ಬಿಸಿ ಬಿಸಿ ಸುದ್ದಿ

ಗವೀಶ ಹಿರೇಮಠ ಅವರ “ಗುಣಗ್ರಾಹಿ” ಸಂಸ್ಮರಣ ಗ್ರಂಥ ಲೋಕಾರ್ಪಣೆ

  • ಕವಿ ಕಲಾವಿದರು ಎಚ್ಚರಿಸುವ ಕೆಲಸ ಮಾಡುವಂತೆ ಅಲ್ಲಮಪ್ರಭು ಪಾಟೀಲ ಸಲಹೆ

ಕಲಬುರಗಿ: ಕವಿ, ಕಲಾವಿದರು ಸಮಾಜದ ಸಂಪತ್ತು. ಅವರನ್ನು ಗೌರವಿಸುವುದು, ಅವರ ವಿಚಾರಧಾರೆಗಳನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುವುದು ಪ್ರತಿಯೊಬ್ಬರ ಜವಾಬ್ದಾರಿ ಎಂದು ಬಂಡಾಯ ಸಾಹಿತಿ ಪ್ರೊ. ಅಲ್ಲಮಪ್ರಭು ಬೆಟ್ಟದೂರು ತಿಳಿಸಿದರು.

ಸುಪ್ರಸಿದ್ಧ ವ್ಯಕ್ತಿಗಳ ಅಭಿನಂದನಾ ಗ್ರಂಥ ಹೊರ ತಂದಿದ್ದ ಗವೀಶ ಹಿರೇಮಠ ಅವರ ಅಭಿನಂದನಾ ಗ್ರಂಥ ಅವರು ಬದುಕಿದ್ದಾಗಲೇ ಬರಬೇಕಿತ್ತು. ಆದರೆ ಅವರ ಸಂಸ್ಮರಣ ಗ್ರಂಥ ಹೊರ ಬರುತ್ತಿರುವುದು ದುರ್ದೈವದ ಸಂಗತಿ. -ಪ್ರಭಾಕರ ಜೋಶಿ, ಗುಣಗ್ರಾಹಿ ಗ್ರಂಥದ ಸಂಪಾದಕ
ಕಾವ್ಯ, ಕಾದಂಬರಿ, ಚರಿತ್ರೆ, ನಾಟಕ ಮತ್ತು ರಂಗ ಇತಿಹಾಸ ಕ್ಷೇತ್ರದಲ್ಲಿ ತುಂಬಾ ಅಭಿಮಾನದಿಂದ ಬರವಣಿಗೆ ಮಾಡಿದ್ದ ಗವೀಶ ಹಿರೇಮಠ ಅವರು ರಂಗ ಕಾಳಜಿ ಹೊಂದಿದ್ದ ಅಪರೂಪದ ಲೇಖಕರಾಗಿದ್ದರು. ಬಣ್ಣದ ಬದುಕಿನ ಹಿಂದಿನ ನಿಜ ಕಥನವನ್ನು ಹಿಡಿದಿಡುವಲ್ಲಿ ಸಿದ್ಧಹಸ್ತರಾಗಿದ್ದರು. -ಮಹಿಪಾಲರೆಡ್ಡಿ ಮುನ್ನೂರ್, ಗುಣಗ್ರಾಹಿ ಗ್ರಂಥದ ಸಂಪಾದಕ.

ಇಲ್ಲಿನ ಜಯನಗರದ ಅನುಭವ ಮಂಟಪದಲ್ಲಿ ಭಾನುವಾರ ಆಯೋಜಿಸಿದ್ದ ಗವೀಶ ಹಿರೇಮಠರ ದ್ವಿತೀಯ ಪುಣ್ಯ ಸ್ಮರಣೆ ಹಾಗೂ ಗುಣಗ್ರಾಹಿ ಸಂಸ್ಮರಣ ಗ್ರಂಥ ಲೋಕಾರ್ಪಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಹಲವಾರು ರಂಗ ಕಲಾವಿದರ ಅಭಿನಂದನಾ ಗ್ರಂಥಗಳನ್ನು ಹೊರ ತಂದಿದ್ದ ಗವೀಶ ಅವರು, ಅನನ್ಯ ಪ್ರೀತಿಯ ಮನುಷ್ಯ. ಬಯಲಾಟ ಅಕಾಡೆಮಿ ಸ್ಥಾಪಿಸುವಲ್ಲಿ ಸರ್ಕಾರದ ಮೇಲೆ ಒತ್ತಡ ಹೇರಿದವರಲ್ಲಿ ಹಿರೇಮಠ ಕೂಡ ಒಬ್ಬರಾಗಿದ್ದರು ಎಂದು ಅವರ ಸಾಮಾಜಿಕ ಸೇವೆಯನ್ನು ಹೃದಯಾರೆ ಸ್ಮರಿಸಿದರು.

ಕಲಾವಿರದನ್ನು ಹಳಿಯುವ, ವಿಚಾರವಂತರನ್ನು ಬೈಯುವ ಈಗಿನ ದಿನಮಾನಗಳಲ್ಲಿ ರಾಜಕಾರಣವೇ ಪ್ರಧಾನವಾಗಿದೆ. ಆಳುವ ಪಕ್ಷಕ್ಕೆ ವಿರೋಧ ಪಕ್ಷ ಬಹಳ ಮುಖ್ಯ. ವಿರೋಧ ಪಕ್ಷಗಳು ಮಲಗಿದ ವೇಳೆ ಆಳುವ ಪಕ್ಷವನ್ನು ಎಚ್ಚರಿಸುವ ಕೆಲಸ ಕವಿ, ಕಲಾವಿದರು ಮಾಡಬೇಕು. ಅದೇವೇಳೆಗೆ ಗುಣಗ್ರಾಹಿಗಳ ಅಗತ್ಯ ಕೂಡ ಇದೆ ಎಂದು ಕಿವಿ ಮಾತು ಹೇಳಿದರು.

ನಾಟಕ ಅಕಾಡೆಮಿ ಮಾಜಿ ಅಧ್ಯಕ್ಷ ಶೇಖ್ ಮಾಸ್ತರ್ ಗ್ರಂಥ ಲೋಕಾರ್ಪಣೆ ಮಾಡಿದರು. ಪುಸ್ತಕ ಕುರಿತು ಡಾ. ಗವಿಸಿದ್ದಪ್ಪ ಪಾಟೀಲ ಮಾತನಾಡಿದರು. ಶ್ರೀಧರ ಹೆಗಡೆ, ಸರಸ್ವತಿ ಚಿಮ್ಮಲಗಿ, ಪಿ.ಎಂ. ಮಣ್ಣೂರ ಸಂಸ್ಮರಣಾ ನುಡಿಗಳನ್ನಾಡಿದರು. ಸುಶೀಲಾ ಗವೀಶ ಹಿರೇಮಠ, ಸಂತೋಷ ಗವೀಶ ಹಿರೇಮಠ ವೇದಿಕೆಯಲ್ಲಿದ್ದರು. ಇದೇವೇಳೆಯಲ್ಲಿ ಜೇವರಗಿ ರಾಜಣ್ಣ, ಡಾ. ಗಿರಿಮಲ್ಲ ಕೆ., ಮಲ್ಲಿಕಾರ್ಜುನ ಬಬಲೇಶ್ವರ, ಮಹಾದೇವ ಹೊಸೂರ ಅವರನ್ನು ಸನ್ಮಾನಿಸಲಾಯಿತು.

ಶೋಭಾ ಗಂಗಾಧರ ಹಿರೇಮಠ ಪ್ರಾರ್ಥನೆ ಗೀತೆ ಹಾಡಿದರು. ಸಂಸ್ಮರಣ ಗ್ರಂಥದ ಸಂಪಾದಕರಾದ ಪ್ರಭಾಕರ ಜೋಶಿ ಸ್ವಾಗತಿಸಿದರು. ಮಹಿಪಾಲರೆಡ್ಡಿ ಮುನ್ನೂರ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಬಿ.ಎಚ್. ನಿರಗುಡಿ ನಿರೂಪಿಸಿದರು. ಡಾಶ. ವಿ.ಜಿ. ಪೂಜಾರ, ಸುಬ್ಬರಾವ ಕುಲಕರ್ಣಿ, ಡಾ. ಚಿ.ಸಿ. ನಿಂಗಣ್ಣ, ಲಿಂಗಾರೆಡ್ಡಿ ಶೇರಿ, ಸಿದ್ಧರಾಮ ಹೊನ್ಕಲ್, ಚಾಮರಾಜ ದೊಡ್ಡಮನಿ, ಜಿ.ಜಿ. ವಣಿಕ್ಯಾಳ, ಡಾ. ಶ್ರೀಶೈಲ ನಾಗರಾಳ, ಡಾ. ವಿಜಯಕುಮಾರ ಪರೂತೆ, ಜಯದೇವ ಹಿರೇಮಠ, ಚೈತನ್ಯ ಹಿರೇಮಠ ಇತರರಿದ್ದರು.

emedialine

Recent Posts

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

6 hours ago

ಸಿದ್ದ ಶ್ರೀ ಕಾರ್ಖಾನೆ ಪ್ರಾರಂಭವಾಗುವರೆಗೂ ಹೋರಾಟ: ವೀರಣ್ಣ ಗಂಗಾಣಿ

ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…

6 hours ago

ದಕ್ಷಿಣ ಭಾರತ ಅಂತರ ವಿಶ್ವವಿದ್ಯಾಲಯ ಮಹಿಳೆಯರ ಕಬಡ್ಡಿ ಕ್ರೀಡಾಕೂಟಕ್ಕೆ ಆಯ್ಕೆ

ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…

6 hours ago

ಪ್ರಿಯಾಂಕ್ ಖರ್ಗೆ ಜನ್ಮದಿನ; ರಕ್ತದಾನ ಶಿಬಿರಕ್ಕೆ ಶಾಸಕ ಪಾಟೀಲ ಚಾಲನೆ

ಕಲಬುರಗಿ: ನಗರದ ವಾರ್ಡ ನಂ.51.ರ  ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…

17 hours ago

ಬಡವರಿಗೆ ಹಣ್ಣು-ಹಂಪಲು ವಿತರಣೆ

ಕಲಬುರಗಿ: ಕರ್ನಾಟಕ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಚಿವ ಪ್ರಿಯಾಂಕ್ ಖರ್ಗೆ ಅವರ ಜನ್ಮದಿನದ ಪ್ರಯುಕ್ತ  ಜೈ ಕನ್ನಡಿಗರ…

17 hours ago

ಕಾರಾಗೃಹದ ಬಂದಿಗಳಿಗೆ ಮನಃ ಪರಿವರ್ತನೆಗೊಳ್ಳುವ ಚಲನ ಚಿತ್ರ ಸ್ಕ್ರೀನ್

ಕಲಬುರಗಿ; ಕಾರಾಗೃಹದ ಬಂದಿಗಳಿಗೆ ಉಚಿತವಾಗಿ ಅದಾನಿ ಸಕ್ಷಮ ಸ್ಕಿಲ್ ಡೆವಲಪ್‍ಮೆಂಟ್, ವಾಡಿ ಹಾಗೂ ಕೇಂದ್ರ ಕಾರಾಗೃಹದ ಸಹಯೋಗದೊಂದಿಗೆ ಬಂದಿಗಳ ಮನಃ…

17 hours ago