ಶಹಾಬಾದ: ಪ್ರಧಾನಿ ಮೋದಿ ಅವರಿಗೆ ಕೊಲೆ ಬೆದರಿಕೆ ಹಾಕಿರುವ ಹಾಗೂ ಟೈಲರ್ ಕತ್ತು ಸೀಳಿ ಘೋರ ಕಗ್ಗೊಲೆ ಮಾಡಿದಂತಹ ದು?ರ್ಮಿಗಳನ್ನು ನೇಣು ಗಂಭಕ್ಕೇರಿಸುವಂತೆ ಒತ್ತಾಯಿಸಿ ನಗರದ ವಿ.ಎಚ್.ಪಿ ಮತ್ತು ಬಜರಂಗ ದಳದವರು ಬಸವೇಶ್ವರ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
ಚಂದ್ರಕಾಂತ ಗೊಬ್ಬೂರಕರ್ ಮಾತನಾಡಿ, ರಾಜಸ್ತಾನದ ಉದಯಪುರದಲ್ಲಿ ನೂಪುರ್ ಶರ್ಮಾ ಹೇಳಿಕೆಯನ್ನು ಸಾಮಾಜಿಕ ಜಾಲತಾಣದಲ್ಲಿ ಬೆಂಬಲಿಸಿ ಪೋಸ್ಟ್ ಮಾಡಿದ್ದ ಕಾರಣಕ್ಕೆ ಕನ್ನಯ್ಯಾ ಲಾಲ್ ಎಂಬ ಟೈಲರ್ ನನ್ನು ಘೋರವಾಗಿ ಹತ್ಯೆಗೈದು ವಿಡಿಯೋ ವೈರಲ್ ಮಾಡಿ ತಮ್ಮ ಕೃತ್ಯ ಸಮರ್ಥಿಸಿಕೊಂಡಿದ್ದಲ್ಲದೇ ಪ್ರಧಾನಿ ಮೋದಿ ಅವರಿಗೂ ಇದೇ ಗತಿ ಬರಲಿದೆ ಎಂದು ಬೆದರಿಕೆ ಹಾಕಿದವರ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿದರು.
ಕೊಲೆಗಡುಕರೇ ತಾವು ಕೊಲೆ ಮಾಡಿದ್ದು ಎಂದು ನೇರವಾಗಿ ಹೇಳಿದ ಮೇಲೆ ಕಾನೂನಿನ ಪ್ರಕಾರ ಅವರಿಗೆ ಗಲ್ಲು ಶಿಕ್ಷೆಯಾಗಬೇಕು. ಪ್ರಜಾಪ್ರಭುತ್ವ ರೀತಿಯಲ್ಲಿ ಇಂತಹ ದು?ರ್ಮಿಗಳನ್ನು ಖಂಡಿಸುವ ಕೆಲಸವಾದಾಗ ಮಾತ್ರ ಇಂತಹವರ ದಮನ ಸಾಧ್ಯ ಎಂದರು. ಬರ್ಬರವಾಗಿ ಹತ್ಯೆಗೈದ ಕೊಲೆಗಡುಕರನ್ನು ಹಿಂದೂ ಸಮಾಜ ಕ್ಷಮಿಸುವುದಿಲ್ಲ. ಕನ್ನಯ್ಯಾ ಲಾಲ್ ಕುಟುಂಬದ ಜೊತೆಗೆ ಇಡೀ ಹಿಂದೂ ಸಮಾಜ ಇದೆ. ವಿಶ್ವ ಸಂಸ್ಥೆ ಕೂಡ ಇಂತಹ ಘಟನೆಗಳಾದಾಗ ಮತ್ತು ಘಟನೆಯ ಹಿಂದಿರುವ ಮತ್ತು ಅವರಿಗೆ ಬೆಂಬಲ ನೀಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ದು?ರ್ಮಿಗಳ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.
ಹಿರಿಯರಾದ ಭೀಮರಾವ ಸಾಳುಂಕೆ, ಕನಕಪ್ಪಾ ದಂಡಗುಳಕರ್, ಬಸವರಾಜ ಸಾತ್ಯಾಳ, ಸುಭಾ? ಜಾಪೂರ, ದಿನೇಶ್ ಗೌಳಿ, ರಾಮು ಕುಸಾಳೆ, ನಿಂಗಪ್ಪ ಹುಳಗೊಳ, ಸಾಯಿಬಣ್ಣ ಬೆಳಗುಂಪಿ, ಅನಿಲ್ ಹಿಬಾರೆ, ಬಸವರಾಜ ಮದ್ರಕಿ, ಶಿವಾನಂದ ಪಾಟೀಲ, ದುರ್ಗಪ್ಪ ಪವಾರ, ಶಿವು ತಳವಾರ, ಸಂಜೀವ ಸೂಡಿ,ಗೋವಿಂದ ಕುಸಾಳೆ, ಅರುಣ್ ಪಟ್ಟಣಕರ, ಜ್ಯೋತಿ ಶಮ೯, ಶಶಿಕಲಾ ಸಜ್ಜನ, ಜಯಶ್ರೀ ಸೂಡಿ ಹಾಗೆ ನೂರಾರು ಸಂಖ್ಯೆಯಲ್ಲಿ ಜನ ಭಾಗವಹಿಸಿದ್ದರು. ಪಿ. ಎಸ್. ಐ. ಅಶೋಕ ಪಾಟೀಲ ಮತ್ತು ಸುವರ್ಣ ಮಲಶೆಟ್ಟಿ ಹಾಗೂ ಸಿಬ್ಬಂದಿಯವರ ಬೀಗಿ ಪೋಲೀಸ ಬಂದೋಬಸ್ತ್ ಮಾಡಲಾಗಿತ್ತು.