ಶಹಾಬಾದ:ತಾಲೂಕಾಡಳಿತ, ಕಾರ್ಮಿಕ ಇಲಾಖೆ, ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿ, ಸಾರ್ವಜನಿಕ ಶಿಕ್ಷಣ ಇಲಾಖೆ, ಸಂಸ್ಕಾರ ಪ್ರತಿಷ್ಠಾನ ಸಂಸ್ಥೆ, ಮಾರ್ಗದರ್ಶಿ ಸಂಸ್ಥೆ,ಸಹರಾ ಸಂಸ್ಥೆ, ಮಕ್ಕಳ ಸಹಾಯವಾಣಿ-೧೦೯೮ ಕಲಬುರಗಿ ಇವರುಗಳ ಸಂಯುಕ್ತಾಶ್ರಯದಲ್ಲಿ ವಿಶ್ವ ಬಾಲಕಾರ್ಮಿಕರ ಪದ್ದತಿ ವಿರೋಧಿ ದಿನಾಚರಣೆ ಅಂಗವಾಗಿ ಜಾಥಾ ಮತ್ತು ಮಕ್ಕಳು ಮತ್ತು ಪೋ?ಕರಿಗೆ ಶಿಕ್ಷಣದ ಅರಿವು ಮೂಡಿಸುವ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ತಹಸೀಲ್ದಾರ ಸುರೇಶ ವರ್ಮಾ ಅವರು ಮಾತನಾಡಿ, ಆತ್ಮಸಾಕ್ಷಿಯಾಗಿ ಪ್ರಮಾಣ ಮಾಡುವುದೇನೆಂದರೆ, ಬಾಲ ಕಾರ್ಮಿಕ ಪದ್ಧತಿಯನ್ನು ತಡೆಗಟ್ಟಲು ಹಾಗೂ ನಿರ್ಮೂಲನೆಗೆ ಶಕ್ತಿಮೀರಿ ಪ್ರಯತ್ನಿಸುತ್ತೇನೆ. ಹದಿನಾಲ್ಕು ವ?ದೊಳಗಿನ ಶಾಲೆಯಿಂದ ಹೊರಗಡೆ ಇರುವ ಯಾವುದೇ ಮಗು ಕಂಡುಬಂದರೆ, ಅವರ ಪೋ?ಕರಿಗೆ ತಿಳುವಳಿಕೆ ಹೇಳಿ, ಆ ಮಗುವನ್ನು ಶಾಲೆಗೆ ಸೇರಿಸಲು ಹಾಗೂ ಕರ್ನಾಟಕವನ್ನು ಬಾಲಕಾರ್ಮಿಕ ಮುಕ್ತ ರಾಜ್ಯವನ್ನಾಗಿಸಲು ಪ್ರಯತ್ನಿಸುತ್ತೇವೆಂದು ಪ್ರಮಾಣ ಮಾಡುತ್ತೇವೆ ಎಂದು ಪ್ರತಿಜ್ಞಾ ವಿಧಿಯನ್ನು ಭೋದನೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಇಂದಿನ ಮಕ್ಕಳಿಗೆ ಶಿಕ್ಷಣವು ಅತಿ ಮುಖ್ಯವಾದದ್ದು, ಆದರಿಂದ ಈ ಬಾಲ ಕಾರ್ಮಿಕರನ್ನು ಕೆಲಸಕ್ಕೆ ತೆಗೆದುಕೊಳ್ಳುವವರ ಮೇಲೆ ಕಾನೂನು ಕ್ರಮ ಜರುಗಿಸಬೇಕಾಗಿದೆ . ಬಾಲ ಕಾರ್ಮಿಕ ಪದ್ಧತಿಯನ್ನು ಕೊನೆಗೊಳಿಸಲು ಎಲ್ಲರೂ ಸಹ ಕೈ ಜೋಡಿಸಬೇಕಾಗಿದೆ. ಇಂದಿನ ದಿನಗಳಲ್ಲಿ ಅಭಿವೃದ್ಧಿ ಹೊಂದಿದ ರಾ?ಗಳಲ್ಲಿ ಬಾಲ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಅಲ್ಲದೆ ಕೈಗಾರಿಕಾ ದೇಶಗಳಲ್ಲಿ ಬಾಲಕರನ್ನು ಒತ್ತಾಯ ಪೂರ್ವಕವಾಗಿ ದುಡಿಮೆ ಮಾಡಿಸಲಾಗುತ್ತಿದೆ. ಅದರಲ್ಲೂ ಸಹ ಬಾಲಕಾರ್ಮಿಕ ಪದ್ದತಿಯು ಮಕ್ಕಳ ಮುಂದಿನ ಉತ್ತಮ ಭವಿ?ಕ್ಕಾಗಿ ಬೇಕಾಗಿರುವ ಕೌಶಲ್ಯ ಮತ್ತು ವಿಧ್ಯಾಭ್ಯಾಸಕ್ಕೆ ಅಡ್ಡಿಯನ್ನುಂಟು ಮಾಡುವುದರ ಜೊತೆಗೆ, ನಿರಂತರ ದಾರಿದ್ರ್ಯ ಹಾಗೂ ಸ್ಪರ್ಧಾತ್ಮಕತೆ, ಉತ್ಪಾದಕತೆ ಮತ್ತು ಆದಾಯದ ಸಂಭವನೀಯತೆಯ ನ?ವು ರಾ?ದ ಆರ್ಥಿಕ ಪ್ರಗತಿಗೆ ಅಡ್ಡಿಯುಂಟು ಮಾಡುತ್ತದೆ ಎಂದರು.
ಬಾಲಕಾರ್ಮಿಕ ಪದ್ದತಿಯಿಂದ ಮಕ್ಕಳನ್ನು ತೆಗೆದು ಹಾಕುವುದು, ಅವರಿಗೆ ವಿಧ್ಯಾಭ್ಯಾಸ ಒದಗಿಸುವುದು ಮತ್ತು ಅವರ ಕುಟುಂಬಗಳಿಗೆ ನೆರವಾಗುತ್ತಾ, ತರಬೇತಿ ಮತ್ತು ಉದ್ಯೋಗದ ಅವಕಾಶಗಳನ್ನು ನೇರವಾಗಿ ಕೊಡುವುದರಿಂದ, ವಯಸ್ಕರಿಗೆ ಯೋಗ್ಯವಾದ ಕೆಲಸ ಕೊಡುವುದನ್ನು ರಚಿಸಿದಂತಾಗುತ್ತದೆ ಎಂದು ಹೇಳಿದರು.
ಶಾಲಾ ಮಕ್ಕಳೊಂದಿಗೆ ನಗರದ ಪ್ರಮುಖ ರಸ್ತೆಗಳಲ್ಲಿ ಜಾಗೃತಿ ಜಾಥಾ ನಡೆಸಿ ಸಾರ್ವಜನಿಕರಿಗೆ ಅರಿವು ಮೂಡಿಸಿದರು.
ಈ ಸಂದರ್ಭದಲ್ಲಿ ಸಿಡಿಪಿಓ ಬಿ.ಎಸ್.ಹೊಸಮನಿ,ಕಲಬುರಗಿ ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿ ಯೋಜನಾ ನಿರ್ದೇಶಕ ಸಂತೋಷ ಕುಲಕರ್ಣಿ, ಚಿತ್ತಾಪೂರ ಕಾರ್ಮಿಕ ಇಲಾಖೆಯ ಕಾರ್ಮಿಕ ನಿರೀಕ್ಷಕ ಶಿವರಾಜ ಪಾಟೀಲ, ಆಸ್ಪಲ್ಲಿ ಶಾಲೆಯ ಮುಖ್ಯಗುರುಮಾತೆ ಶೋಭಾ ಅರಳಿ, ಶಿಕ್ಷಕರಾದ ಸಂದುಲಾಲ ಬಸೂದೆ ಇತರರು ಇದ್ದರು.