ಬಿಸಿ ಬಿಸಿ ಸುದ್ದಿ

ಉಸ್ಮಾನ್ ಗನಿ ಬಂಧನಕ್ಕೆ ಆಗ್ರಹಿಸಿ ಬೃಹತ್ ಪತಿಭಟನೆ

ಇಳಕಲ್ : ಭಾರತ ಮಾತೆ, ಗೋವು ಹಾಗೂ ಗಂಗಾ ನದಿಯ ಬಗ್ಗೆ ಎಐಎಂಐಎಂ ರಾಜ್ಯ ಘಟಕದ ಅಧ್ಯಕ್ಷ ಉಸ್ಮಾನ್ ಘನಿ ಹುಮನಾಬಾದ ಅಪಮಾನ ಮಾಡಿದ್ದಾರೆ. ಅವರನ್ನು ಕೂಡಲೇ ಬಂಧಿಸಿ ಗಡಿಪಾರು ಮಾಡುವಂತೆ ಆಗ್ರಹಿಸಿ ಹಿಂದೂ ಜಾಗರಣಾ ವೇದಿಕೆ ಹಾಗೂ ಬಿಜೆಪಿ ವತಿಯಿಂದ ನಗರದಲ್ಲಿ ಬೃಹತ್ ಪ್ರತಿಭಟನಾ ರ್‍ಯಾಲಿ ಹಮ್ಮಿಕೊಳ್ಳಲಾಗಿದೆ.

ಭಾರತ ಮಾತೆ, ಗೋವು ಹಾಗೂ ಗಂಗಾ ನದಿಯ ಬಗ್ಗೆ ಉಸ್ಮಾನ್ ಘನಿ ಮಾತನಾಡಿದ್ದಾರೆ ಎನ್ನಲಾದ ವಿಡಿಯೊ ಇತ್ತೀಚೆಗೆ ಜಿಲ್ಲೆಯಾದ್ಯಂತ ವೈರಲ್ ಆಗಿತ್ತು. ನಂತರ ಉಸ್ಮಾನ ವಿರುದ್ಧ ಇಳಕಲ್ ನಗರ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಆರೋಪಿ ತಲೆಮರೆಸಿಕೊಂಡಿದ್ದಾರೆ ಎನ್ನಲಾಗಿದೆ.

ನಗರದ ಅಜಾದ್ ಸರ್ಕಲ್ ಹತ್ತಿರದ ಪೊಲೀಸ್ ಮೈದಾನದಿಂದ ಆರಂಭವಾದ ಮೆರವಣಿಗೆ ತರಕಾರಿ ಮಾರುಕಟ್ಟೆ, ಮುಖ್ಯ ಬಜಾರ್, ಗಾಂಧಿ ಚೌಕ ಮಾರ್ಗವಾಗಿ ಕಂಠಿ ವೃತ್ತದವರೆಗೆ ಸಾಗಿದೆ.

ಅಕ್ಕಪಕ್ಕದ ಜಿಲ್ಲೆಗಳಿಂದಲೂ ಹಿಂದೂ ಸಂಘಟನೆಗಳ ಸಾವಿರಾರು ಕಾರ್ಯಕರ್ತರು ಇಳಕಲ್‌ಗೆ ಬಂದಿದ್ದು, ಇಡೀ ನಗರ ಕೇಸರಿಮಯವಾಗಿದೆ. ಕೋವಿಡ್‌ ಸುರಕ್ಷತಾ ನಿಯಮಾವಳಿ ಗಾಳಿಗೆ ತೂರಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.

ಮುನ್ನೆಚ್ಚರಿಕೆ ಕ್ರಮವಾಗಿ 600 ಕ್ಕೂ ಪೊಲೀಸ್ ಸಿಬ್ಬಂದಿ ನಿಯೋಜಿಸಿ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ. ಪ್ರಾರ್ಥನಾ ಮಂದಿರಗಳಿಗೆ ಪೊಲೀಸರ ಸರ್ಪಗಾವಲು ಹಾಕಲಾಗಿದೆ.

ಕಂಠಿ ವೃತ್ತದಲ್ಲಿ ರ್‍ಯಾಲಿ ಸಮಾವೇಶಗೊಳ್ಳಲಿದೆ. ಅಲ್ಲಿ ಹಿಂದೂ ಜಾಗರಣ ವೇದಿಕೆ ಮುಖಂಡ ಜಗದೀಶ ಕಾರಂತ ಮಾತನಾಡಲಿದ್ದಾರೆ. ಇಳಕಲ್ ನಗರಸಭೆ ಅಧ್ಯಕ್ಷ ಮಂಜುನಾಥ ಶೆಟ್ಟರ್ ಸೇರಿದಂತೆ ಬಿಜೆಪಿಯ ಚುನಾಯಿತ ಪ್ರತಿನಿಧಿಗಳು ರ್‍ಯಾಲಿಯಲ್ಲಿ ಪಾಲ್ಗೊಂಡಿದ್ದಾರೆ.

ರ್‍ಯಾಲಿ ಆರಂಭವಾಗುತ್ತಿದ್ದಂತೆಯೇ ವ್ಯಾಪಾರಸ್ಥರು ಸ್ವಯಂ ಪ್ರೇರಣೆಯಿಂದ ಅಂಗಡಿಗಳನ್ನು ಮುಚ್ಚಿದರು.

emedialine

Recent Posts

ಬಸವರಾಜ್ ಎಸ್ ಜಿಲಿಗೆ ಸನ್ಮಾನ ನಾಳೆ

ಕಲಬುರಗಿ; ಬಸವರಾಜ್ ಎಸ್ ಜಿಲಿ ಅಭಿಮಾನಿ ಬಳಗದ ವತಿಯಿಂದ ಡೆಪ್ಟಿ ಇನ್ಸ್ಪೆಕ್ಟರ್ ಜನರಲ್ ಆಫ್ ಪೊಲೀಸ್ ಕೆ ಎಸ್ ಆರ್…

33 mins ago

ಐಆರ್‌ಎಸ್‌ಒ ಕರ್ನಾಟಕ ರಾಜ್ಯ ಕಾರ್ಯಕರ್ತರ ಸಭೆ

ರಾಯಚೂರು; ಮಾರ್ಕ್ಸ್ ಭವನದಲ್ಲಿ ಎಐಆರ್‌ಎಸ್‌ಒ ಕರ್ನಾಟಕ ರಾಜ್ಯ ಮಟ್ಟದ ಕಾರ್ಯಕರ್ತರ ಸಭೆಯನ್ನು ಯಶಸ್ವಿಯಾಗಿ ನಡೆಸಲಾಯಿತು. ಕಾರ್ಯಕರ್ತರ ಸಭೆಯಲ್ಲಿ, ಕೇಂದ್ರ ಸಂಘಟನಾ…

54 mins ago

ಶೈಲಜಾ ಶರಣಗೌಡಗೆ ಪಿಎಚ್. ಡಿ. ಡಾಕ್ಟರೇಟ್ ಪದವಿ

ಕಲಬುರಗಿ: ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಶೋಧನಾ ವಿಭಾಗದ ವಿದ್ಯಾರ್ಥಿನಿ, ಶೈಲಜಾ ಶರಣಗೌಡ ಇವರು ಡಾ. ಶಾರದಾ ದೇವಿ ಎಸ್.…

56 mins ago

ಜನಪದ ಕಲಾವಿದರು ಸಮಾಜದ ಆಸ್ತಿ

ಕಲಬುರಗಿ; ಗ್ರಾಮೀಣ ಭಾಗದಲ್ಲಿ ಅನೇಕ ಜನ ಕಲಾವಿದರು ಹಗಲಿರುಳು ಸೇವೆಗೈದು ಜನಪದ ಉಳಿಸುವುದರೊಂದಿಗೆ ಸಮಾಜದ ಆಸ್ತಿಯಾಗಿದ್ದಾರೆ ಎಂದು ನ್ಯಾಯವಾದಿ ಹಣಮಂತರಾಯ…

1 hour ago

ಕಲಬುರಗಿ: ಸಿಸಿ ರಸ್ತೆ ಕಾಮಗಾರಿಗೆ ಚಾಲನೆ

ಕಲಬುರಗಿ: ಮಹಾನಗರ ಪಾಲಿಕೆ ವಾರ್ಡ್ ಸಂಖ್ಯೆ 15ರ ಫಿರದೋಸ್ ಕಾಲೋನಿ ಬಡಾವಣೆಯಲ್ಲಿ ಸಿಸಿ ರಸ್ತೆ ಕಾಮಗಾರಿಗೆ ಸೈಯದ್ ಮಿರಾಜೊದ್ದೀನ್ ಕಾಶೀಪ್…

3 hours ago

ಸಿಯುಕೆಯಲ್ಲಿ ರಾಷ್ಟ್ರೀಯ ಅಪ್ರೆಂಟಿಸ್‍ಶಿಪ್ ತರಬೇತಿ ಯೋಜನೆ ಕುರಿತು ಜಾಗೃತಿ

ಕಲಬುರಗಿ: "ನ್ಯಾಷನಲ್ ಅಪ್ರೆಂಟಿಸ್‍ಶಿಪ್ ಟ್ರೈನಿಂಗ್ ಸ್ಕೀಮ್ (ಓಂಖಿS) ಐಟಿಐ, ಪಿಯುಸಿ, ಡಿಪೆÇ್ಲೀಮಾ ಮತ್ತು ಪದವೀಧರರು ಸೇರಿದಂತೆ ತಾಂತ್ರಿಕ ಮತ್ತು ತಾಂತ್ರಿಕೇತರ…

4 hours ago