ಸುರಪುರ: ಕಳೆದ ಮೂರು ದಿನಗಳಿಂದ ನಿರಂತರವಾಗಿ ನಡೆದ ನಗರದ ಶ್ರೀ ರುಕ್ಮಿಣಿ ಪಾಂಡುರಂಗ ದೇವಸ್ಥಾನದಲ್ಲಿನ ಆಷಾಢ ಏಕಾದಶಿ ಕಾರ್ಯಕ್ರಮದಲ್ಲಿ ಗೋಪಾಳ ಕಾವಲಿ ನಡೆಸುವ ಮೂಲಕ ಸಮಾರೋಪಗೊಳಿಸಲಾಯಿತು.
ಕಳೆದ ಮೂರು ದಿನಗಳಿಂದ ರುಕ್ಮಿಣಿ ಪಾಂಡುರಂಗ ದೇವರಿಗೆ ವಿಶೇಷ ಪೂಜೆ ಕೈಂಕರ್ಯ ಹಾಗೂ ನಿತ್ಯವು ಸಂಜೆ ಸಂಕೀರ್ತನೆ,ಭಜನೆ ಹಾಗು ದಾಸವಾಣಿ ಕಾರ್ಯಕ್ರಮಗಳನ್ನು ನಡೆಸಲಾಗಿತ್ತು.ಮಂಗಳವಾರ ಬೆಳಿಗ್ಗೆ ಏಕಾದಶಿ ಅಂಗವಾಗಿ ಗೋಪಾಳ ಕಾವಲಿ ನಡೆಸಲಾಯಿತು.ಮೊಸರಿನ ಗಡಿಗೆಯನ್ನು ನೇತು ಹಾಕಿ ಅನೇಕ ಭಕ್ತಾದಿಗಳು ಭಾಗವಹಿಸಿ ಮೊಸರಿನ ಮಡಿಕೆ ಹೊಡೆಯುವ ಕಾರ್ಯಕ್ರಮ ಅದ್ಧೂರಿಯಾಗಿ ನಡೆಸಲಾಯಿತು.
ಈ ಸಂದರ್ಭದಲ್ಲಿ ಮುಖಂಡರಾದ ಶ್ರೀಪಾದ ಗಡ್ಡದ್,ಶ್ರೀಕರ ಭಟ್ ಜೋಷಿ, ರವಿ ಗುತ್ತೇದಾರ,ಸುರಜ್ ವರ್ಮ,ರಮೇಶ ಕುಲಕರ್ಣಿ,ಕಿರಣ್,ಸುರೇಶ ಕುಲಕರ್ಣಿ,ಅರುಣ್ ಸೇಠ್,ಗೋಪಾಲ್ ಮತ್ತು ದೇವಸ್ಥಾನ ಸಮಿತಿಯ ಅಧ್ಯಕ್ಷರು,ಉಪಾಧ್ಯಕ್ಷರು ಹಾಗೂ ಸದಸ್ಯರು ಸೇರಿದಂತೆ ಅನೇಕರು ಭಾಗವಹಿಸಿದ್ದರು.