ಗಣರಾಜ್ಯೋತ್ಸವ ಪ್ರಮುಖ ಹಬ್ಬ: ಪಾಟೀಲ್

0
10

ಕಲಬುರಗಿ: ಈ ದಿನವು ನಮ್ಮ ದೇಶದ ಸಂವಿಧಾನವು ೧೯೫೦ ರಲ್ಲಿ ಜಾರಿಗೆ ಬಂದ ದಿನವಾಗಿದೆ. ಆದ್ದರಿಂದ ಭಾರತದ ಗಣರಾಜ್ಯೋತ್ಸವವನ್ನು ಜನವರಿ ೨೬ ರಂದು ಆಚರಿಸಲಾಗುತ್ತದೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಅಮರನಾಥ ಪಾಟೀಲ್ ಮಹಾಗಾಂವ ಹೇಳಿದರು.

ನಗರದ ಹೊರ ವಲಯದಲ್ಲಿರುವ ಅವರಾದ (ಬಿ) ಗ್ರಾಮದಲ್ಲಿ ಕಲ್ಯಾಣ ಕರ್ನಾಟಕ ಗೋಶಾಲೆ ಆವರಣದಲ್ಲಿ ಗಣರಾಜ್ಯೋತ್ಸವ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಗಣರಾಜ್ಯೋತ್ಸವವು ಭಾರತದ ಮೂರು ರಾಷ್ಟ್ರೀಯ ಹಬ್ಬಗಳಲ್ಲಿ ಒಂದಾಗಿದೆ, ಅದಕ್ಕಾಗಿಯೇ ಇದನ್ನು ಪ್ರತಿಯೊಬ್ಬರೂ ಅತ್ಯಂತ ಗೌರವ ಮತ್ತು ಉತ್ಸಾಹದಿಂದ ಆಚರಿಸುತ್ತಾರೆ. ಜಾತಿ ಮತ್ತು ಪಂಗಡ ಯಾವುದೆ ಭೇದ ಬಾವ ವಿಲ್ಲದೆ ಆಚರಿಸಲಾಗುತ್ತದೆ ಎಂದರು.

Contact Your\'s Advertisement; 9902492681

ಈ ಸಂದರ್ಭದಲ್ಲಿ ಗೋಶಾಲೆ ಅಧ್ಯಕ್ಷ ಸಾದಿಕ್ ಅಲಿ ದೇಶಮುಖ್, ಕಾರ್ಯದರ್ಶಿ ಮಂಜುನಾಥ ನಾಲವಾರಕರ್, ಇಸಾಮುದ್ದಿನ್, ಗಫಾರ್, ನೂರುದ್ದಿನ್, ರಾಜನಾಥ ಸೇರಿದಂತೆ ಇನ್ನಿತರರು ಧ್ವಜಕ್ಕೆ ಗೌರವ ವಂದನೆ ಸಲ್ಲಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here