ಕಮಲಾಪೂರ: ತಾಲೂಕಿನ ಬೆಳಕೋಟ ಬಳಿಯ ಗಂಡೋರಿಯ ಜಲಾಶಯದ ನೀರನ್ನು ಬೀದರ ಜಿಲ್ಲೆಯ ಬಸವಕಲ್ಯಾಣಕ್ಕೆ ನೀರು ಪೂರೈಸುವ ನಿರ್ಧಾರಕ್ಕೆ ಬಿಜೆಪಿ ಮುಖಂಡ ಮಲ್ಲಿಕಾರ್ಜುನ ಮರತೂರಕರ್ ವಿರೋಧ ವ್ಯಕ್ತಪಡಿಸಿದ್ದಾರೆ.
ಕಲಬುರಗಿ ಜಿಲ್ಲೆಯಲ್ಲಿಯೇ ಕುಡಿಯುವ ನೀರಿನ ತೀವ್ರ ಸಂಕಷ್ಟ ಇರುವಾಗ ನೆರೆಯ ಬಸವಕಲ್ಯಾಣಕ್ಕೆ ನೀರು ಕೊಂಡೊಯ್ಯೋ ನಿರ್ಧಾರ ಸರಿಯಾದುದಲ್ಲ ಎಂದಿದ್ದಾರೆ.ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಕಲಬುರಗಿ ಹೇಳಿ ಕೇಳಿ ಬರದ ಜಿಲ್ಲೆ, ಪ್ರತಿ ವರ್ಷ ನೂರಾರು ಹಳ್ಳಿಗಳಲ್ಲಿ ಕುಡಿಯುವ ನೀರಿಗೆ ತತ್ವಾರ ಉಂಟಾಗುತ್ತಿದೆ.ಹೀಗಿರುವಾಗ ಬಸವಕಲ್ಯಾಣ ಶಾಸಕ ಶರಣು ಸಲಗರ ೮೯ ಕೋಟಿ ರೂಪಾಯಿ ಯೋಜನೆಗೆ ರಾಜ್ಯ ಸಚಿವ ಸಂಪುಟ ಒಪ್ಪಿಗೆ ಸಿಕ್ಕಿದೆ ಎಂದು ಹೇಳುತ್ತಿದ್ದಾರೆ.ಬಸವಕಲ್ಯಾಣದ ೪೮ ಗ್ರಾಮಗಳಿಗೆ ಶುದ್ಧ ಕುಡಿಯುವ ನೀರು ಪೂರೈಸುವುದಾಗಿ ಹೇಳುತ್ತಿದ್ದಾರೆ.ಆದರೆ ಕಲಬುರಗಿ ಜಿಲ್ಲೆಯ ಜನ ಕುಡಿಯುವ ನೀರಿಗಾಗಿ ಎಲ್ಲಿಗೆ ಹೋಗಬೇಕೆಂದು ಪ್ರಶ್ನಿಸಿದರು.
ಮಹಾಗಾಂವ, ಕಮಲಾಪೂರ, ದಮ್ಮೂರ, ಕುರಿಕೋಟಾ,ಸಿರಗಾಪೂರ, ಕಲಬುರಗಿ, ಅಪಚಂದ, ಮಡಕಿ ಸೇರಿ ಈ ಭಾಗಗಳಲ್ಲಿನ ಹಳ್ಳಿಗಳಿಗೆ ಕುಡಿಯುವ ನೀರು ಪೂರೈಸಲು ೧.೧ ಟಿಎಂಸಿ ನೀರು ಇದೆ.ಕುಡಿಯುವ ನೀರು ಮನುಷ್ಯರಿಗೆ ಅತ್ಯಂತ ಅವಶ್ಯಕತೆಗಳಲ್ಲಿ ಒಂದಾಗಿದೆ.ಅದು ಅವರ ಮೂಲಭೂತ ಹಕ್ಕು ಸಹ ಆಗಿದೆ.ಆದರೆ ನಮಗೆ ಕುಡಿಯಲು ನೀರು ಇಲ್ಲದಿರುವಾಗ, ಬಸವಕಲ್ಯಾಣಕ್ಕೆ ಯಾಕೆ ನೀರು ಬಿಡಬೇಕು ಎಂದು ಪ್ರಶ್ನಿಸಿದರು? ಈ ಹಿಂದೆ ಈ ರೀತಿಯ ನಿರ್ಧಾರವನ್ನು ಯಾವುದೇ ಸರಕಾರವು ತೆಗೆದುಕೊಂಡಿರಲಿಲ್ಲ.ಯಾರು ನಾಗರಿಕರ ಪರವಾಗಿ ಪ್ರಾಮಾಣಿಕ ಪರವಾಗಿ ಕೆಲಸ ಮಾಡುತ್ತಿದ್ದಾರೆ ಎಂಬುದನ್ನು ಗಮನಿಸಬೇಕು.ಕೂಡಲೇ ಸರಕಾರ ಯೋಜನೆಯ ಮರುಪರಿಶೀಲನೆ ನಡೆಸಿ, ಕೊಟ್ಟಿರುವ ಅನುಮೋದನೆ ವಾಪಸ್ ಪಡೆಯಬೇಕು ಎಂದು ಅವರು ಒತ್ತಾಯಿಸಿದರು.
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…