ಭಾಲ್ಕಿ: ಪಟ್ಟಣದ ಹಿರೇಮಠ ಸಂಸ್ಥಾನದಲ್ಲಿ ಇಳಕಲ್‌ನ ಪೂಜ್ಯ ಶ್ರೀ ಡಾ.ಮಹಾಂತ ಶಿವಯೋಗಿಗಳ ಜನ್ಮದಿನದ ಅಂಗವಾಗಿ ವ್ಯಸನಮುಕ್ತ ದಿನಾಚರಣೆಯನ್ನು ಆಚರಿಸಲಾಯಿತು.
ಸಮಾರಂಭದ ಸಾನಿಧ್ಯ ವಹಿಸಿ, ಪೂಜ್ಯ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ಪೂಜ್ಯ ಇಳಕಲ್‌ನ ಮಹಾಂತ ಅಪ್ಪಗಳು ಮಹಾಂತ ಜೋಳಿಗೆಯ ಮೂಲಕ ನಾಡಿನಲ್ಲಿ ವ್ಯಸನಮುಕ್ತಿಯ ಆಂದೋಲನ ನಡೆಸಿದರು. ತಮ್ಮ ಜೋಳಿಗೆಯಲ್ಲಿ ಜನರ ದುಶ್ಚಟಗಳನ್ನು ಪಡೆದುಕೊಂಡು ಅವರಿಗೆ ಬಸವಮಾರ್ಗ ತೋರಿಸಿದ ಕೀರ್ತಿ ಪೂಜ್ಯ ಮಹಾಂತ ಅಪ್ಪಗಳವರದ್ದು. ನಮ್ಮ ದೇಹ ಪವಿತ್ರವಾಗಿರುವ ಕ್ಷೇತ್ರ. ದೇಹವೆಂಬ ಕ್ಷೇತ್ರದ ಪಾವಿತ್ರ್ಯತೆಯನ್ನು ನಾವು ಕಾಪಾಡಬೇಕಾದರೆ ದುಶ್ಚಟ, ಸುರ್ಗುಣಗಳಿಂದ ದೂರ ಇರಬೇಕು. ಶರಣರ ಈ ದೇಹಕ್ಕೆ ಪ್ರಸಾದ ಕಾಯವೆಂದು ಕರೆದಿದ್ದಾರೆ.
ಪ್ರಸಾದ ಕಾಯ ಕೆಡಿಸಬಾರದೆಂದು ಹೇಳಿದ್ದಾರೆ. ಅದಕ್ಕಾಗಿ ಪವಿತ್ರ ದೇಹ ದೇವಾಲಯದೊಳಗೆ ಶಿವನ ಒಲುಮೆ ಆಗಬೇಕಾದರೆ ಈ ದೇಹವನ್ನು ಪವಿತ್ರವಾಗಿ ಇಟ್ಟುಕೊಳ್ಳಬೇಕು. ಇದನ್ನೆ ಜೀವನದುದ್ದಗಲಕ್ಕೂ ಪೂಜ್ಯ ಮಹಾಂತ ಅಪ್ಪಗಳು ನಾಡಿನ ಜನರಿಗೆ ಬೋಧಿಸಿದರು. ಪೂಜ್ಯರು ಎಂತಹ ಪ್ರಸಂಗದಲ್ಲಿಯೂ ಬಸವನಿಷ್ಠೆಯನ್ನು ಬಿಡಲಿಲ್ಲ. ಜಾತಿವಾದಿಗಳು ಅವರನ್ನು ಅನೇಕ ರೀತಿಯ ತೊಂದರೆಯನ್ನು ನೀಡಿದರು. ಆದರೂ ಪೂಜ್ಯರು ಯಾವುದಕ್ಕೂ ಬಗ್ಗದೆ ಬಸವಧ್ವಜವನ್ನು ಹಾರಿಸಿದರು. ಅವರ ಜನ್ಮದಿನವನ್ನು ವ್ಯಸನಮುಕ್ತ ದಿನವನ್ನಾಗಿ ಆಚರಿಸುತ್ತಿರುವ ಕರ್ನಾಟಕ ಸರಕಾರಕ್ಕೆ ಅಭಿನಂದನೆಗಳು ಸಲ್ಲಿಸುತ್ತೇವೆ ಎಂದು ಆಶೀರ್ವಚನ ನೀಡಿದರು.
ಸಮಾರಂಭದಲ್ಲಿ ಅನುಭಾವ ನುಡಿ ನುಡಿದಿರುವ ಶರಣ ವಿಶ್ವರಾಧ್ಯ ಸತ್ಯಂಪೇಟೆ ಅವರು ಮಹಾಂತ ಅಪ್ಪಗಳ ಕುರಿತು ವಿವರವಾಗಿ ಮಾತನಾಡಿದರು. ಇಂದು ಯುವಕರು ವ್ಯಸನಕ್ಕೆ ಬಲಿಯಾಗಿ ತಮ್ಮ ಜೀವನವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಅದಕ್ಕಾಗಿ ಯುವಕರು ವ್ಯಸನದಿಂದ ದೂರ ಇರಬೇಕು. ಇಂದಿನ ಮಕ್ಕಳೆ ನಾಡಿನ ಸಮಾಜದ ದೇಶದ ಆಸ್ತಿ ಅದಕ್ಕಾಗಿ ಮಕ್ಕಳು ಸಸಕ್ತವಾಗಿದ್ದರೆ ದೇಶ ಸದೃಢವಾಗುತ್ತದೆ. ಬಸವಾದಿ ಶರಣರ ಚಿಂತನೆಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಯುವಕರು ತಮ್ಮ ವ್ಯಕ್ತಿತ್ವವನ್ನು ಭವ್ಯ ದಿವ್ಯ ಮಾಡಿಕೊಳ್ಳಬೇಕು ಎಂದು ನುಡಿದರು.
ಸಮಾರಂಭದ ಕನ್ನಡ ಸಾಹಿತ್ಯ ಪರಿಷತ್ತಿನ ಭಾಲ್ಕಿ ತಾಲೂಕಾ ಅಧ್ಯಕ್ಷರು, ನಾಗಭೂಷಣ ಮಾಮಡಿ, ಸೋಮನಾಥಪ್ಪ ಅಷ್ಟೂರೆ, ಬಸವರಾಜ ಮರೆ, ವೈಜಿನಾಥಪ್ಪ ಉಪ್ಪಿನ್, ಶಾಂತಯ್ಯ ಸ್ವಾಮಿ, ಬಾಬು ಬೆಲ್ದಾಳ ಉಪಸ್ಥಿತರಿದ್ದರು. ದೀಪಕ ಥಮಕೆ ನಿರೂಪಿಸಿದರು. ಅಕ್ಕನಬಳಗದ ತಾಯಿಂದಿರು ವಚನ ಗಾಯನ ಮಾಡಿದರು.
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…