ಹೈದರಾಬಾದ್ ಕರ್ನಾಟಕ

ಸುಭಾಷಚಂದ್ರ ಭೋಸರ ೧೨೫ನೇ ಜನ್ಮ ವಾರ್ಷಿಕ ನಿಮಿತ್ತ ರಾಣಿ ಜಾನ್ಸಿ ರೆಜಮೆಂಟ್ ಸ್ಥಾಪನೆ ದಿನಾಚರಣೆ

ಕಲಬುರಗಿ: ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ (ಂIಒSS) ಜಿಲ್ಲಾ ಸಮಿತಿಯಿಂದ ಇಂದು ನೇತಾಜಿ ಸುಭಾಷಚಂದ್ರ ಭೋಸರವರ ೧೨೫ನೇ ಜನ್ಮ ವಾರ್ಷಿಕ ಅಂಗವಾಗಿ ರಾಣಿ ಜಾನ್ಸಿ ರೆಜಮೆಂಟ್ ಸ್ಥಾಪನೆ ದಿನವನ್ನು ಮಹಿಳೆಯರ ಮೆರವಣಿಗೆ ಮೂಲಕ ನೇತಾಜಿ ಜಿಂದಾ ಬಾದ ಜಾನ್ಸಿ ರಾಣಿ ರೆಜಮೆಂಟ್ ಜಿಂದಾಬಾದ ಎಂದು ಘೋಷಣೆ ಕುಗುತ್ತಾ, ಎಲ್ಲಾ ಮಹಿಳೆಯವರು ಉತ್ಸಾಹದಿಂದ ಭಾಗವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ (ಂIಒSS) ರಾಜ್ಯ ಸಮಿತಿಯ ಉಪಾಧ್ಯಕ್ಷರಲ್ಲಿ ಒಬ್ಬರಾದ ಕಾ.ಸಿಮಾ ಎಸ್.ಜಿ, ಅವರು ಮಾತನಾಡುತ್ತಾ ನೇತಾಜಿ ಸುಭಾಷ ಚಂದ್ರ ಬೋಸರವರು ಒಬ್ಬ ಅಪ್ರತಿಮ ತ್ಯಾಗ ಸಾಹಸಗಳ ಮೂರ್ತ ಸ್ವರೂಪವಾಗಿದ್ದರು, ಅವರು ಶೋಷಿತ ಜನತೆಯ ಸ್ಪೂರ್ತಿಯ ಸೆಲೆ ಅಪಾರ ಕಷ್ಟ, ನಿಷ್ಟೂರಗಳನ್ನು ಎದುರಿಸಿ ಸ್ವಾತಂತ್ರ್ಯದ ಪತಾಕೆಯು ಬಾನಿನ ಎತ್ತರಕ್ಕೆ ಹಾರಿಸಿದರು. ಅವರು ಸ್ವಾತಂತ್ರ್ಯ ಸಂಗ್ರಾಮದಲ್ಲಿನ ರಾಜಿ ರಹಿತ ಹೋರಾಟದ ಸಂದಾನತಿತಾ ಪಂಥದ ಅಗ್ರಗಣ್ಯ ನಾಯಕರಾಗಿದರು.

ನೇತಾಜಿಯವರು ದೃಷ್ಟಿಯಲ್ಲಿ ಸ್ವಾತಂತ್ರ್ಯ ಪರಿಕಲ್ಪನೆ ಕೇವಲ ರಾಜಕೀಯ ಸ್ವಾತಂತ್ರ್ಯವಷ್ಟೇ ಆಗಿರದೆ. ಸಾಮಾಜಿಕ ಮತ್ತು ಆರ್ಥಿಕ ಸ್ವಾತಂತ್ರ್ಯವಾಗಿತ್ತು. ಅವರು ಸರ್ವಸಮಾನತೆ ಸ್ವಾತಂತ್ರ್ಯದ ಪರಿಕಲ್ಪನೆಯನ್ನು ಪ್ರತಿಪಾಧಿಸಿದರು. ಧರ್ಮ ನಿರುಪೇಕ್ಷ ಮಾನವತಾವಾದವನ್ನು ಎತ್ತಿ ಹಿಡಿದರು. ನೇತಾಜಿ ಸುಭಾಷ ಚಂದ್ರ ಭೋಸ ರವರು ಬ್ರಿಟಿಷರ ವಿರುದ್ಧ ಹೋರಾಡಲು ಇನಡಿಯನ್ ನ್ಯಾಷನಲ್ ಆರ್ಮಿ Iಓಂಗೆ ನೇತೃತ್ವ ನೀಡಿದರು ಮತ್ತು ಮಹಿಳೆಯರು ಪುರುಷರಿಗೆ ಸರಿಸಮಾನರೆಂದು ಸಾಭೀತುಪಡಿಸುವ ದಿಕ್ಕಿನಲ್ಲಿ ಮಹಿಳಾ ಯೋದೇಯರ ಪಡೆಯೊಂದನ್ನು ಸ್ಥಾಪಿಸಿದರು. ಅದೇ ಪ್ರಸಿದ್ಧ ರಾಣಿ ಜಾನ್ಸಿ ರೆಜ್‌ಮೆಂಟ್.

ಮಹಿಳೆಯವರು ಮನೆಯಿಂದ ಹೊರಬರುವುದೇ ಕಷ್ಟವಾಗಿದ್ದ ಕಾಲದಲ್ಲಿ ನೇತಾಜಿಯವರು ಮಹಿಳಾ ಯೋಧೆಯರ ಪಡೆಯೊಂದನ್ನು ಸೃಷ್ಟಿಸಿದ್ದು ಮತ್ತು ಶಸ್ತ್ರಸ್ತ ತರಬೇತಿ ನೀಡಿದ್ದು, ಒಂದು ಅದ್ಬುತ ಕಾರ್ಯವಾಗಿತ್ತು. ಹೀಗೆ ಮಹಿಳೆಯರಿಗಾಗಿ ಒಂದು ಸೇನಾ ತುಕಡಿಯನ್ನು ಸಿದ್ಧಪಡಿಸಿದ್ದು, ಇಡಿ ವಿಶ್ವದಲ್ಲಿಯೇ ಒಂದು        ಅಭೂತಪೂರ್ವ ವಿದ್ಯಾಮಾನ. ಇದು ಅನನ್ಯ ಸಹಾಸ ಪ್ರಯತ್ನವೇ ಸರಿ. ಏಕೆಂದರೆ ಮಹಿಳೆಯರು ಸಂಘಟನೆ, ರಾಜಕೀಯ ಚಟುವಟಿಕೆ, ಬಹಿರಂಗ ಸಭೆ, ಮೆರವಣಿಗೆಗಳಲ್ಲಿ ಭಾಗವಹಿಸುವುದರ ಕುರಿತು ಭಿನ್ನಾಭಿಪ್ರಾಯವಿದ್ದವು ಏಕೆಂದರೆ, ಉಳಿಗ್ಯಾ ಮಾನ್ಯ ಚಿಂತನೆಗಳ ಪ್ರಭಾವವು ಸಾಮಾಜದಲ್ಲಿ ಎಷ್ಟು ಆಳವಾಗಿ ಬೇರೂರಿತ್ತು ಎಂಬುವುದು ನಾವಿಂದು ಊಹಿಸಬಹುದು.

೧೯೪೩ ಜುಲೈ – ೦೯ ರಂದು ಸಿಂಗಾಪೂರದಲ್ಲಿ ನೇತಾಜಿ ಭಾಷಣ ಕೇಳಲು ನೇರವೇರಿದವರು ಲಕ್ಷಕ್ಕಿಂತಲೂ ಹೆಚ್ಚು ಜನ ನೇತಾಜಿಯವರ ಮೈನವಿರೇಳಿಸಿತ್ತು. ಸ್ಪೂರ್ತಿದಾಯಕ ಮಾತುಗಳನ್ನು ಮೈಯೆಲ್ಲಾ ಕಿವಿಯಾಗಿ ಕೇಳಿದರು. ಹುರುಪಿನಿಂದ ಸ್ಪಂದಿಸಿದರು. ಅದರಲ್ಲೂ ಅವರು ಹೆಣ್ಣು ಮಕ್ಕಳನ್ನು ಉದ್ದೇಶಿಸಿ, ವೀರ ಭಾರತೀಯ ಮಹಿಳೆಯರ ಒಂದು ಸೇನಾ ತುಕಡಿಯ ರಚನೆ ಅವಶ್ಯಕತೆ ಇದೇ ಎಂದು ಹೇಳಿದರು. ಆ ಮಾತುಗಳು ಹೆಣ್ಣು ಮಕ್ಕಳಲ್ಲಿ ಸಮಾರೋಸ್ತ್ಸಹ ತುಂಬಿದವು. ಆ ದಿನ ರಾಣಿ ಜಾನ್ಸಿ ರೆಜ್‌ಮೆಂಟ್ ನಾಂಧಿ ಹಾಕಿತ್ತು.

ಅವರು ಕರೆಗೆ ಹೋ ಗೊಟ್ಟು ಮೂರು ದಿನಗಳ ನಂತರ ಅಂದರೆ ಜುಲೈ-೧೨ ರಂದು ಕ್ಯಾಪ್ಟನ್ ಲಕ್ಷ್ಮೀ ರವರ ನೇತೃತ್ವದಲ್ಲಿ ಮಹಿಳೆಯರೆಲ್ಲ ಒಂದು ಗೂಡಿ ನೇತಾಜಿಯವರಿಗೆ ಪರೆಡ ಮೂಲಕ ಹೋರಾಟದ ವಂದನೆಗಳನ್ನು ಅರ್ಪಿಸಿದರು. ಅಂದಿನಿಂದ Iಓಂ ನಲ್ಲಿ ಪ್ರತ್ಯೇಕವಾದ ತುಕಡಿಯೊಂದು ತರಬೇತಿಯನ್ನು ಪಡೆಯಲು ಪ್ರಾರಂಭಿಸಿತ್ತು.

ರಾಣಿ ಜಾನ್ಸಿ ರೆಜ್‌ಮೆಂಟ್ ಬಲವರ್ಧನೆ ಹೊಂದಿತ್ತು ನೇತಾಜಿಯವರು ಕಂಡ ಕನಸು ನವ ಸಮಾಜದ ಭಾರತ ಆದರೆ ಇಂದಿನ ಭಾರತ ದೇಶದಲ್ಲಿ ಮಹಿಳೆಯರ ಪರಿಸ್ಥೀತಿ ದಿನ ಕಳೆದಂತೆ ತುಂಬಾ ಶೋಚನೆಯವಾಗಿದೆ. ಹಿಂದಿನ ಪುರುಷ ಪ್ರಧಾನ ಸಮಾಜದಿಂದ ಮಹಿಳೆಯರ ಮೇಲೆ ಪ್ರತಿ ದಿನ ಹೆಚ್ಚುತ್ತಿರುವ ಅತ್ಯಾಚಾರ, ದೌರ್ಜನ್ಯಗಳು, ಕಿರುಕುಳ, ಕೊಲೆ ದರೋಡೆ ಪ್ರಕರಣಗಳು ಇದಕ್ಕೆ ಮೂಲ ಕಾರಣ ಇವತ್ತಿನ ಆಶ್ಲೀಲಾ ಸೀನಿಮಾ ಸಾಹಿತ್ಯ ಪ್ರದರ್ಶನಗಳನ್ನು ಆಳುತ್ತಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅನುಸರಿಸುತ್ತಿರುವ ಮಹಿಳಾ ವಿರೋಧಿ ನೀತಿಗಳು, ಅದರಲ್ಲಿ ಪ್ರಮುಖವಾಗಿ ಬೆಲೆ ಏರಿಕೆ, ನಿರುದ್ಯೋಗ, ಬಡತನ, ಭ್ರಷ್ಟಚಾರದಂತಹ ಸಮಸ್ಯೆಗಳಿಂದಲೂ ಮಹಿಳೆಯವರು ಹೊರತಾಗಿಲ್ಲ. ಈ ಜ್ವಲಂತ ಸಮಸ್ಯೆಗಳನ್ನು ಬಗೆಹರಿಸುವ ಬದಲು ಇವತ್ತೀನ ಸರ್ಕಾರಗಳು ಜಾತಿ, ಕೋಮುವಾದಿಗಳಂತಹ ವಿಷಬಿಜವನ್ನು ಬೀತಿ ಜನಗಳ ಐಕ್ಯತೆಯನ್ನು ಹೊಡೆಯುವಲ್ಲಿ ನಿರತವಾಗಿವೆ. ಈ ಎಲ್ಲಾ ಸಮಸ್ಯೆಗಳಿಂದ ಮಹಿಳೆ ಮುಕ್ತವಾಗಬೇಕೆಂದರೆ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಸಂಘಟಿತರಾಗಿ ಹೋರಾಟಗಳನ್ನು ಬೆಳೆಸಬೇಕೆಂದು ಕರೆ ನೀಡಿದರು.

(ಂIಒSS) ನ ಜಿಲ್ಲಾಧ್ಯಕ್ಷರಾದ ಕಾ.ಗುಂಡಮ್ಮಾ ಮಡಿವಾಳ, ನೇತಾಜಿಯವರ ಕನಸು ನನಸು ಮಾಡುವ ಜವಾಬ್ದಾರಿಯನ್ನು ಇಂದು ನಮ್ಮೆಲ್ಲರ ಮೇಲೆ ನಿಂತಿದೆ. ಅವರ ಕನಸನ್ನು ಪೂರ್ಣಗೊಳಿಸುವ ನಿಟ್ಟಿನಲ್ಲಿ ಎಲ್ಲಾ ಮಹಿಳೆಯರು ಶೈಕ್ಷಣಿಕವಾಗಿ, ರಾಜಕೀಯವಾಗಿ, ಸಾಂಸ್ಕೃತಿಕವಾಗಿ ಜಾಗೃತರಾಗಬೇಕೆಂದು ಕರೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾ.ರಾಧ, (ಂIಒSS) ನ ಜಿಲ್ಲಾ ಸಮಿತಿ ಸದಸ್ಯರು ವಹಿಸಿಕೊಂಡಿದ್ದರು. ಅಲ್ಲದೇ ಸಭೆಯಲ್ಲಿ ಇನ್ನಿತರ ಮಹಿಳೆಯರಾದ ರೂಪಾ, ಸಾಬಮ್ಮ, ಜಯಶ್ರೀ, ಮಹಾದೇವಿ.ಹೆಚ್. ಮಹಾದೇವಿ. ಎಂ., ರಾಧಿಕಾ, ಶೀಲ್ಪ, ರೇಣುಕಾ, ಕೋಕಿಲಾ, ಸುನಿತಾ, ಜಯಶ್ರೀ.ಕೆ., ಸಂಗೀತಾ, ಶರಣಮ್ಮ.ಕೆ., ಶರಣಮ್ಮ.ಎಂ., ಹಾಗೂ ಇನ್ನಿತರರು ಭಾಗವಹಿಸಿದರು.

emedialine

Recent Posts

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

1 hour ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

8 hours ago

ಸಿದ್ದ ಶ್ರೀ ಕಾರ್ಖಾನೆ ಪ್ರಾರಂಭವಾಗುವರೆಗೂ ಹೋರಾಟ: ವೀರಣ್ಣ ಗಂಗಾಣಿ

ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…

8 hours ago

ದಕ್ಷಿಣ ಭಾರತ ಅಂತರ ವಿಶ್ವವಿದ್ಯಾಲಯ ಮಹಿಳೆಯರ ಕಬಡ್ಡಿ ಕ್ರೀಡಾಕೂಟಕ್ಕೆ ಆಯ್ಕೆ

ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…

8 hours ago

ಪ್ರಿಯಾಂಕ್ ಖರ್ಗೆ ಜನ್ಮದಿನ; ರಕ್ತದಾನ ಶಿಬಿರಕ್ಕೆ ಶಾಸಕ ಪಾಟೀಲ ಚಾಲನೆ

ಕಲಬುರಗಿ: ನಗರದ ವಾರ್ಡ ನಂ.51.ರ  ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…

19 hours ago

ಬಡವರಿಗೆ ಹಣ್ಣು-ಹಂಪಲು ವಿತರಣೆ

ಕಲಬುರಗಿ: ಕರ್ನಾಟಕ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಚಿವ ಪ್ರಿಯಾಂಕ್ ಖರ್ಗೆ ಅವರ ಜನ್ಮದಿನದ ಪ್ರಯುಕ್ತ  ಜೈ ಕನ್ನಡಿಗರ…

19 hours ago