ಬಿತ್ತನೆ ಬೀಜ ದುಬಾರಿ ಮಾಡಿ ಬಿಜೆಪಿ ರೈತ ವಿರೋಧಿ ನೀತಿ ಅನುಸರಿಸುತ್ತಿದೆ: ಹಣಮಂತರಾವ ಭೂಸನೂರ್

0
23

ಕಲಬುರಗಿ: ಮುಂಗಾರು ಹಂಗಾಮಿಗೆ ರಾಜ್ಯದಲ್ಲಿ ರೈತರು ಭರದ ಸಿದ್ಧತೆಯಲ್ಲಿರುವಾಗಲೇ ರಾಜ್ಯ ಸರ್ಕಾರ ಬಿತ್ತನೆ ಬೀಜ ಬೆಲೆ ಹೆಚ್ಚಿಸುವ ಮೂಲಕ ರೈತರಿಗೆ ಬರೆ ನೀಡಿದೆ. ಇತ್ತ ಬೆಲೆ ಹೆಚ್ಚಳವಾದರೂ ಸರ್ಕಾರ ತಾನು ರೈತರಿಗೆ ನೀಡುವ ಸಬ್ಸೀಡಿ ಮೊತ್ತ ಮಾತ್ರ ಚೂರು ಬದಲಾಯಿಸದೆ ಹಾಗೇ ಯಥಾಸ್ಥಿತಿ ಮುಂದುವರಿಸಿದೆ. ಇದು ಬಿಜೆಪಿಯ ರೈತ ವಿರೋಧಿ ನೀತಿ. ಈ ಚುನಾವಣೆಯಲ್ಲಿ ರೈತರು ಬಿಜೆಪಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಕೆಪಿಪಿಸಿ ಸದಸ್ಯ, ಪ್ರಗತಿಪರ ರೈತ ಹಣಮಂತರಾವ ಭೂಸನೂರ್ ರಾಜ್ಯ ಸರ್ಕಾರದ ಧೋರಣೆಯನ್ನು ಕಟುವಾಗಿ ಟೀಕಿಸಿದ್ದಾರೆ.

ಈ ಕುರಿತಂತೆ ಹೇಳಕೆ ನೀಡಿರುವ ಅವರು ತೊಗರ, ಸೂರ್ಯಕಾಂತಿ, ಉದ್ದು, ಹೆಸರು, ಸೋಯಾ ಭತ್ತ ಈ ಬೀಜಗಳ ದರ ಗಣನೀಯವಾಗಿ ಹೆಚ್ಚಳವಾಗಿದೆ. ಕಳೆದ ಬಾರಿ ಕೆಜಿಗೆ ತೊರಗಿ 105 ರು ಇದ್ದದ್ದು ಈ ಬಾರಿ 111 ರು ಆಗಿದೆ. ಇನ್ನು ಸೂರ್ಯಕಾತಿ ಕೆಜಿಗೆ 468 ರು ಇದ್ದದ್ದು ಬೆಲೆ ಈ ಬಾರಿ ಬರೋಬ್ಬರಿ ದುಪ್ಪಟ್ಟಾಗಿದೆ. ಅಂದರೆ ಈ ಬಾರಿ ಸೂರ್ಯಕಾಂತಿ ಬೀಜದ ಬೆಲೆ ಕೆಜಿಗೆ 895 ರು ಆಗಿದೆ. ಸೂರ್ಯಕಾಂತಿ ಬೀಜದ ಬೆಲೆ ಕಂಡೇ ರೈತರು ಕಂಗಾಲಗಿದ್ದಾರೆ.

Contact Your\'s Advertisement; 9902492681

ಇನ್ನು ಕಳೆದ ಬಾರಿ 104 ರು ಇದ್ದ ಉದ್ದು ಈ ಬಾರಿ 111 ರು, ಸೋಯಾ ಕಳೆದ ಬಾರಿ ಕೆಜಿಗೆ 104 ರು ಇದ್ದದ್ದು 124 ರುಪಾಯಿಗೆ ಹೆಚ್ಚಳವಾಗಿದೆ. ಸಣ್ಣ , ಅತಿ ಸಣ್ಣ ರೈತರು ಇದರಿಂದ ಅಕ್ಷರಶಃ ಕಂಗಾಲಾಗಿದ್ದಾರೆ. ಮೊದಲೇ ಕಳೆÉದ ಬಾರಿ ಅತಿ ಮಳೆಗೆ ಹೆಚ್ಚಿನ ಬೆಳೆ ಬಾರದೆ ಕೈ ಸುಟ್ಟುಕೊಂಡಿರುವ ರೈತರು ಈ ಬಾರಿಯ ಕೃಷಿಯಲ್ಲಿ ಹೆಚ್ಚಿನ ಲಾಭ ಮಾಡುವ ಯೋಜನೆಯೊಂದಿಗೆ ಮುಂದಾದರೆ ಬೆಲೆಯಲ್ಲಿ ಈ ಪರಿ ಹೆಚ್ಚಳವಾಗಿರೋದು ಅವರಿಗೆ ಗಾಯದ ಮೇಲೆ ಬರೆ ಎಳೆದಂತೆ ಮಾಡಿದೆ. ತೊಗರಿ ನಾಡಲ್ಲಿ ತೊಗರಿ ಬೀಜ ತುಟ್ಟಿ, ಸೂಯರ್Àಕಾಂತಿ ಬೀಜದ ಬೆಲೆ ರೈತರ ಕೈ ಸುಡುವಂತೆ ಹೆಚ್ಚಿದೆ. ಬೆಲೆ ಏರಿಕೆ ರೈತರನ್ನೇ ಪರೇಶಾನ್ ಮಾಡಿರೋದು ಕಟು ವಾಸ್ತವ.

ಮಾತೆತ್ತಿದರೆ ರೈತರ ಪರ ಎಂದು ಬಡಾಯಿ ಕೊಚ್ಚಿಕೊಳ್ಳುವ ಬಿಜೆಪಿ ಸರ್ಕಾರದ ರೈತ ಪರ ನೀತಿ ಅಂದರೆ ಬೀಜ, ರಸಗೊಬ್ಬರಗಳ ಬೆಲೆ ಹೆಚ್ಚಳ ಮಾಡೋದೇ ಆಗಿದೆ ಎಂದು ರೈತರೇ ಗೊಣಗುತ್ತಿದ್ದಾರೆ. ಬಿಜೆಪಿ ಸರ್ಕಾರ ಗುತ್ತಿಗೆದಾರರ ಶೇ. 40 ಕಮೀಷನ್ ಹೊಡೆಯೋದು ಬಿಟ್ಟರೆ ಬೇರೇನು ತನಗೆ ಗೊತ್ತಿಲ್ಲವೆಂಬಂತೆ ಇದೆ. ಬೀಜ- ರಸಗೊಬ್ಬರ ರೈತರ ಕೈಗೆಟಕುವಂತೆ ಇರಬೇಕು. ಅದನ್ನು ಗಮನಿಸದಂತೆ ಸರ್ಕಾರ ರೈತರಿಗೆ ಭಾರಿ ಹೊಡೆತ ನೀಡುವ ಮೂಲಕ ಬೀಜದ ಬೆಲೆ ಹೆಚ್ಚಿಸಿರೋದು ಬಿಜೆಪಿಯವರ ರೈತ ವಿರೋಧಿ ಧೋರಣೆಗೆ ಕನ್ನಡಿ. ರೈತರು, ರಾಜ್ಯದ ಜನತೆ ಈ ಬಿಜೆಪಿಯವರ ಎಲ್ಲವನ್ನು ಗಮನಿಸುತ್ತಿದ್ದಾರೆ. ಬರುವ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲು ಮುಂದಾಗಿದ್ದಾರೆಂದು ಹಣಮಂತರಾವ ಭೂಸನೂರ್ ಹೇಳಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here