ಕಲಬುರಗಿ: ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ೧೩೧ ನೆಯ ಜಯಂತಿ ಅಂಗವಾಗಿ ಸ್ಲಂ ಜನಾಂದೋಲನ ಜಿಲ್ಲಾ ಘಟಕ ವತಿಯಿಂದ ಮನೆಮನೆಗೂ ಸಂವಿಧಾನ ಪೀಠಿಕೆ ಅರಿವು ಮೂಡಿಸುವ ಅಭಿಯಾನವನ್ನು ಜಗತ್ತ ವೃತ್ತದಲ್ಲಿ ಸ್ಲಂ ಮಹಿಳೆಯರು ಸೇರಿ ಸಂವಿಧಾನಪೀಠಿಕೆ ಓದುತ್ತ ಸಂವಿಧಾನ ಪೀಠಿಕೆಯನ್ನು ಹಿಡಿದು ರಾಲ್ಯಿ ಮುಖಾಂತರ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ ಪುತ್ತಳಿಗೆ ಮಾಲಾರ್ಪಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಸ್ಲಂ ಜನಾಂದೋಲನ ಸಂಚಾಲಕಿ ರೇಣುಕಾ ಸರಡಗಿ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯೆ ಸುನಂದ ಕೊರವಿ, ಸ್ಲಂ ಜನಾಂದೋಲನ ಅಧ್ಯಕ್ಷ ಸುನೀತಾ ಕೊಲ್ಲೂರ, ಉಪಾಧ್ಯಕ್ಷರಾದ ರಾಶಿ ರಾಠೋಡ, ಕಾರ್ಯದರ್ಶಿಯಾದ ಹೀನಾ ಶೇಕ್, ಮುಖಂಡರಾದ ಜ್ಯೋತಿ ಅಡಕಿ, ಶ್ರೀದೇವಿ, ನೀಲಮ್ಮ, ಶ್ರೀಹನುಮಂತ ಇಟಗಿ, ಮೌನೇಶ್ ಕಾರವಾರ, ಗೌರಮ್ಮ ಮಕಾ ಹಲವಾರು ಸ್ಲಂ ಮಹಿಳೆಯರು ಭಾಗವಹಿಸಿದ್ದರು.