿಸಿ, ಸ್ವಾಗತಿಸಿದರು. ಯಲ್ಲಾಲಿಂಗ ಹೈಯ್ಯಾಳಕರ್ ವಂದಿಸಿದರು.
ಸರಕಾರ ಅನ್ಯ ಶರಣರ ಜಯಂತಿಗಳನ್ನು ಆಚರಣೆ ಮಾಡುವುದರ ಮೂಲಕ ಆಯಾ ಕುಲಬಾಂಧವರ ಏಳ್ಗೆಗಾಗಿ ಶ್ರಮಿಸುವ ಹಾಗೆ ಶರಣರಲ್ಲಿಯೇ ಶ್ರೇ? ಶರಣರಾಗಿರುವ ಮಾದಾರ ಚೆನ್ನಯ್ಯನವರ ಜಯಂತಿಯನ್ನು ಸರಕಾರವೇ ಆಚರಿಸುವುದರ ಮೂಲಕ ನಮ್ಮ ಸಮಾಜಕ್ಕೆ ನ್ಯಾಯ ಒದಗಿಸಬೇಕು-ಶರಣಬಸಪ್ಪ ಪಗಲಾಪೂರ ನಗರಸಭೆಯ ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷ
ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…
ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…
ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…
ಕಲಬುರಗಿ : ಒತ್ತಡದ ಬದುಕಿನಲ್ಲಿ ಸಂಗೀತ ಆಲಿಸುವುದರಿಂದ ಮಾನಸಿಕ ನೆಮ್ಮದಿ, ಶಾಂತಿ ದೊರೆಯಲು ಸಾಧ್ಯವಿದೆ. ಅನೇಕ ಜನ ಸಂಗೀತ ಕಲಾವಿದರಿಂದು…
ಕಲಬುರಗಿ; ಅಲ್ಪಸುಖಕ್ಕಾಗಿ ಯುವ ಜನತೆ ಮಾದಕ ಪದಾರ್ಥಗಳಿಗೆ ದಾಸರಾಗಿ ತಮ್ಮ ಜೀವನ ಹಾಳು ಮಾಡಿಕೊಳ್ಳಬಾರದು ಎಂದು ಜಿಲ್ಲಾ ತಂಬಾಕು ನಿಯಂತ್ರಣ…
ಸೇಡಂ (ಕಲಬುರಗಿ); ಜಿಲ್ಲೆಯ ಸೇಡಂನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನ ಕೊಡಮಾಡುವ `ಅಮ್ಮ ಪ್ರಶಸ್ತಿ’ 24ನೇ ವರ್ಷದ ಸಮಾರಂಭವು…