ಬೆಳಗಾವಿ: ಶಾಸಕರು ಮಾಸ್ಕ್ ಧರಿಸದೆ, ವೀರಾವೇಶದಿಂದ ಮರಾಠಿ ಭಾಷೆಯಲ್ಲಿ ಭಾಷಣ ಬಿಗಿಯುತ್ತಿದ್ದಾರೆ. ಅವರ ಭಾಷಣ ಕೇಳುತ್ತಿದ್ದರೆ, ಇದು ಕರ್ನಾಟಕವಾ ಅಥವಾ ಮಹಾರಾಷ್ಟವಾ ಎಂಬ ಗೊಂದಲ ಮೂಡುತ್ತದೆ. ಸರಿ ಇನ್ನು ವೇದಿಕೆ ಮೇಲೆ ಕುಳಿತಿರುವ ಜನರನ್ನು ನೋಡಿ, ಅವರಲ್ಲಿ ಒಂದಿಬ್ಬರು ಮಾತ್ರ ಮಾಸ್ಕ್ ಧರಿಸಿದ್ದಾರೆ.
ಕಾಂಗ್ರೆಸ್ ಪಕ್ಷ ಮೇಕೆದಾಟು ಯೋಜನೆ ಶೀಘ್ರ ಅನುಷ್ಠಾನ ಆಗ್ರಹಿಸಿ ನಡೆಸಿದ ಪಾದಯಾತ್ರೆಯನ್ನು ಕೇವಲ ಕರ್ನಾಟಕ ಮಾತ್ರವಲ್ಲ ಇಡೀ ದೇಶದಲ್ಲೇ ಖಂಡಿಸಲಾಯಿತು. ಕೋವಿಡ್ ಪ್ರಕರಣಗಳು ಮಿತಿಮೀರಿ ಹೆಚ್ಚುತ್ತಿದ್ದರೂ ಕೋರ್ಟ್ ಛೀಮಾರಿ ಹಾಕುವವರೆಗೆ 4-ದಿನಗಳ ಕಾಲ ನಡೆದ ಪಾದಯಾತ್ರೆಯಲ್ಲಿ ಸಾವಿರಾರು ಜನ ಭಾಗವಹಿಸಿದ್ದರು. ಕೋರ್ಟ್ ಆದೇಶಕ್ಕನುಗುಣವಾಗಿ ಕಾಂಗ್ರೆಸ್ ಪಾದಯಾತ್ರೆ ನಿಲ್ಲಿಸಿದ್ದು ಎಲ್ಲ ರಾಜಕೀಯ ಒಂದು ಮಾದರಿಯಾಗುತ್ತದೆ ಅಂತಲೇ ಎಲ್ಲರೂ ಭಾವಿಸಿದ್ದರು. ಆದರೆ, ನಮ್ಮ ರಾಜಕಾರಣಿಗಳು ದಪ್ಪ ಚರ್ಮದವರು ಮಾರಾಯ್ರೇ, ಅವರಿಗೆ ಬುದ್ಧಿಮಾತು ಬೇಗ ಅರ್ಥವಾಗುವುದಿಲ್ಲ, ತಲೆಗೆ ಹೋಗುವುದಿಲ್ಲ. ಇದನ್ನು ಯಾಕೆ ಹೇಳಬೇಕಾಗಿದೆಯೆಂದರೆ, ಶುಕ್ರವಾರದಂದು ಬಿಜೆಪಿಯ ಶಾಸಕ ಅನಿಲ ಬೆನಕೆ ಅವರು ಬೆಳಗಾವಿಯ ಚವ್ಹಾಟ್ನಲ್ಲಿ ಎಮ್ಮೆ ಓಡಿಸುವ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ವಿಡಿಯೋ ನೋಡಿ. ಶಾಸಕರು ಮಾಸ್ಕ್ ಧರಿಸದೆ, ವೀರಾವೇಶದಿಂದ ಮರಾಠಿ ಭಾಷೆಯಲ್ಲಿ ಭಾಷಣ ಬಿಗಿಯುತ್ತಿದ್ದಾರೆ. ಅವರ ಭಾಷಣ ಕೇಳುತ್ತಿದ್ದರೆ, ಇದು ಕರ್ನಾಟಕವಾ ಅಥವಾ ಮಹಾರಾಷ್ಟವಾ ಎಂಬ ಗೊಂದಲ ಮೂಡುತ್ತದೆ. ಸರಿ ಇನ್ನು ವೇದಿಕೆ ಮೇಲೆ ಕುಳಿತಿರುವ ಜನರನ್ನು ನೋಡಿ, ಅವರಲ್ಲಿ ಒಂದಿಬ್ಬರು ಮಾತ್ರ ಮಾಸ್ಕ್ ಧರಿಸಿದ್ದಾರೆ.
ಅದಾದ ಮೇಲೆ ಸ್ಫರ್ಧೆ ನಡೆಯುತ್ತಿರುವ ಸ್ಥಳವನ್ನೊಮ್ಮೆ ನೋಡಿ. ಜನ ಜಾತ್ರೆಯಂತೆ ನೆರೆದಿದ್ದಾರೆ. ಕೆಲವೇ ಕೆಲವು ಜನರ ಮುಖದ ಮೇಲೆ ಮಾಸ್ಕ್ ಕಾಣಿಸುತ್ತಿದೆ. ದೈಹಿಕ ಅಂತರ ಕಾಯ್ದುಕೊಳ್ಳುವ ನಿಯಮ ಇಲ್ಲಿ ಯಾರಿಗೂ ಗೊತ್ತಿಲ್ಲ. ಬೆಳಗಾವಿ ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿವೆ. ಜನರಿಗೆ ಸೋಂಕಿನ ಬಗ್ಗೆ ಕಿಂಚಿತ್ತೂ ಭಯವಿದ್ದಂತಿಲ್ಲ.
ಬೇಜವಬ್ದಾರಿತನದ ಪರಮಾವಧಿ ಇದು. ಅವರು ಆರಿಸಿ ಕಳಿಸಿದ ಪ್ರತಿನಿಧಿಗೆ ಅದರ ಪರಿವೆ ಇಲ್ಲ ಅಂತಾದರೆ ಜನರಲ್ಲಿ ಅದು ಹೇಗೆ ಹುಟ್ಟೀತು, ಬಹಳ ಸರಳ ವಿಷಯವಿದು.
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…
ಕಲಬುರಗಿ: ಕರ್ನಾಟಕ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಚಿವ ಪ್ರಿಯಾಂಕ್ ಖರ್ಗೆ ಅವರ ಜನ್ಮದಿನದ ಪ್ರಯುಕ್ತ ಜೈ ಕನ್ನಡಿಗರ…
ಕಲಬುರಗಿ; ಕಾರಾಗೃಹದ ಬಂದಿಗಳಿಗೆ ಉಚಿತವಾಗಿ ಅದಾನಿ ಸಕ್ಷಮ ಸ್ಕಿಲ್ ಡೆವಲಪ್‍ಮೆಂಟ್, ವಾಡಿ ಹಾಗೂ ಕೇಂದ್ರ ಕಾರಾಗೃಹದ ಸಹಯೋಗದೊಂದಿಗೆ ಬಂದಿಗಳ ಮನಃ…