ಬಿಸಿ ಬಿಸಿ ಸುದ್ದಿ

ವಿಶ್ವವಿದ್ಯಾಲಯದ ಶೇಕಡಾ ೨೫ರಷ್ಟು ಆವರಣ ಹಸಿರುಮಯ: ಡಾ. ಬಿಡವೆ

ಕಲಬುರಗಿ: ಪೂಜ್ಯ ಡಾ. ಶರಣಬಸವಪ್ಪ ಅಪ್ಪಾಜಿಯವರ ದೂರದೃಷ್ಟಿಯಿಂದ ಇಂದು ಶರಣಬಸವ ವಿಶ್ವವಿದ್ಯಾಲಯದ ಆವರಣ ಶೇಕಡಾ ೨೫ರಷ್ಟು ಹಸಿರುಮಯವಾಗಿದೆ. ವಿವಿಯ ಛಾವಣಿಗಳ ಮೇಲೆ ಸೋಲಾರ್ ಅಳವಡಿಕೆ, ಸಸಿ ನೆಡುವಿಕೆ ಹಾಗೂ ಅದರ ನಿರ್ವಹಣೆ ಹಾಗೂ ಮರಗಳನ್ನು ಬೆಳೆಸುವುದು ಪೂಜ್ಯ ಅಪ್ಪಾಜಿಯವರು ಆರಂಭದಲ್ಲೆ ಯೋಚಿಸಿದ್ದರು ಎಂದು ವಿವಿ ಕುಲಸಚಿವ ಡಾ. ಅನಿಲಕುಮಾರ ಬಿಡವೆ ಹರ್ಷ ವ್ಯಕ್ತಪಡಿಸಿದರು. ಶರಣಬಸವ ವಿಶ್ವವಿದ್ಯಾಲಯದ ಸಿವಿಲ್ ಇಂಜಿನಿಯರಿಂಗ್ ವಿಭಾಗದ ವತಿಯಿಂದ ಭಾನುವಾರದಂದು ಆಯೋಜಿಸಿದ ವಿಶ್ವ ಪರಿಸರ ದಿನಾಚರಣೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಪರಿಣಿತರು ಹೇಳುವಂತೆ ಹವಾಮಾನ ಬದಲಾವಣೆ, ಭೌಗೋಳಿಕ ಬದಲಾವಣೆ ಹಾಗೂ ಜಾಗತಿಕ ತಾಪಮಾನದಿಂದಾಗಿ ಮನುಕುಲ ಅಪಾಯದ ಅಂಚಿನಲ್ಲಿದೆ. ಹಿಂದಿನ ದಿನಗಳಲ್ಲಿ ಇಷ್ಟೊಂದು ಕೈಗಾರಿಕರಣ, ನಗರೀಕರಣ ಹಾಗೂ ವಾಹನದಟ್ಟಣೆ ಇರಲಿಲ್ಲವಾದ್ದರಿಂದ ಯಾವುದೇ ಪರಿಸರ ಸಮಸ್ಯೆಗಳಿರಲಿಲ್ಲ. ಇಂದಿನ ಮಾನವನ ನಡುವಳಿಕೆಯಿಂದಾಗಿ ವಾತಾವರಣ ಕಲುಷಿತವಾಗಿದೆ. ಭಾರತದ ಅನೇಕ ದ್ವೀಪಗಳು ಹವಾಮಾನ ವೈಪರೀತ್ಯದಿಂದಾಗಿ ನಶಿಸುತ್ತಿವೆ, ಇದರಿಂದಾಗಿ ಔಷಧೀಯ ಗಿಡಗಳು ಹಾಳಾಗುತ್ತಿವೆ. ಪ್ರಾಣಿಗಳ ಜೀವ ಸಂಕುಲಕ್ಕೂ ತೊಂದರೆ ಉಂಟಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಇದನ್ನೂ ಓದಿ: ಧಾರವಾಡ ಜಿಲ್ಲೆಯ ನವಲಗುಂದದ ಹಠಯೋಗಿ ನಾಗಲಿಂಗಪ್ಪಜ್ಜ

ಮುಂದಿನ ದಿನಗಳಲ್ಲಿ ನಾವೆಲ್ಲರೂ ಹೆಚ್ಚು ಹೆಚ್ಚು ಗಿಡಮರಗಳನ್ನು ಬೆಳೆಸಬೇಕು. ವಾಹನಗಳನ್ನು ಅತಿ ಕಡಿಮೆ ಬಳಕೆ ಮಾಡುವುದರೊಂದಿಗೆ ವಾಯುಮಾಲಿನ್ಯ ತಡೆಗಟ್ಟಬಹುದೆಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ವಿವಿ ಸಮಕುಲಪತಿ ಪ್ರೊ.ವಿ.ಡಿ. ಮೈತ್ರಿ ಮಾತನಾಡಿ ಎಲ್ಲರೂ ಪ್ರಕೃತಿಯೊಂದಿಗೆ ಜೀವಿಸುತ್ತೆವೆ ಎಂದು ಪ್ರತಿಜ್ಞೆ ಮಾಡಬೇಕು. ಆರೋಗ್ಯ ರಕ್ಷಣೆಗೆ ವಿಷಕಾರಿ ವಾಯು ಮಾಲಿನ್ಯದಿಂದ ದೂರವಿರಬೇಕು. ಹೊರದೇಶಗಳಿಗಿಂತ ಪ್ರಕೃತಿಯೊಂದಿಗೆ ಜೀವಿಸುವ ಭಾರತದ ಜನರು ಅತಿ ಹೆಚ್ಚು ರೋಗನಿರೋಧಕ ಶಕ್ತಿ ಹೊಂದಿದ್ದಾರೆ. ಪರಿಸರ ರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ವಾಯುಮಾಲಿನ್ಯ ತಡೆಗಟ್ಟಲು ಪ್ರತಿಯೊಬ್ಬರು ಕನಿಷ್ಠ ಐದು ಗಿಡಗಳನ್ನು ಬೆಳೆಸಬೇಕು ಹಾಗೂ ಯುವಜನರು ವಾಹನಗಳನ್ನು ಬಿಟ್ಟು ಸೈಕಲ್ ತುಳಿಯುವತ್ತ ಮುಂದಾಗಬೇಕು ಎಂದು ವಿಧ್ಯಾರ್ಥಿಗಳಿಗೆ ಕಿವಿಮಾತನ್ನು ಹೇಳಿದರು.

ಡಾ. ಸಿದ್ರಾಮಪ್ಪ ಅವಂತಿ ಮಾತನಾಡಿ ಭಾರತದಲ್ಲಿ ಕರ್ನಾಟಕವು ಹಸಿರು ಪ್ರದೇಶ ಹೊಂದಿದ ರಾಜ್ಯಗಳಲ್ಲಿ ಐದನೇ ಸ್ಥಾನದಲ್ಲಿದೆ. ಅದರಲ್ಲೂ ಕಲ್ಯಾಣ ಕರ್ನಾಟಕ ಭಾಗವೂ ವಾಯುಮಾಲಿನ್ಯ ತಡೆಗಟ್ಟುವಲ್ಲಿ ಬಹಳ ಹಿಂದುಳಿದಿದೆ. ಭಾರತದಲ್ಲಿ ೭.೯೮% ಭಾಗವು ಅರಣ್ಯಪ್ರದೇಶ ಹೊಂದಿದ್ದು, ಕರ್ನಾಟಕದ ೧,೯೧,೭೯೧ ಚ.ಕಿ.ಮಿ. ಪ್ರದೇಶದ ೩೮,೨೮೪ ಚ.ಕಿ.ಮಿ. ಭಾಗವು ಅರಣ್ಯ ಪ್ರದೇಶ ಹೊಂದಿದೆ ಎಂದು ಮಾಹಿತಿ ನೀಡಿದರು. ಇದಕ್ಕಾಗಿ ನಾವು ನಿವೆಲ್ಲರೂ ವಾಯುಮಾಲಿನ್ಯ ತಡೆಗಟ್ಟಲು ಕೈ ಜೋಡಿಸಬೇಕಾಗಿದೆ ಎಂದರು.

ಇದನ್ನೂ ಓದಿ: ಸರಕಾರಿ ಕಾಲೇಜುಗಳಲ್ಲಿ ಪದವಿ ಪಡೆಯುವುದೇ ಹೆಮ್ಮೆಯ ಸಂಗತಿ: ಡಾ. ಉಮೇಶ್ ಜಾಧವ

ವಿಶ್ವಪರಿಸರ ದಿನಾಚರಣೆ ಪ್ರಯುಕ್ತ ಕಾಡು ಬೆಳೆಸಿ ಪರಿಸರ ಉಳಿಸಿ ಎಂಬ ಪ್ರತಿಜ್ಞಾ ವಿಧಿಯನ್ನು ಪ್ರೊ. ಕೇದಾರಗಿರಿ ಭೋದಿಸಿದರು. ಸಮಾರಂಭದಲ್ಲಿ ಡಾ. ಶಿವಕುಮಾರ ಜವಳಗಿ, ಡಾ. ಬಿ. ಎಸ್. ಪಾಟೀಲ, ಪ್ರೊ. ರಾಜಶೇಖರ ಎರಗೋಳ ವೇದಿಕೆ ಮೇಲಿದ್ದರು.

ಕಾರ್ಯಕ್ರಮವನ್ನು ಪ್ರೊ. ರಿಷಿಕೇಶ ನಿರೂಪಿಸಿದರು. ಪ್ರೊ.ಗಾಲಣ್ಣ ಸ್ವಾಗತಿಸಿದರೆ, ಪ್ರೊ. ಅಮರ ದೇಶಮುಖ ವಂದಿಸಿದರು.

ಇದನ್ನೂ ಓದಿ: ಯಂಗ್ ಇಂಡಿಯಾ ಕೆ ಬೋಲ್ ಸಿಜನ್-೨ ಪೋಸ್ಟರ್‌ ಬಿಡುಗಡೆ

emedialine

Recent Posts

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

6 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

8 hours ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

15 hours ago

ಸಿದ್ದ ಶ್ರೀ ಕಾರ್ಖಾನೆ ಪ್ರಾರಂಭವಾಗುವರೆಗೂ ಹೋರಾಟ: ವೀರಣ್ಣ ಗಂಗಾಣಿ

ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…

15 hours ago

ದಕ್ಷಿಣ ಭಾರತ ಅಂತರ ವಿಶ್ವವಿದ್ಯಾಲಯ ಮಹಿಳೆಯರ ಕಬಡ್ಡಿ ಕ್ರೀಡಾಕೂಟಕ್ಕೆ ಆಯ್ಕೆ

ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…

15 hours ago

ಪ್ರಿಯಾಂಕ್ ಖರ್ಗೆ ಜನ್ಮದಿನ; ರಕ್ತದಾನ ಶಿಬಿರಕ್ಕೆ ಶಾಸಕ ಪಾಟೀಲ ಚಾಲನೆ

ಕಲಬುರಗಿ: ನಗರದ ವಾರ್ಡ ನಂ.51.ರ  ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…

1 day ago