ಶಹಾಬಾದ:ಆರೋಗ್ಯವಂತ ಸಮಾಜದ ನಿರ್ಮಾಣಕ್ಕೆ ತಂಬಾಕು ಸೇವನೆ ಮಾರಕವಾಗಿದ್ದು ಯುವಜನರು ಹಾಗೂ ವಿದ್ಯಾರ್ಥಿಗಳು ತಂಬಾಕು ಹಾಗೂ ತಂಬಾಕು ಉತ್ಪನ್ನಗಳ ಬಳಕೆಯಿಂದ ದೂರವಿರಬೇಕು ಎಂದು ಕಿರಿಯ ಶ್ರೇಣಿ ನ್ಯಾಯಾಲಯದ ಸಿವಿಲ್ ನ್ಯಾಯಾಧೀಶರಾದ ಮಲ್ಲೇಶಿ ಪರಶುರಾಮ ಮೋಹಿತೆ ಹೇಳಿದರು.
ಅವರು ಮಂಗಳವಾರ ಶರಣಬಸವೇಶ್ವರ ಜ್ಞಾನ ವಿಕಾಸ ಪೀಠದ ಗಂಗಮ್ಮ ಪ್ರೌಢಶಾಲೆಯಲ್ಲಿ ವಿಶ್ವ ತಂಬಾಕು ನಿಷಧ ದಿನದ ಅಂಗವಾಗಿ ತಾಲೂಕು ಕಾನೂನು ಸೇವಾ ಸಮಿತಿ ಹಾಗೂ ವಕೀಲರ ಸಂಘದಆಶ್ರಯದಲ್ಲಿ ಆಯೋಜಿಸಿದ್ದ ಕಾನೂನು ಅರಿವು ಮತ್ತುಜಾಗೃತಿ ಕಾರ್ಯಕ್ರಮವನ್ನು ಸಸಿಗೆ ನೀರೆರೆಯುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಯುವಜನತೆ ಇಂದು ಕ್ಷಣಿಕ ಸುಖದ ಆಸೆಗೆ ಒಳಗಾಗಿ ತಂಬಾಕು ಹಾಗೂ ಮಾದಕ ವಸ್ತುಗಳ ದಾಸರಾಗಿ ತಮ್ಮ ಅಮೂಲ್ಯವಾದಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ. ತಂಬಾಕು ಉತ್ಪನ್ನಗಳಲ್ಲಿರುವ ನಿಕೋಟಿನ್ ಎಂಬ ವಿಷಕಾರಿ ಅಂಶಷಜನರನ್ನು ತಂಬಾಕು ಉತ್ಪನ್ನಗಳ ದಾಸರನ್ನಾಗಿ ಮಾಡುತ್ತಿದೆ ಎಂದರು.ತಂಬಾಕು ಬಳಕೆ ಯುವಜನರನ್ನುಮೃಗಗಳಂತೆ ಮಾಡುವುದಲ್ಲದೇ ಕಳ್ಳತನ ಸೇರಿ ಸಮಾಜ?ಘಾತುಕ ಕೆಲಸಗಳಿಗೆ ಪ್ರೇರೇಪಿಸಿ ಸಮಾಜವನ್ನೇ ನಾಶ?ಪಡಿಸುವ ಕೆಲಸಕ್ಕೆ ಪ್ರೇರೇಪಣೆ ನೀಡುತ್ತದೆ.ಆದ್ದರಿಂದ ತಂಬಾಕು ಉತ್ಪನ್ನಗಳಿಂದ ದೂರವಾಗಬೇಕು.ಆರೋಗ್ಯಕರ ಜೀವನ ನಡೆಸಬೇಕೆಂದು ಸಲಹೆ ನೀಡಿದರಲ್ಲದೇ, ಮೊಬೈಲ್‌ನಲ್ಲಿ ಧರ್ಮಕ್ಕೆ ಸಂಬಂಧಿಸಿದಂತೆ ಹಾಗೂ ಕೋಮು ಸೌಹಾರ್ದ ಹಾಳು ಮಾಡುವ ಪೋಸ್ಟಗಳನ್ನು ಹಾಕಬೇಡಿ ಹಾಗೂ ಫಾರ್‌ವರ್ಡ ಮಾಡಬೇಡಿ ಎಂದು ತಿಳಿಸಿದರು.
ವಿಶೇ? ಉಪನ್ಯಾಸ ನೀಡಿದ ಹಿರಿಯ ವಕೀಲ ರಮೇಶ್ ರಾಠೋಡ ಮಾತನಾಡಿ, ಬೀಡಿ, ಸಿಗರೇಟು, ಹೊಗೆಸೊಪ್ಪು, ಗುಟ್ಕಾ ಸೇರಿ ಇತರೆ ತಂಬಾಕು ವಸ್ತು, ಚರಸ್, ಅಫೀಮು ಸೇರಿದಂತಹ ಮಾದಕ ವಸ್ತುಗಳು ಮಾನವ ಕುಲವನ್ನೇ ಸರ್ವನಾಶ ಮಾಡುತ್ತವೆ.ಅಲ್ಲದೇ ಯುವಕರು ಇದಕ್ಕೆಲ್ಲಾ ದಾಸರಾಗಿ ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ.ಅಲ್ಲದೇ ವಿದ್ಯಾಥಿಗಳಾದ ತಾವು ತಮ್ಮ ಮನೆ ಹಾಗೂ ಮನೆಯ ಸುತ್ತಮುತ್ತಲಿನ ಬಂಧುಗಳು ಈ ವಸ್ತುಗಳನ್ನು ಸೇವಿಸುತ್ತಿದ್ದರೇ ಅವರನ್ನು ತಿಳಿಹೇಳಿ, ಇದನ್ನು ಬಿಡುವಂತೆ ಪ್ರೇರೇಪಿಸಿ ಎಂದರು.
ಈ ಕಾರ್ಯಕ್ರಮದಲ್ಲಿ ಸರಕಾರದ ಸಹಾಯಕ ಅಭಿಯೋಜಕರಾದ ಸುನೀತಾ.ಎಸ್. ಘಟ್ಟು, ಭೀಮಾಶಂಕರ ಮುತ್ತಟ್ಟಿ, ವಕೀಲರ ಸಂಘದ ಅಧ್ಯಕ್ಷ ಶಶಿಕಾಂತ ಶಿಂಧೆ ವೇದಿಕೆಯ ಮೇಲಿದ್ದರು.
ನಂದಾ ಕಲ್ಯಾಣಿ ಸ್ವಾಗತಿಸಿದರು, ನ್ಯಾಯವಾದಿ ರಘುವೀರಸಿಂಗ್ ಠಾಕೂರ್ ನಿರೂಪಿಸಿದರು, ನ್ಯಾಯವಾದಿ ಉಮೇಶ ಪೋಚಟ್ಟಿ ವಂದಿಸಿದರು. ನ್ಯಾಯವಾದಿಗಳಾದ ನಾಗೇಶ ಧನ್ನೇಕರ್, ತಿಮ್ಮಯ್ಯ ಮಾನೆ, ದೇವಪ್ಪಾ ಕುಲಕುಂದಿ ಉಪಸ್ಥಿತರಿದ್ದರು.
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…