ಶಹಾಬಾದ: ಬಾಲ್ಯದಿಂದಲೇ ಜಾನಪದದ ಬಗ್ಗೆ ಆಸಕ್ತಿ ಹೊಂದಿದ ಪರಿಣಾಮ ನನ್ನ ಬದುಕಿಗೆ ಜಾನಪದವೇ ಜೀವಾಳ ಮತ್ತು ಜಾನಪದವೇ ಉಸಿರಾಗಿದೆ ಎಂದು ಜಾನಪದ ಕಲಾವಿದ ಹಾಗೂ ರಾಜ್ಯ ಪ್ರಶಸ್ತಿ ಪುರಸ್ಕೃತ ಗುರುರಾಜ ಹೊಸಕೋಟೆ ಹೇಳಿದರು.
ಅವರು ರವಿವಾರ ಭಂಕೂರ ಗ್ರಾಮದ ಬಸವ ಸಮಿತಿ ಶಾಲೆಗೆ ಬೇಟಿ ನೀಡಿದ ಸಂದರ್ಭದಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ದೇವರು ಜನಪದ ಹಾಡನ್ನು ಬರೆಯುವ ವಿಶೇಷ ಶಕ್ತಿ ನೀಡಿದ್ದಾನೆ.ಇಲ್ಲಿಯವರೆಗ ಸುಮಾರು ೪೫೦೦ ಹಾಡುಗಳನ್ನು ಬರೆದಿದ್ದೆನೆ.ಸುಮಾರು ೬೦೩ ಕ್ಯಾಸೆಟ್‌ಗಳು ಹೊರಬಂದಿವೆ.ಹಲವಾರು ಚಲನಚಿತ್ರಗಳ ಹಾಡನ್ನು ಹಾಡಿದ್ದೆನೆ.ಚಲನಚಿತ್ರಗಳಲ್ಲಿ ನಟಿಸಲು ಅವಕಾಶವೂ ಸಿಕ್ಕಿದೆ.ಆದರೆ ನಾನು ಬರೆದಿರುವ ಹಾಡಿಗೆ ಎಂದು ನನ್ನ ಹೆಸರನ್ನು ಎಲ್ಲೂ ಹಾಕಿಕೊಂಡಿಲ್ಲ.
ನಾನು ಬರೆದಿದ್ದೆನೆ ಎನ್ನುವುದಕ್ಕೆ ಕ್ಯಾಸೆಟ್ ಕಂಪನಿವರಿಗೆ ಮಾತ್ರ ಗೊತ್ತಿದೆ.ಜಾನಪದ ಹಾಡು ನನ್ನನ್ನು ಬಹು ಎತ್ತರಕ್ಕೆ ತೆಗೆದುಕೊಂಡಿದ್ದು ಹೋಗಿದೆ.ಅಲ್ಲದೇ ಅದರಿಂದ ಕರ್ನಾಟಕದ ತುಂಬೆಲ್ಲಾ ಸುತ್ತಾಡಿದ್ದೆನೆ.ಶಾಲಾ ಮಕ್ಕಳು ಬಾಯಿಂದ ಬಾಯಿಗೆ ಪಸರಿಸಿದ ಜಾನಪದವನ್ನು ಉಳಿಸಿಸ ಬೆಳೆಸುವ ಕಾರ್ಯದಲ್ಲಿ ತೊಡಬೇಕಿದೆ.ಅಲ್ಲದೇ ಒಳ್ಳೆಯ ಮಾರ್ಗದಲ್ಲಿ ನಡೆಯುವಂತ ವ್ಯಕ್ತಿಗಳಾಗಬೇಕೆಂದು ಹಾರೈಸಿದರು.
ಭಂಕೂರ ಗ್ರಾಪಂ ಸದಸ್ಯ ಈರಣ್ಣ ಕಾರ್ಗಿಲ್ ಮಾತನಾಡಿ, ಜಾನಪದ ಗಾರುಡಿಗ ಗುರುರಾಜ ಹೊಸಕೋಟೆ ಅವರು ಭಂಕೂರ ಗ್ರಾಮಕ್ಕೆ ಬಂದಿರುವುದು ನಮಗೆಲ್ಲರಿಗೂ ಸಂತಸ ತಂದಿದೆ.ದಿನನಿತ್ಯ ಮಾತನಾಡುವ ಹಾಗೂ ವ್ಯವಹರಿಸುವ ಭಾಷೆಯನ್ನು ಅಷ್ಟೇ ಅಚ್ಚುಕಟ್ಟಾಗಿ ಹಾಡುಗಳಾಗಿ ರಚನೆ ಮಾಡಿ ಹಾಡುವ ಕಲೆ ಅವರಿಗೆ ಮಾತ್ರ ದೇವರು ನೀಡಿದ್ದಾನೆ.ಅವರು ಜಾನಪದ ಹಾಡುಗಳ ಮೂಲಕವೇ ಇಂದು ಮನೆಮಾತಾಗಿದ್ದಾರೆ ಎಂದರು.
ಬಸವ ಸಮಿತಿ ಅಧ್ಯಕ್ಷ ಅಮೃತ ಮಾನಕರ್ ಮಾತನಾಡಿ, ಜಾನಪದ ಮಾಂತ್ರಿಕ ಗುರುರಾಜ ಹೊಸಕೋಟೆ ಅವರು ನಮ್ಮ ಸಂಸ್ಥೆಗೆ ಬಂದಿರುವುದು ನಮ್ಮ ಸೌಭಾಗ್ಯ.ಅವರು ಸಮಾಜದ ಓರೆ ಕೋರೆಗಳ ತಿದ್ದುವ ಜಾನಪದ ಹಾಡುಗಳು, ತಾಯಿಯ ಮೌಲ್ಯ, ತಾಯಿಯ ಋಣ ಹಾಗೂ ಸಮಾಜಿಕ ಕಳಕಳಿಯ ಹಾಡುಗಳು ಇಂದಿಗೂ ಮನತಟ್ಟುತ್ತವೆ ಎಂದು ಹೇಳಿದರು.
ಕಲಾವಿದ ನಾಗಣ್ಣ ಹಳ್ಳಿ ಮಾತನಾಡಿದರು. ಭಂಕೂರ ಗ್ರಾಂದ ಗಣ್ಯರಾದ ಚನ್ನವೀರಪ್ಪ ಪಾಟೀಲ, ಭಂಕೂರ ಗ್ರಾಪಂ ಸದಸ್ಯ ಲಕ್ಷ್ಮಿಕಾಂತ ಕಂದಗೂಳ ವೇದಿಕೆಯ ಮೇಲಿದ್ದರು.
ನಂತರ ಗುರುರಾಜ ಹೊಸಕೋಟೆ ಅವರು ಮಗ ಹುಟ್ಯಾನಮ್ಮ, ನನಗೊಬ್ಬ ಮಗ ಹುಟ್ಯಾನಮ್ಮ ಹಾಗೂ ನನ್ನ ಕರುಳಿನ ಕುಡಿ ನೀನು ಹಾಡುಗಳನ್ನು ಹಾಡಿ ನೆರೆದವರನ್ನು ರಂಜಿಸಿದರು.
ಅಮರಪ್ಪ ಹೀರಾಳ, ಶಾಂತಪ್ಪ ಬಸಪಟ್ಟಣ,ಹಣಮಂತರಾವ ದೇಸಾಯಿ, ಚಂದ್ರಕಾಂತ ಅಲಮಾ,ಮಹಾದೇವ ಮಾನಕರ್,ವೀರಭದ್ರಪ್ಪ ಕಲಶೆಟ್ಟಿ, ಶಿವರಾಜ ಹಡಪದ,ಯಲ್ಲಾಲಿಂಗ ನಾಗೂರೆ, ಮಲ್ಲಿಕಾರ್ಜುನ ಘಾಲಿ, ವೀಣಾ ನಾರಾಯಣ, ರಮೇಶ ಅಳ್ಳೊಳ್ಳಿ,ದತ್ತಾತ್ರೇಯ ಕುಲಕರ್ಣಿ ಸೇರಿದಂತೆ ಶಾಲಾ ಶಿಕ್ಷಕರು ಅನೇಕರು ಇದ್ದರು.
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…
ಕಲಬುರಗಿ: ಕರ್ನಾಟಕ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಚಿವ ಪ್ರಿಯಾಂಕ್ ಖರ್ಗೆ ಅವರ ಜನ್ಮದಿನದ ಪ್ರಯುಕ್ತ ಜೈ ಕನ್ನಡಿಗರ…