ಕಲಬುರಗಿ; ಸಮಾಜಿಕ ಪರಿವರ್ತನಾ ಕಾರ್ಯಕರ್ತ, ಅಂಬಿಗ ವಾಹಿನಿಯ ವರದಿಗಾರ ಅಮರೇಶ ಮೇಲೆ ಹಲ್ಲೆ ನಡೆಸಿದ ಲಿಂಗಸೂರು ಪಿ.ಎಸ್.ಐ ಮತ್ತು ಇನ್ನಿತರರ ಮೇಲೆ ಕ್ರಮ ಕೈಗೊಳಬೇಕೆಂದು ಅಂಬಿಗರ ಸೇವಾ ದಳ ಅಧ್ಯಕ್ಷ ಸಂತೋಷ ಎಸ್. ಬೆಣ್ಣೂರ ಒತ್ತಯಿಸಿದರು.
ಅವರು ನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ, ಅಮರೇಶ ಲಿಂಗಸೂರು ತಾಲೂಕಿನ ರೋಡಲಬಂಡಾ ಕ್ಯಾಂಪನಲ್ಲಿ ಅಭಿವೃದ್ಧಿ ಕಾಮಗಾರಿಕ್ಕೆ ಬಗ್ಗೆ ವರದಿಗೆ ತೆರಳಿದಾಗ, ಗುತ್ತೆದಾರರ ಇತರೆ ಗುಂಡಾಗಳು ಮಾರಣಾಂತಿಕ ಹಲ್ಲೆ ಮಾಡಿದ್ದರು, ಗುಂಡಾಗಳ ಪರವಾಗಿ ಲಿಂಗಸೂರು ಪಿ.ಎಸ್.ಐ ಆಸ್ಪತ್ರೆಗೆ ಬಂದು ಹಲ್ಲೆ ನಡೆಸಿ ಬಂದೂಕಿನಿಂದ ಶೂಟ್ ಮಾಡುವುದಾಗಿ ಬೆದರಿಕೆ ನೀಡಿದ್ದಾರೆಂದು ಪ್ರತಿಭಟನೆ ವೇಳೆಯಲ್ಲಿ ಆರೋಪಿಸಿದ್ದಾರೆ.
ಪಿ.ಎಸ್.ಐ ಮತ್ತು ಹಲ್ಲೆ ನಡೆಸಿದ ಗುಂಡಾಗಳ ವಿರುದ್ಧ ಕ್ರಮಕೈಗಳಬೇಕೆಂದು ಜಿಲ್ಲಾಧಿಕಾರಿಗಳ ಮೂಲಕ ಪತ್ರ ಬರೆದು ಗೃಹ ಸಚಿವರು ಹಾಗೂ ಮುಖ್ಯಮಂತ್ರಿಗಳಿಗೆ ಪ್ರತಿಭಟನಾಕಾರರು ಒತ್ತಾಯಿಸಿದ್ದರು. ಈ ಸಂದರ್ಭದಲ್ಲಿ ರಾಘವೇಂದ್ರ ಜೋಕೆ, ಶರಣು ಕಿರಸಾವಳಗಿ, ಮಾಹಂತೇಶ ಹರವಾಳ, ಮಲ್ಲಿಕಾರ್ಜುನ್ ಗುಡುಬಾ, ಮಲ್ಲಿನಾಥ ಸೇರಿದಂತೆ ಮುಂತಾದವರು ಪ್ರತಿಭಟನೆಯಲ್ಲಿ ಇದ್ದರು.