ತಾರಾ ಇಂಗ್ಲಿಷ್ ಭಾಷಾ ಲ್ಯಾಬ್ ಉದ್ಘಾಟನೆ

0
53

ಕಲಬುರಗಿ: ಭಾರತದ ೭೫ನೇ ಸ್ವಾತಂತ್ರ್ಯ ದಿನದ ಸಂದರ್ಭದಲ್ಲಿ ಕೃತಕ ಬುದ್ದಿವಂತಿಕೆ ಮತ್ತು ಧ್ವನಿ ತಂತ್ರಜ್ಞಾನ-ಚಾಲಿತ ಸಂವಹನ ಇಂಗ್ಲಿಷ್ ಕಾರ್ಯಕ್ರಮದಲ್ಲಿ ಪ್ರಥಮ `ತಾರಾ ಇಂಗ್ಲಿಷ್ ಭಾಷಾ ಲ್ಯಾಬ್’ನ್ನು ನಗರದ ಶ್ಲೋಕ-ಬಿರ್ಲಾ ಶಾಲೆಯಲ್ಲಿ ಸೋಮವಾರ ಆರಂಭಿಸಲಾಯಿತು.

ಲರ್ನಿಂಗ್ ಮ್ಯಾಟರ್ಸ್ ಸಹ ಸಂಸ್ಥಾಪಕರು ಮತ್ತು ಮಾರುಕಟ್ಟೆ ವಿಭಾಗದ ಮುಖ್ಯಾಧಿಕಾರಿ ಸರಸ್ವತಿ ರಾಮಮೂರ್ತಿ ಅವರು ಮಾತನಾಡಿ, ಸರಳತೆ ಮತ್ತು ಬಳಕೆಯ ಸುಲಭತೆಯೊಂದಿಗೆ ಟಿಇಎಲ್‌ಎಲ್‌ನ ೨೧ನೇ ಶತಮಾನದ ತಂತ್ರಜ್ಞಾನ ವಿಶಿಷ್ಟ ಸಂಯೋಜನೆಯು ತ್ವರತವಾಗಿ ವಿದ್ಯಾರ್ಥಿಗಳ ಇಂಗ್ಲಿಷ ಕಲಿಕೆಯು ಫಲಿತಾಂಶಗಳ ಮೇಲೆ ಬಹಳ ಸಕರಾತ್ಮಕ ಪರಿಣಾಮ ತರುತ್ತದೆ ಎಂದು ಹೇಳಿದರು.

Contact Your\'s Advertisement; 9902492681

ಅಲೆಕ್ಸಾ ಪ್ಲಾಟ್ ಫಾರ್ಮ್ ನ್ನು ಬಳಸುವ ಧ್ವನಿ ಸಾಧನದ ಸಂಯೋಜನೆಯು ಉತ್ತಮ ಗುಣಮಟ್ಟದ ಇಂಗ್ಲಿಷ್ ಪುಸ್ತಕಗಳ ಜೊತೆಗೆ ಸ್ಥಳೀಯ ಇಂಗ್ಲಿಷ್ ನಿರರ್ಗಳತೆ ಬರುವಂತೆ ಮಾಡಲು ಅಗತ್ಯವಾದ ನೈಸರ್ಗಿಕ, ಸಂಭಾಷಣೆಯ ಶೈಲಿನ ಪಾಠಗಳ ಮೂಲಕ ಕಲಿಯುವವರಿಗೆ ಭಾಷಾ ಕಲಿಕೆಯನ್ನು ಸುಲಭವಾಗಿಸುತ್ತದೆ. ವಿದ್ಯಾರ್ಥಿಗಳು ಅಭ್ಯಾಸ ಮಾಡಲು ಮತ್ತು ಶಬ್ದಕೋಶ, ವ್ಯಾಕರಣ ಮತ್ತು ಸಂಭಾಷಣಾ ಕೌಶಲ್ಯಗಳನ್ನು ಕರಗತ ಮಾಡಿಕೊಳ್ಳಲು ಅವಕಾಶ ಮಾಡಿಕೊಡುವ ಚಟುವಟಿಕೆಗಳಿಂದ ಕಲಿಕೆ ಇನ್ನಷ್ಟು ದೃಢವಾಗುತ್ತದೆ ಎಂದು ಅವರು ಹೇಳಿದರು.

ಶಾಲೆಯ ಸಂಸ್ಥಾಪಕ ಮತ್ತು ಟ್ರಸ್ಟಿ ಆದ ಅಭಿಷೇಕ ಚಿಮ್ಮಲಗಿ ಮಾತನಾಡಿ, ವಿದ್ಯಾರ್ಥಿಗಳು ಅಂತಾರಾಷ್ಟ್ರಿಯ ಭಾಷಾ ಗುಣಮಟ್ಟವನ್ನು ಸಾಧಿಸಬೇಕು. ಇದರಿಂದ ಶೈಕ್ಷಣಿಕ ಮತ್ತು ವೃತ್ತಿ ಜೀವನದ ಯಶಸ್ಸು ಖಾತರಿಗೊಳಿಸುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾದ ಸುನಿತಾ ಪಿ.ಕುಲಕರ್ಣಿ ಸೇರಿದಂತೆ ಮತ್ತಿತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here