ಕಲಬುರಗಿ: ಗುಲಬರ್ಗಾ ವಿಶ್ವವಿದ್ಯಾಲಯಕ್ಕೆ ರಾಷ್ಟ್ರಕೂಟ ವಿಶ್ವವಿದ್ಯಾಲಯವೆಂದು ಹೆಸರಿಡಬೇಕೆಂದು ಗುಲಬರ್ಗಾ ವಿಶ್ವವಿದ್ಯಾಲಯ ಕುಲಪತಿ ಮುಖಾಂತರ ಸರಕಾರಕ್ಕೆ ಕಲ್ಯಾಣ ನಾಡು ವಿಕಾಸ್ ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ಮತ್ತಣ್ಣ ಎಸ್.ನಡಗೇರಿ ಅವರು ಮನವಿ ಸಲ್ಲಿಸಿದರು.
ಪ್ರಪಂಚದ ೦೪ ಮಹಾನ ಸಾಮ್ರಾಜ್ಯಗಳಲ್ಲಿ ಒಂದಾಗಿದ್ದ, ಉತ್ತರದಲ್ಲಿ ಹಿಮಾಲಯದಿಂದ ದಕ್ಷಿಣದಲ್ಲಿ ಕನ್ಯಾಕುಮಾರಿವರೆಗೂ ಹಾಗೂ ಪೂರ್ವದಲ್ಲಿ ಕಳಿಂಗನಿಂದ ಪಶ್ಚಿಮದಲ್ಲಿ ಗುಜರಾತವರೆಗೂ ವಿಶಾಲ ವ್ಯಾಪ್ತಿ ಹೊಂದಿದ್ದ ಮಹಾನ ಸಾಮ್ರಾಜ್ಯ ರಾಷ್ಟ್ರಕೂಟ ದೊರೆಗಳದ್ದು.
ರಾಷ್ಟ್ರಕೂಟರ ನಾಡು ನೃಪತ್ತುಂಗನ ನಾಡು ಅನ್ನುತ್ತೇವೆ ಆದರೆ ಅವರ ಅಸ್ತಿತ್ವವನ್ನು ಉಳಿಸಿಕೊಳ್ಳುವಲ್ಲಿ ಸ್ಥಳಿಯವಾಗಿ ನಾವು ವಿಫಲರಾಗಿದ್ದೇವೆ, ಏಕೆಂದರೆ ಕಾರವಾರ ಜಿಲ್ಲೆಯಲ್ಲಿ ಕದಂಬರು, ಬಾಗಲಕೋಟೆ ಜಿಲ್ಲೆಯಲ್ಲಿ ಚಾಲುಕ್ಯರು, ಮಂಡ್ಯ ಜಿಲ್ಲೆಯಲ್ಲಿ ಗಂಗರು, ಹಾಸನ ಜಿಲ್ಲೆಯಲ್ಲಿ ಹೊಯ್ಸಳರು, ಬಳ್ಳಾರಿ ಜಿಲ್ಲೆಯಲ್ಲಿ ವಿಜಯ ನಗರದ ಅರಸರು, ಚಿತ್ರದುರ್ಗ ಜಿಲ್ಲೆಯಲ್ಲಿ ಪಾಳೆಗಾರರು.
ಶಿವಮೊಗ್ಗ ಜಿಲ್ಲೆಯಲ್ಲಿ ಕೇಳದಿ ಅರಸರು, ಮಂಗಳೂರು ಜಿಲ್ಲೆಯಲ್ಲಿ ರಾಣಿ ಅಬ್ಬಕ್ಕದೇವಿ ಹಾಗೂ ಮೈಸೂರು ಜಿಲ್ಲೆ ಮತ್ತು ದಕ್ಷಿಣ ಕರ್ನಾಟಕದಲ್ಲಿ ಮೈಸೂರು ಅರಸರ ಅಸ್ತಿತ್ವ ಮತ್ತು ಇರುವಿಕೆಯನ್ನು ಆಯಾ ಪ್ರದೇಶಗಳಲ್ಲಿ ಕಾಣುತ್ತೇವೆ. ಶಿವಮೊಗ್ಗದಲ್ಲಿ ರಾಷ್ಟ್ರಕವಿ ಕುವೆಂಪು ವಿ.ವಿ, ಬೆಳಗಾವಿಯಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿ.ವಿ, ಧಾರವಾಡದಲ್ಲಿ ಕರ್ನಾಟಕ ವಿ.ವಿ, ಬಳ್ಳಾರಿಯಲ್ಲಿ ಶ್ರೀಕೃಷ್ಣದೇವರಾಯ ವಿ.ವಿ, ವಿಜಯಪುರದಲ್ಲಿ ಅಕ್ಕಮಹಾದೇವಿ ವಿ.ವಿ, ಬೆಂಗಳೂರಿನಲ್ಲಿ ರಾಜೀವಗಾಂಧಿ ಆರೋಗ್ಯ ವಿಜ್ಞಾನಗಳ ವಿ.ವಿ, ಹೀಗೆ ಹೆಸರಿಗೆ ಸಂಬಂಧಿಸಿದ ಅನೇಕ ವಿಶ್ವವಿದ್ಯಾಲಯಗಳು ರಾಜ್ಯದಲ್ಲಿರುತ್ತವೆ.
ಆದರೆ ಕಲಬುರಗಿ ಜಿಲ್ಲೆಯ ಹೆಮ್ಮೆಯ ಅರಸರಾದ ರಾಷ್ಟ್ರಕೂಟ ದೊರೆಗಳ ಇತಿಹಾಸ ಮತ್ತು ಅವರ ಅಸ್ತಿತ್ವವನ್ನು ನಾವು ಮರೆಯುತ್ತಿದ್ದೇವೆ, ಕಲಬುರಗಿ ಜಿಲ್ಲೆಯಲ್ಲಿ ರಾಷ್ಟ್ರಕೂಟ ಮನೆತನದ ಹೆಸರಾಗಲ್ಲಿ ಅಥವಾ ರಾಷ್ಟ್ರಕೂಟ ದೊರೆಗಳ ಹೆಸರಾಗಲ್ಲಿ ಯಾವುದೇ ರೀತಿಯ ಉನ್ನತ ಶಿಕ್ಷಣ ಸಂಸ್ಥೆ, ಸರಕಾರಿ ಕಟ್ಟಡ ಅಥವಾ ಕಲಬುರಗಿ ನಗರದ ಪ್ರಮುಖ ರಸ್ತೆಗಳಿಗೆ ಅಥವಾ ವೃತ್ತಗಳಿಗೆ ಇಟ್ಟಿರುವುದಿಲ್ಲ ಇದು ಸ್ಥಳಿಯವಾಗಿ ನಮ್ಮ ರಾಷ್ಟ್ರಕೂಟ ದೊರೆಗಳ ಅಸ್ತಿತ್ವವು ಇಲ್ಲದಿರುವುದರ ಬಗ್ಗೆ ಕಂಡುಬರುತ್ತದೆ.
ಕಲೆ, ಸಾಹಿತ್ಯಕ್ಕೆ ಅಪಾರವಾದ ಕೊಡುಗೆಯನ್ನು ನೀಡಿರುವ ಮತ್ತು ಆಡಳಿತಕ್ಕೆ ಹೆಸರು ವಾಸಿಯಾದ ರಾಷ್ಟ್ರಕೂಟ ಸಾಮ್ರಾಜ್ಯದ ಹೆಸರನ್ನು ಅಜರಾಮರವಾಗಿ ಇಡಲು ಹಾಗೂ ಇಡಿ ದೇಶಕ್ಕೆ ಪರಿಚಯ ಮಾಡಿಕೊಡಲು ಕಲ್ಯಾಣ ಕರ್ನಾಟಕದ ಉನ್ನತ ಶಿಕ್ಷಣ ಕೇಂದ್ರವಾದ ಗುಲಬರ್ಗಾ ವಿಶ್ವವಿದ್ಯಾಲಯಕ್ಕೆ ರಾಷ್ಟ್ರಕೂಟ ವಿಶ್ವವಿದ್ಯಾಲಯವೆಂದು ಮರು ನಾಮಕರಣ ಮಾಡಬೇಕೆಂದು ಈ ಮೂಲಕ ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇವೆ.
ಈ ಸಂದರ್ಭದಲ್ಲಿ ಸಂಸ್ಥಾಪಕ ಅಧ್ಯಕ್ಷರಾದ ಮುತ್ತಣ್ಣ ಎಸ್. ನಡಗೇರಿ, ಜಿಲ್ಲಾಧ್ಯಕ್ಷ ಬಾಬು ಮದನಕರ, ಉಪಾಧ್ಯಕ್ಷ ಅನೀಲ ಕಪನೂರ, ನಗರಾಧ್ಯಕ್ಷ ಮೋಹನ ಸಾಗರ, ಸಂಘಟಕರಾದ ಉದಯಕುಮಾರ ಖಣಗೆ, ಸಾಗರ ಪಾಟೀಲ್, ಸೂರ್ಯಪ್ರಕಾಶ ಚಾಳಿ, ಪ್ರವೀಣ ಖೇಮನ್, ಜೈಭೀಮ ಮಾಳಗೆ, ಅವಿನಾಶ ಹೀರಾಪೂರ, ಮಹೇಶ ಮಾನೆ, ನಾಗು ಡೊಂಗರಗಾಂವ, ಸಿದ್ದಲಿಂಗ ಉಪ್ಪಾರ, ದೇವು ದೊರೆ, ಪಿಂಟು ಬೋಧನ, ಹಾಗೂ ಇತರರು ಉಪಸ್ಥಿತರಿದ್ದರು.
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…