- ಗುಲ್ಲಾಬಾವಡಿಯಿಂದ ಆರಂಭಮಾಡಿ ರಾಮ ಮಂದಿರವರೆಗೂ ನಿರಂತರ ಪಾದಯಾತ್ರೆ
- ನಗರ ಪ್ರದೇಶದ ನಂತರ ಹಳ್ಳಿಗಾಡಲ್ಲಿಯೂ ಪಾದಯಾತ್ರೆ ಮುಂದುವರಿಸಿ ಜನರ ಭೇಟಿ
ಕಲಬುರಗಿ: ಕಾಂಗ್ರೆಸ್ ಮುಖಂಡರು ಹಾಗೂ ಮಾಜಿ ಎಂಎಲ್‍ಸಿಗಳಾದ ಅಲ್ಲಂಪ್ರಭು ಪಾಟೀಲ್ ಅವರು ಕಲಬುರಗಿ ದಕ್ಷಿಣ ಮತಕ್ಷೇತ್ರದಲ್ಲಿ ಇದೇ ಆ. 23 ರಿಂದ ಸತತ 5 ದಿನಗಳ ಕಾಲ ಸ್ವಾತಂತ್ರ್ಯ ಅಮೃತ ಮಹೋತ್ಸವ ಹಿನ್ನೆಲೆಯ ತಮ್ಮ ಪಾದಯಾತ್ರೆಯ 2 ನೇ ಹಂತವನ್ನು ಶುರು ಮಾಡಲಿದ್ದಾರೆ. ಇದಕ್ಕಾಗಿ ಕ್ಷೇತ್ರದಲ್ಲಿ ಭರದ ಸಿದ್ಧತೆಗಳು ಸಾಗಿವೆ.
ಈಗಾಗಲೇ ಶರಣಬಸವೇಶ್ವರ ಮಂದಿರದಿಂದ ಶುರುಮಾಡಿ ನಗರದಲ್ಲಿ 2 ದಿನಗಳ ಕಾಲ ಸಂಚರಿಸುತ್ತ ಮನೆ ಮನೆ ಹೋಗಿ ಕಾಂಗ್ರೆಸ್ ಪಕ್ಷದ ಸಂದೇಶ ಸಾರುತ್ತ 1 ನೇ ಹಂತವನ್ನು ಯಶಸ್ವಿಯಾಗಿ ಪೂರೈಸಿರುವ ಅಲ್ಲಂಪ್ರಭು ಪಾಟೀಲ್ ಇದೀಗ ತಮ್ಮ 2 ನೇ ಹಂತದ ಪಾದಯಾತ್ರೆಗೆ ಆ. 23 ರಂದು ನಗರದಲ್ಲಿರುವ ಗುಲ್ಲಾಬಾವಡಿ ಪ್ರದೇಶದಿಂದ ಚಾಲನೆ ನೀಡಲಿದ್ದಾರೆ.
ವಾರ್ಡ್ 46 ರ ಗುಲ್ಲಾಬಾವಡಿ, 45 ರ ಅಂದ್ರ ನಗರ ಸೇರಿದಂತೆ ಕೆಇಬಿ ವಸತಿ ಗೃಹ ಪ್ರದೇಶ, ಕೆಇಬಿ ಕಾಲೋನಿ, ಜೀವನ ಪ್ರಕಾಶ ಶಾಲೆ ಪ್ರದೇಶ, ರಾಮ ಮಂದಿರ ಸುತ್ತಲಿನ ಪ್ರದೇಶದಲ್ಲಿ ಪಾದಯಾತ್ರೆ ಭರದಿಂದ ನಡೆಸಲು ಸೂಕ್ತ ಸಿದ್ಧತೆಗಳನ್ನು ಮಾಡಲಾಗಿದೆ. ಆಯಾ ಬಡಾವಣೆ, ವಾರ್ಡಗಳಲ್ಲಿಯೂ ಸಂದೇಶ ಸಾರಲಾಗಿದ್ದು ಹೆಚ್ಚಿನ ಸಂಖ್ಯೆಯಲ್ಲಿ ನಗರದ ನತೆ ಭಾಗವಹಿಸುವ ಮೂಲಕ ಅಲ್ಲಂಪ್ರಭು ಪಾಟೀಲ್ ಅವರ ಪಾದಯಾತ್ರೆಗೆ ಅಭೂತಪೂರ್ವ ಬೆಂಬಲ ನೀಡಬೇಕು ಎಂದು ಕಾಂಗ್ರೆಸ್ ಪಕ್ಷದ ಬ್ಲಾಕ್ ಸಮೀತಿ ಅಧ್ಯಕ್ಷರಾದ ಲಿಂಗರಾಜ ತಾರಫೈಲ್, ಲಿಂಗರಾಜ ಕಣ್ಣಿ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.