ಶಹಾಬಾದ: ಹನುಮಂತನ ಭಕ್ತಿಯಿಲ್ಲದೇ ರಾಮಾಯಣವಿಲ್ಲ.ರಾಮನಿಲ್ಲದೇ ಭಾರತವಿಲ್ಲ ಎಂದು ಸೇಡಂನ ಆರ್‍ಎಸ್‍ಎಸ್ ನ ಜಿಲ್ಲಾ ಪ್ರಚಾರಕ ಪ್ರವೀಣ ಕುಲಕರ್ಣಿ ಹೇಳಿದರು.
ಅವರು ಬುಧವಾರ ಭಂಕೂರ ಗ್ರಾಮದ ವೃತ್ತದಲ್ಲಿ ರಾಮ ನವಮಿ ಉತ್ಸವ ಸಮಿತಿ ವತಿಯಿಂದ ಆಯೋಜಿಸಲಾದ ರಾಮಉತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
ದಿ.ವಿಠಲ ಹೇರೂರ ಜನ್ಮದಿನದ ನಿಮಿತ್ತ ಕೋಲಿ ಕಬ್ಬಲಿಗ ಗಣ್ಯರಿಗೆ ಸನ್ಮಾನ
ದೇಶದ ಪ್ರತಿ ಹಿಂದುಗಳ ಮನೆ ಮನಗಳಲ್ಲಿ ರಾಮನ ನಾಮ ಕೇಳಲು ಸಿಗುತ್ತದೆ. ತಮಿಳುನಾಡು ಮತ್ತು ಕೇರಳದಲ್ಲಿ ರಾಮನ್ ಎಂದು, ಆಂದ್ರದಲ್ಲಿ ರಾಮಯ್ಯ, ರಾಮಪ್ಪ ಎಂದು ಕರೆಯಲಾಗುತ್ತದೆ.ಅಲ್ಲದೇ ವಿವಿಧ ರಾಜ್ಯಗಳಲ್ಲಿ ರಾಮಸಿಂಗ, ರಾಮಬಿಹಾರಿ ಹೀಗೆ ರಾಮನ ನಾಮ ಅನಾದಿ ಕಾಲದಿಂದಲೂ ಎಲ್ಲಾ ಕಡೆ ಹೆಸರನ್ನು ಇಡುತ್ತಾ ಬಂದಿರುವುದು ಕಂಡುಬರುತ್ತಿದೆ. ರಾಮ ನಮ್ಮ ಸಂಸ್ಕøತಿ.ಇಡಿ ಜಗತ್ತಿಗೆ ದಾರಿ ತೋರಿಸಿದ ಸಮಾಜದ ಹಿಂದು ಸಮಾಜ. ತ್ಯಾಗ, ಪರಾಕ್ರಮ, ಶೌರ್ಯ ಹಾಗೂ ಜ್ಞಾನದಿಂದ ಮೆರೆದ ದೇಶ ಭಾರತ ಎಂದು ಮನಗಾಣಬೇಕು.
ಇದನ್ನೂ ಓದಿ: ಬಿಜೆಪಿ ಕಚೇರಿಯಲ್ಲಿ ಮಾಜಿ ಶಾಸಕ ಚಂದ್ರಶೇಖರ್ ಪಾಟೀಲ್ ರೇವೂರ್ 12ನೇ ಪುಣ್ಯಸ್ಮರಣೋತ್ಸವ
ಇಂದು ನಮ್ಮ ಸಂಸ್ಕøತಿಯನ್ನು ನಾವು ಮರೆಯುತ್ತಿದ್ದೆವೆ.ನಾವು ಆಚರಿಸುವ ಹಿಂದು ಸಮಾಜದ ಹಬ್ಬಕ್ಕೆ ತನ್ನದೇ ಆದ ಐತಿಹಾಸಿಕ ವಿಶೇಷತೆ ಇದೆ.ಅದನ್ನು ನಾವು ಪಾಲಿಸುತ್ತಿಲ್ಲ ಕಳವಳ ವ್ಯಕ್ತಪಡಿಸಿದರು. ನಮ್ಮ ಧರ್ಮದ ರಕ್ಷಣೆಯಯಾಗಬೇಕು.ಅಧರ್ಮದ ನಾಶವಾಗಬೇಕು ಎಂಬುದೇ ನಮ್ಮ ಹಿಂದು ಸಮಾಜದ ಧ್ಯೇಯ. ಹಿಂದೂ ಧರ್ಮದಲ್ಲಿ ರಾಮನಿಗೆ ಮಹತ್ವದ ಸ್ಥಾನವಿದ್ದು ಅವರನ್ನು ಮರ್ಯಾದಾ ಪುರುμÉೂೀತ್ತಮ ಎಂದು ಕರೆಯಲಾಗಿದೆ. ವಿಷ್ಣುವಿನ ಹತ್ತನೆಯ ಅವತಾರವಾಗಿ ರಾಮನನ್ನು ಕೊಂಡಾಡುತ್ತಾರೆ. ರಾಮಾಯಣದ ಕಥೆಯನ್ನು ಆಲಿಸಿಕೊಂಡು ಬೆಳೆದು ಬಂದವರು ನಾವಾಗಿರುವುದರಿಂದ ಜೀವನದಲ್ಲಿನ ಮಹತ್ವದ ಅಂಶಗಳನ್ನು ನಾವು ರಾಮಾಯಣದಿಂದ ಅರಿತಿದ್ದೇವೆ. ರಾಮನನ್ನು ಮರ್ಯಾದಾ ಪುರುμÉೂೀತ್ತಮ ಎಂದು ಕರೆಯಲಾಗುತ್ತದೆ.ರಾಮನ ಸದ್ಗುಣಗಳನ್ನು ಪಾಲಿಸುವ ಮೂಲಕ ನವ ಸಮಾಜದ ನಿರ್ಮಾಣಕ್ಕೆಮುಂದಾಗೋಣ ಎಂದರು.
ಗ್ರಾಮದ ಮುಖಂಡರಾದ ಶಶಿಕಾಂತ ಪಾಟೀಲ ರಾಮನ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.ನಿವೃತ್ತ ಶಿಕ್ಷಕರಾದ ಹೆಚ್.ವಾಯ್.ರಡ್ಡೇರ್, ನಗರಸಭೆಯ ಸದಸ್ಯ ರಜನಿಕಾಂತ ಕಂಬಾನೂರ ವೇದಿಕೆಯ ಮೇಲಿದ್ದರು. ಗ್ರಾಮದ ಮುಖಂಡರಾದ ಚನ್ನವೀರಪ್ಪ ಪಾಟೀಲ ಅಧ್ಯಕ್ಷತೆ ವಹಿಸಿದ್ದರು.
ಇದನ್ನೂ ಓದಿ: ಕಸಾಪ ಗೌರವ ಕಾರ್ಯದರ್ಶಿಯಾಗಿ ಆಯ್ಕೆಯಾದ ಪ್ರೊ. ಯಶವಂತರಾಯ ಅಷ್ಠಗಿಗೆ ಸನ್ಮಾನ
ಮಣಿಕಂಠ ರಾಠೋಡ, ನೀಲಕಂಠ ಪಾಟೀಲ, ನಿಂಗಣ್ಣ ಹುಳಗೋಳಕರ್,ಉಮೇಶ ಪಾಟೀಲ, ಸದಾನಂದ ಕುಂಬಾರ, ಬಸವರಾಜ ಮದ್ರಿಕಿ, ಪ್ರಕಾಶ ಪಾಟೀಲ, ಯುವಕರಾದ ಸಂತೋಷ ಕಲಶೆಟ್ಟಿ, ಶಿವಕುಮಾರ ತರಂಗೆ, ಈರಪ್ಪ ಹೂಗಾರ, ಪವನ ಸಿರಗೊಂಡ, ಯಲ್ಲಾಲಿಂಗ ನಾಗೂರ,ಅಭಿಷೇಕ, ಸುನೀಲ ಗುಡೂರ್,ಚಂದ್ರಕಾಂತ ಚನ್ನೂರ್,ಶರಣು ರಸ್ತಾಪೂರ, ಇತರರು ಇದ್ದರು.
ಇದೇ ಸಂದರ್ಭದಲ್ಲಿ ಗ್ರಾಮದ ರಾಮಲಿಂಗೇಶ್ವರ ದೇವಸ್ಥಾನದಿಂದ ಭಂಕೂರ ಗ್ರಾಮದ ವೃತ್ತದವರೆಗೆ ರಾಮನ ಭಾವಚಿತ್ರದ ಭವ್ಯ ಮೆರವಣಿಗೆ ನಡೆಯಿತು. ಈರಣ್ಣ ಕಾರ್ಗಿಲ್ ನಿರೂಪಿಸಿದರು, ಲಕ್ಷ್ಮಿಕಾಂತ ಕಂದಗೂಳ ಪ್ರಾಸ್ತಾವಿಕ ನುಡಿದರು.
ಇದನ್ನೂ ಓದಿ: ಮಳಿಗೆಗಳಲ್ಲಿ ಕನ್ನಡ ನಾಮಫಲಕ ಕಡ್ಡಾಯ ಆದೇಶ ಹೊರಡಿಸಲು ಆಗ್ರಹ
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…