ಬಿಸಿ ಬಿಸಿ ಸುದ್ದಿ

ಜಿಗಡಾ ಶ್ರೀಮಠದ ೩೦ ಎಕರೆ ಪ್ರವಾಸಿ ಮಾದರಿ ಕೆರೆ ನಿರ್ಮಾಣಕ್ಕೆ ಒಪ್ಪಿಗೆ

ಆಳಂದ: ತಾಲೂಕಿನ ಜಿಡಗಾ ನವಕಲ್ಯಾಣ ಮಠದ ೩೦ ಎಕರೆ ಪ್ರದೇಶದಲ್ಲಿ ಶ್ರೀಮಠದ ಪ್ರಸ್ತಾಪಿತ ಪ್ರವಾಸಿ ತಾಣ ಮಾದರಿ ಕೆರೆ ನಿರ್ಮಾಣ ಕಾರ್ಯಕ್ಕೆ ಕರ್ನಾಟಕ ನೀರಾವರಿ ನಿಗಮದ (ನಿ), ವ್ಯವಸ್ಥಾಪಕ ನಿರ್ದೇಶಕ ಮಲ್ಲಿಕಾರ್ಜುನ ಗುಂಗೆ ಅವರು ಸಹಮತ ಸೂಚಿಸಿದರು.

ಶನಿವಾರ ಜಿಡಗಾ ನವಕಲ್ಯಾಣ ಮಠಕ್ಕೆ ನಿಗಮದ ಅಧಿಕಾರಿಗಳೊಂದಿಗೆ ಭೇಟಿ ನೀಡಿದ ಬಳಿಕ ಶ್ರೀಮಠದ ಪೀಠಾಧಿಪತಿ ಷಡಕ್ಷರಿ ಶಿವಯೋಗಿ ಡಾ. ಮುರುಘರಾಜೇಂದ್ರ ಮಹಾಸ್ವಾಮಿಗಳಿಂದ ದರ್ಶನಾಶೀರ್ವಾದ ಪಡೆದ ಬಳಿಕ ಅವರು ಶ್ರೀಗಳೊಂದಿಗೆ ಚರ್ಚಿಸಿದರು. ಈ ಕೆರೆ ನಿರ್ಮಾಣದ ಕಾರ್ಯ ಕೈಗೆತ್ತಿಕೊಳ್ಳುವ ಬಗ್ಗೆ ನೀಲಿ ನಕ್ಷೆ ಹಾಗೂ ಅಂದಾಜು ಪಟ್ಟಿ ಸಿದ್ಧಪಡಿಸಿ ಕಾರ್ಯಗತಗೊಳಿಸಲಾಗುವುದು ಎಂದರು.

ಇದೇ ವೇಳೆ ಶ್ರೀಗಳು ಪ್ರಸ್ತಾಪಿಸಿ, ಶ್ರೀಮಠದಿಂದ ಕೆರೆ ನಿರ್ಮಾಣದ ಸಂಕಲ್ಪವಿದೆ. ಇದರಿಂದ ಕೃಷಿಗೆ ನೆರೆಹೊರೆಯುವರಿಗೆ ಅಂತರ್ಜಲ ವೃದ್ಧಿ ಹಾಗೂ ಭವಿಷ್ಯದಲ್ಲಿ ಶ್ರೀಮಠ ಉದ್ದೇಶಿತ ೨೦೦೧ ಗೋವು ರಕ್ಷಣೆ, ಸಾವಿರ ಬಡ ಮಕ್ಕಳಿಗೆ ಉಚಿತ ವಸತಿ ಸಹಿತ ಶಿಕ್ಷಣದಂತ ಲೋಕಪಯೋಗಿ ಕಾರ್ಯಕ್ಕೆ ನೀರಿನ ಅಗತ್ಯವಾಗಲಿದ್ದು, ಜೊತೆಗೆ ಹಸಿರು ಪರಿಸರ ಅರಣ್ಯೀಕರಣಕ್ಕೆ ಅನುಕೂಲವಾಗುತ್ತದೆ. ಪ್ರವಾಸಿತಾಣ ಉದ್ಯಾನವನ ಮಾದರಿ ಹಾಗೂ ಕೆರೆಯಲ್ಲಿ ಲಿಂ| ಷಡಕ್ಷರಿ ಶಿವಯೋಗಿ ಸಿದ್ಧರಾಮರ ೭೬ ಅಡಿ ಎತ್ತರದ ಬೃಹತ್ ಪ್ರತಿಮೆ ಸ್ಥಾಪನೆಗೆ ಉದ್ದೇಶಿಸಲಾಗಿದೆ. ಉದ್ದೇಶಿತ ಈ ಕೆರೆಗೆ ನೀರಿನ ಮೂಲವಾಗಿ ಭೀಮಾನದಿಯಿಂದ ಅಮರ್ಜಾಕ್ಕೆ ನೀರು ತರುವ ಯೋಜನೆ ಜಾಲ್ತಿಯಲಿದೆ.

ಇದೇ ಮಾರ್ಗದಲ್ಲಿ ಕೆರೆಯ ಜಾಗವಿದ್ದರಿಂದ ಆ ನೀರು ತುಂಬಿಸಿಕೊಳ್ಳಲು ಅನುಕೂಲವಾಗುತ್ತಿದೆ. ಆರಂಭಿಕವಾಗಿ ಕೆರೆ ನಿರ್ಮಾಣಕ್ಕಾಗಿ ೧೨ ಎಕರೆ ಜಾಗವನ್ನು ಬಿಟ್ಟುಕೊಡಲಾಗಿತ್ತು. ಆದರೆ ಇನ್ನಷ್ಟು ಜಾಗದ ಅವಶ್ಯಕತೆ ಮನಗಂಡು ಇನ್ನೂ ೧೮ ಎಕರೆ ಸೇರಿ ಒಟ್ಟು ೩೦ ಎಕರೆ ಪ್ರದೇಶ ಒದಗಿಸಲು ಬದ್ಧವಾಗಿದ್ದು, ಈ ಕಾಮಗಾರಿ ಕೈಗೆತ್ತಿಕೊಳ್ಳಲು ಅವಕಾಶವಿದೆ ಎಂದು ವ್ಯವಸ್ಥಾಪಕರಿಗೆ ಶ್ರೀಗಳು ಸಲಹೆ ನೀಡಿದರು.

ಈ ಕುರಿತು ೩೦ ಎಕರೆ ಪ್ರದೇಶದಲ್ಲಿ ವಿಸ್ತೃತವಾಗಿ ನೀಲಿ ನಕ್ಷೆ ಹಾಗೂ ಅಂದಾಜು ಪಟ್ಟಿ ಸಿದ್ಧಪಡಿಸಿ ಮುಂದಿನ ಕಾರ್ಯಕೈಗೆತ್ತಿಕೊಳ್ಳಲಾಗುವುದು ನಿರ್ದೇಶಕ ಮಲ್ಲಿಕಾರ್ಜುನ ಅವರು ಒಪ್ಪಿಗೆ ಸೂಚಿಸಿದರು.

ಈ ಸಂದರ್ಭದಲ್ಲಿ ನಿಗಮದ ಅಧೀಕ್ಷಕ ಅಭಿಯಂತರ ವಿಲಾಸಕುಮಾರ ಮಾಹಾಶೆಟ್ಟಿ, ಕಲಬುರಗಿ ಐಪಿಸಿ ವಿಭಾಗ-೧ ನಿಗಮದ ಕಾರ್ಯಪಾಲಕ ಅಭಿಯಂತರ ಸೂರ್ಯಕಾಂತ ಮಾಲೆ, ಶಾಖಾಧಿಕಾರಿ ಸತೀಶ ಉಪ್ಪಿನ್, ಸಹಾಯಕ ಕಾರ್ಯನಿರ್ವಹಕ ಅಭಿಯಂತರ ಲಕ್ಷ್ಮೀಕಾಂತ ಬಿರಾದಾರ, ಮುಖಂಡ ಅಭಿಷೇಕ ಅಲಂಪ್ರಭು ಪಾಟೀಲ, ಗುತ್ತಿಗೆದಾರ ಎಂ.ಎಸ್. ಪಾಟೀಲ, ಸಿದ್ಧಶ್ರೀ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ಬಸವರಾಜ ಹಿರೇಮಠ, ಸಿದ್ಧರಾಮ ಪಾಟೀಲ, ಶ್ರೀಮಠದ ಆಪ್ತಕಾರ್ಯದರ್ಶಿ ಬಸವರಾಜ ಚೌಪಾಟೆ, ಯಲ್ಲಾಲಿಂಗ ಸಲಗರ, ಶಿಕ್ಷಕ ಸಿದ್ಧರಾಮ ಯಾದವಾಡ ಮತ್ತಿತರು ಉಪಸ್ಥಿತರಿದ್ದರು.

emedialine

Recent Posts

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

11 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

14 hours ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

20 hours ago

ಸಿದ್ದ ಶ್ರೀ ಕಾರ್ಖಾನೆ ಪ್ರಾರಂಭವಾಗುವರೆಗೂ ಹೋರಾಟ: ವೀರಣ್ಣ ಗಂಗಾಣಿ

ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…

20 hours ago

ದಕ್ಷಿಣ ಭಾರತ ಅಂತರ ವಿಶ್ವವಿದ್ಯಾಲಯ ಮಹಿಳೆಯರ ಕಬಡ್ಡಿ ಕ್ರೀಡಾಕೂಟಕ್ಕೆ ಆಯ್ಕೆ

ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…

21 hours ago

ಪ್ರಿಯಾಂಕ್ ಖರ್ಗೆ ಜನ್ಮದಿನ; ರಕ್ತದಾನ ಶಿಬಿರಕ್ಕೆ ಶಾಸಕ ಪಾಟೀಲ ಚಾಲನೆ

ಕಲಬುರಗಿ: ನಗರದ ವಾರ್ಡ ನಂ.51.ರ  ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…

1 day ago