ವಿಶ್ವರತ್ನ ಘನ ಪಂಡಿತ ಡಾ. ಬಿ.ಆರ್. ಅಂಬೇಡ್ಕರ್: ಚಂದ್ರಶೇಖರ್ ಕಟ್ಟಿಮನಿ

0
33

ಜೇವರ್ಗಿ: ತಾಲೂಕು ಆಡಳಿತದ ಜೇವರ್ಗಿ ವತಿಯಿಂದ ಸಂವಿಧಾನ ಶಿಲ್ಪಿ ಡಾ ಬಿ.ಆರ್ ಅಂಬೇಡ್ಕರ್ ಅವರ 131ನೇ ಜಯಂತ್ಯುತ್ಸವ ಕಾರ್ಯಕ್ರಮವನ್ನು ಗುರುವಾರ ಇಲ್ಲಿನ ತಹಸೀಲ್ದಾರ್ ಕಚೇರಿ ಆವರಣದಲ್ಲಿ 10.30 ಗಂಟೆಗೆ ಆಯೋಜಿಸಲಾಗಿತ್ತು.

ಸಾಹಿತಿಗಳು ಹಾಗೂ ವಿಶೇಷ ಉಪನ್ಯಾಸಕರಾದ ಚಂದ್ರಶೇಖರ್ ಕಟ್ಟಿಮನಿ ಕರ್ಕಿಹಳ್ಳಿ ಮಾತನಾಡಿ ಸರ್ವರಿಗೂ ಮತದಾನದ ಹಕ್ಕು ಹಾಗೂ ನೌಕರರಿಗೆ ಕನಿಷ್ಠ ವೇತನ ಸೇರಿದಂತೆ ಮಹಿಳೆಯರಿಗೆ ಪುರುಷರ ಸಮಾನ ಸ್ಥಾನಮಾನವನ್ನು ಕಲ್ಪಿಸಿಕೊಡುವ ಜೊತೆಯಲ್ಲಿ ಸಮಸಮಾಜದ ನಿರ್ಮಾಣದ ಕನಸನ್ನು ಹೊತ್ತು ಸಂವಿಧಾನದಲ್ಲಿ ಮೂಲಭೂತ ಹಕ್ಕುಗಳ ಜೊತೆಯಲ್ಲಿ ಭಾರತ ದೇಶದ ವಿಶ್ವ ಭಾತೃತ್ವದ ಭಾವನೆಯನ್ನು ಎಲ್ಲರ ಏಳಿಗೆ ಹಾಗೂ ಸಮಾನತೆಗಾಗಿ ಸಂವಿಧಾನವನ್ನು ರಚಿಸುವ ಮೂಲಕ ವಿಶ್ವದಲ್ಲಿ ಪ್ರಖ್ಯಾತಿಯನ್ನು ಪಡೆದ ಡಾ.ಬಿ.ಆರ್ ಅಂಬೇಡ್ಕರ್ ಅವರು ಒಬ್ಬ ಶಿಕ್ಷಣ ತಜ್ಞರು, ಆರ್ಥಿಕ ಸಲಹೆಗಾರರು ಅತ್ಯುತ್ತಮ ವಾಗ್ಮಿ ಗಳು , ಅಪ್ಪಟ ದೇಶಪ್ರೇಮಿ ಗಳಾಗಿದ್ದರು ಎಂದು ತಿಳಿಸಿದರು.

Contact Your\'s Advertisement; 9902492681

ಹಿಂದೂ ವೈದಿಕ ಧರ್ಮದಲ್ಲಿನ ಕಂದಾಚಾರಗಳು ಹಾಗೂ ತಾರತಮ್ಯದ ನೀತಿಗಳಿಂದ ತುಳಿತಕ್ಕೊಳಗಾದ, ಅಸಮಾನತೆ ಹಾಗೂ ತಾರತಮ್ಯದ ನೆಲೆಯನ್ನು ಹೊಂದಿರುವ ಧರ್ಮವನ್ನು ತೊರೆಯುವ ಮೂಲಕ ದಮನಿತ ಸಮುದಾಯಗ ಸಮಸ್ಯೆಗಳಿಗೆ ಸ್ಪಂದಿಸಿ ಬೌದ್ಧ ಧರ್ಮಕ್ಕೆ ಮತಾಂತರ ಹೊಂದಿದರು,ನಮ್ಮ ದೇಶದಲ್ಲಿ ಜನಿಸಿದ ವಿಶ್ವವಿಖ್ಯಾತಿ ಪಡೆದ ಮೂಲ ಧರ್ಮಕ್ಕೆ ಬೌದ್ಧ ಧರ್ಮಕ್ಕೆ ಹಿಂತಿರುಗಿದ್ದರು, ಈ ಮೂಲಕ ಇಸ್ಲಾಂ ,ಕ್ರೈಸ್ತ ಹಾಗೂ ಸಿಖ್ ಧರ್ಮಗಳ ಬಗ್ಗೆ ಒಲವನ್ನು ತೋರಲಿಲ್ಲ ಎಂದು ತಿಳಿಸಿದರು.

ಇದನ್ನೂ ಓದಿ: ಸಾಹಿತಿ ಸಾಯಿಲಕ್ಷ್ಮಿ.ಎಸ್ ಬದುಕಿನ ಒಂದು ಮಜಲೂ

ಪ್ರಸ್ತಾವಿಕವಾಗಿ ಮಾತನಾಡಿದ ಜೇವರ್ಗಿ ತಸಿಲ್ದಾರರಾದ ವಿನಯ್ ಕುಮಾರ್ ಪಾಟೀಲ್, ಅಂಬೇಡ್ಕರರು ಒಬ್ಬ ಶ್ರೇಷ್ಠ ಶಿಕ್ಷಣ ತಜ್ಞರು ,ಸಂಘಟಕರು ಹಾಗೂ ಹೋರಾಟಗಾರರು ಆಗಿದ್ದು ಶೋಷಿತ ಸಮುದಾಯದ ಧ್ವನಿಯಾಗಿ ದಮನಿತರ ಹಕ್ಕುಗಳನ್ನು ಒದಗಿಸಿಕೊಡುವಲ್ಲಿ ತಮ್ಮ ನಿಸ್ವಾರ್ಥ ಸೇವೆಯನ್ನು ಸಲ್ಲಿಸುವ ಮೂಲಕ ಇಡೀ ವಿಶ್ವಕ್ಕೆ ಮಾದರಿ ಸಂವಿಧಾನವನ್ನು ರಚಿಸಿಕೊಟ್ಟ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದರು.

ವಿವಿಧ ವಿಶ್ವವಿದ್ಯಾಲಯಗಳಲ್ಲಿ ಅಧ್ಯಯನ ಮಾಡಿ ಅರ್ಥಶಾಸ್ತ್ರ ರಾಜ್ಯಶಾಸ್ತ್ರ ,ಸಾಮಾಜಿಕ ವ್ಯವಸ್ಥೆ ಮತ್ತು ರಾಜಕೀಯ ವಿದ್ಯಮಾನಗಳನ್ನು ಕುರಿತು ನೂರಾರು ಪುಸ್ತಕಗಳನ್ನು ಬರೆದಿರುವ ಅಂಬೇಡ್ಕರ್ ಶ್ರೇಷ್ಠ ಚಿಂತಕರು, ಇವರು ದಿನದ 18 ಗಂಟೆಗಳನ್ನು ಅಧ್ಯಯನದಲ್ಲಿ ಕಳೆಯುತ್ತಿದ್ದರು ,ಇವರನ್ನು ಭಾರತರತ್ನ ಎನ್ನುವ ಬದಲು ವಿಶ್ವರತ್ನ ಎಂದು ಕರೆಯಬೇಕು ಎಂದು ಜೇವರ್ಗಿ ಶಾಸಕರು ಹಾಗೂ ವಿರೋಧ ಪಕ್ಷದ ಮುಖ್ಯ ಸಚೇತಕರಾದ ಡಾ. ಅಜಯಸಿಂಗ್ ತಿಳಿಸಿದರು.

ಇದನ್ನೂ ಓದಿ: ಅಂಬೇಡ್ಕರ್ ಜಯಂತ್ಯುತ್ಸವ: ಚಿಂತನೆಗೆ ವೇದಿಕೆಯಾಗಲಿ-ಗುರುರಾಜ ಸಂಗಾವಿ

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶರಣಮ್ಮ ಸಾಯಬಣ್ಣ ತಳವಾರ ಪುರಸಭೆ ಅಧ್ಯಕ್ಷರು ಹಾಗೂ ಹಳ್ಳೆಪ್ಪ ಚಾರ್ ಜೋಷಿ ಪಿಎಲ್ಡಿ ಬ್ಯಾಂಕ್ ಜೇವರ್ಗಿ ಸೇರಿದಂತೆ ತಾಲೂಕು ನೌಕರರ ಸಂಘದ ಡಿ ಬಿ ಪಾಟೀಲ್ ಹಾಗೂ ಪುರಸಭೆಯ ಸದಸ್ಯರು ಶಿವ ಬಾಯಿ ಕೊಂಬಿನ ಸೇರಿದಂತೆ ತಾಲೂಕ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳಾದ ಅಬ್ದುಲ್ ನಬಿ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಾದ ಅಶೋಕ್ ನಾಯಕ್, ಆರಕ್ಷಕ ವೃತ್ತ ನಿರೀಕ್ಷಕರಾದ ಶಿವಪ್ರಸಾದ್ ಸೇರಿದಂತೆ ಇತರ ಎಲ್ಲಾ ತಾಲೂಕ ಮಟ್ಟದ ಅಧಿಕಾರಿಗಳು ಇಲ್ಲಿನ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪುತ್ಥಳಿಗೆ ಮಾಲಾರ್ಪಣೆ ನಡೆಸಿ ಮೆರವಣಿಗೆ ಮೂಲಕ ತೆರಳಿ ತಾಸಿಲ್ದಾರ್ ಕಾರ್ಯಾಲಯದಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಸಮಾಜದ ಹಿರಿಯ ಮುಖಂಡರು ಸೇರಿದಂತೆ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮವನ್ನು ಮಕ್ಬುಲ್ ಪಟೇಲ್ ಕಾಜೂರ್ ಗ್ರಾಮಲೆಕ್ಕಾಧಿಕಾರಿಗಳು ನಿರೂಪಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here