ಎರಡು ಸಾವಿರ ನೋಟಿನಲ್ಲಿ ಚಿಪ್ಪು ಇದೆ ಎಂದು ಕನ್ನಡಿಗರನ್ನು ಮಂಗ ಮಾಡಿದ ಮಿಸ್ಟರ್ ರಂಗನಾಥ್ ಅವರೇ ಸಾಯಿ ಪಲ್ಲವಿ ಅವರನ್ನು “ಬಾಯಿ ಮುಚ್ಕೊಂಡು ಸಿನಿಮಾ ಮಾಡು” ಅಂತ ಹೇಳೋಕೆ ನೀವ್ಯಾರು? ನಿಮ್ಮ ಹಾಗೆ ಮಧ್ಯಮದ ಎಥಿಕ್ಸ್ ನ ಮಾರಿಕೊಂಡವರಲ್ಲ ಸಾಯಿ ಪಲ್ಲವಿ ಅವರು. ಎಂಬಿಬಿಎಸ್ ಮಾಡಿ ವೈದ್ಯೆ ಆಗಬೇಕಿದ್ದ ಅವರು ಅನಿರೀಕ್ಷಿತ ಸಿನಿಮಾ ರಂಗಕ್ಕೆ ಬಂದಿದ್ದಾರೆ…
ಮಿಸ್ಟರ್ ರಂಗಣ್ಣ ಇದೇ ಸಾಯಿ ಪಲ್ಲವಿ ಅವರಿಗೆ ಮೂರು ವರ್ಷಗಳ ಹಿಂದೆ ಮುಖಕ್ಕೆ ಹಚ್ಚುವ ಕ್ರೀಮ್ ಒಂದರ ಜಾಹಿರಾತಿಗಾಗಿ ಬರೋಬ್ಬರಿ ಎರಡು ಕೋಟಿ ಆಫರ್ ಬಂದಿತ್ತು. ಅದನ್ನು ಅವರು ನಯವಾಗಿ ತಿರಸ್ಕರಿಸಿದರು. ಯಾಕೆ ಅಂತಾನಾದ್ರೂ ಗೊತ್ತಾ? ಆ ಕ್ರೀಮ್ ಹಚ್ಚೋದರಿಂದ ಬೆಳ್ಳಗಾಗುತ್ತೇವೋ ಇಲ್ಲವೋ ಬೇರೆ ಮಾತು.
ಆದರೆ ಬೆಳ್ಳಾಗುವುದೇ ಸೌಂದರ್ಯವಲ್ಲ, ಬೆಳ್ಳಗಿರದವರನ್ನು ಅಪಮಾನಿಸುವುದು ನನಗಿಷ್ಟವಿಲ್ಲ ಎಂದು ಸ್ಪಷ್ಟವಾಗಿ ಹೇಳಿದವರು ಸಾಯಿ ಪಲ್ಲವಿ ಅವರು. (ಅದರ ವರದಿಯನ್ನು ಕಾಮೆಂಟ್ ಬಾಕ್ಸ್ ನಲ್ಲಿ ಹಾಕಿದ್ದೇನೆ) ಅಂಥ ಒಂದು ಕನಿಷ್ಠ ಆಲೋಚನೆಯ ಪ್ರಜ್ಞೆಯಾದರೂ ನಿಮಗಿದೆಯೇ? ಮಾತನಾಡುವಾಗ ವಿವೇಚನೆ ಇರಲಿ. ಬೇರೆಯವರಿಗೆ ಬುದ್ದಿ ಹೇಳುವ ನೀವು ಬಾಯಿಗೆ ಬಂದಂತೆ ಮಾತನಾಡಬಹುದೇ? ಜಗತ್ತಿನ ಎಲ್ಲಾ ಸಮಸ್ಯೆಗಳಿಗೂ ನಿಮ್ಮಲ್ಲಿಯೇ ಪರಿಹಾರವಿದೆ ಎನ್ನುವಂತೆ ವರ್ತಿಸುವುದು ಎಷ್ಟು ಸರಿ? ಸಿದ್ದಿಯನ್ನು ಸುದ್ದಿಯಾಗಿ ಜನತೆಯ ಮುಂದಿಡೋದನ್ನು ಬಾಯಿ ಮುಚ್ಚಿಕೊಂಡು ನೀವು ಮಾಡಿ. ಸರಿ ಯಾವುದು ತಪ್ಪು ಯಾವುದು ಎಂಬುದನ್ನು ಜನ ನಿರ್ಧಾರ ಮಾಡ್ತಾರೆ.
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…