ಕಲಬುರಗಿ: ಮಹಾನಗರ ವ್ಯಾಪಿಯಲ್ಲಿ ಬರುವ ವಾರ್ಡ ನಂ. ೦೫ ಭವಾನಿ ನಗರ, ಕಾಕಡ ಚೌಕ ಕಲಬುರಗಿ ಮುಖ್ಯ ರಸ್ತೆಯಲ್ಲಿ ಬಸವೇಶ್ವರ ಮಹಾದ್ವಾರ ಅನಾಧಿಕೃತವಾಗಿ ಕಟ್ಟಡ ಮಾಡುತ್ತಿರುವದನ್ನು ತಡೆ ಹಿಡಿಯುವ ಕುರಿತು ಬಡಾವಣೆ ಮುಖಂಡರು ಮಹಾನಗರ ಪಾಲಿಕೆ ಆಯುಕ್ತರಿಗೆ ಸನ್ಮಾನಿಸಿ ಮನವಿ ಪತ್ರ ಸಲ್ಲಿಸಿದರು.
ನಗರದ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ವಾರ್ಡ ನಂ. ೦೫ ರ ಭವಾನಿ ನಗರ ಹಾಗೂ ಕಾಕಡೇ ಚೌಕ ಬಡವಾಣಿಯ ಮುಖ್ಯ ರಸ್ತೆಯಲ್ಲಿ ಬಸವೇಶ್ವರ ಮಹಾದ್ವಾರವು ಬಡವಾಣಿಯ ನಿವಾಸಿಗಳ ಸಮ್ಮತಿ ಇಲ್ಲದೆ ಸಿದ್ದು ಸಂಗೋಳಗಿ, ಸಂತೋಷ ಸಂಗೋಳಗಿ, ಆಕಾಶ ಬಿರಾದಾರ, ಅನಿಲ ಮುಗಳ ಹಾಗೂ ಇತರರು ಅನಾಧಿಕೃತವಾಗಿ ಕಟ್ಟಡ ನಿರ್ಮಾಣ ಮಾಡುತ್ತಿದ್ದಾರೆ.
ಬಡವಾಣಿಯ ಸದರಿ ಭವಾನಿ ನಗರ ಹಾಗೂ ಕಾಕಡೇ ಚೌಕ ಬಡವಾಣಿಯ ಮುಖ್ಯ ರಸ್ತೆಯಲ್ಲಿ ಬಸವೇಶ್ವರ ಮಹಾದ್ವಾರವು ಅನಾಧಿಕೃತವಾಗಿ ಕಟ್ಟಡ ಮಾಡುತ್ತಿದ್ದು, ಅದರಿಂದ ಜಾತಿ ವಿವಾದ ಬಗ್ಗೆ ಕೋಮುಗಲಬೆ ಆಗುವ ಸಂಬಂವ ಇರುವುದ್ದರಿಂದ, ಸದರಿ ಕಟ್ಟಡ ನಿರ್ಮಾಣ ಮಾಡಲು ನಿವಾಸಿಗಳ ಸಮ್ಮತಿ ಇರುವುದಿಲ್ಲ. ಅದಕ್ಕಾಗಿ ಸದರಿ ಕಟ್ಟಡವನ್ನು ತಡೆಹಿಡಯಬೇಕೆಂದು ಒಂದು ವೇಳೆ ೦೪ ದಿನಗಳ ಒಳಗಡೆ ಸದರಿ ಕಟ್ಟಡ ತಡೆಹಿಡಿಯದಿದ್ದರೆ ಬಡವಾಣಿಯ ನಿವಾಸಿಗಳು ಹುಮನಾಬಾದ (ಸರ್ಕಲ್) ರಾಜ್ಯ ಹೆದ್ದಾರಿ ರಸ್ತೆಯನ್ನು ತಡೆದು ಉಗ್ರ ಹೊರಾಟ ಮಾಡುತ್ತೇವೆ ಎಂದು ಎಚರಿಸಿದರು.
ಈ ಸಂದರ್ಭದಲ್ಲಿ ಅನೀಲ ಚಂದ್ರಕಾಂತ ಇಂಗಳೆ, ಶೇಖರ ಪೂಜಾರಿ, ಸಿದ್ದು ಜೋಷಿ, ಸಿದ್ದು ಪೂಜಾರಿ, ಎಂ.ಎ.ಪೂಜಾರಿ, ಚಂದ್ರು ಪೂಜಾರಿ, ರೋಫ ಭವಾನಿ ನಗರ, ವಾಯ್ ಟಿ ರಾಮು, ಅಜಯ ಜಮಾದಾರ, ಭೀಮರಾವ, ಆನಂದ ಜಮಾದಾರ, ಪ್ರಕಾಶ ಸಿಂಧೆ, ಸುನೀಲ ಮಾಲಿಪಾಟೀಲ, ಗಣೇಶ ಪೂಜಾರಿ, ಅಂಬರಿಷ ಅಣ್ಣಾರಾವ, ಶ್ರೀಶೈಲ ಕಲಶಟ್ಟಿ, ಪರಮೇಶ್ವರ ಪೂಜಾರಿ, ಶುಭಂ, ಸುಭಾಶ, ಅರ್ಜುನ ಬಡಾವಣೆಯ ನೂರಾರು ಮುಖಂಡರು ಇದ್ದರು.