೨೫೦೦ ವರ್ಷಗಳ ಹಿಂದೆ ಬುದ್ಧರು ಶಾಂತಿ, ಸಮಾನತೆ, ಮಾನವೀಯತೆಯ ಬೀಜ ಬಿತ್ತಿದರೆ, ಬಸವಣ್ಣಅದನ್ನು ಹೆಮ್ಮರವಾಗಿ ಬೆಳೆಸಿದರು. ಡಾ. ಅಂಬೇಡ್ಕರ್‌ಅವರು ಸಂವಿಧಾನದ ಮೂಲಕ ಅದರ ಫಲವನ್ನು ಉಣಬಡಿಸಿದರು. ಹೀಗಾಗಿ ಬುದ್ಧ, ಬಸವ, ಅಂಬೇಡ್ಕರ್‌ಅವರು ನಮ್ಮ ಐಕಾನ್‌ಗಳಾಗಬೇಕು ಎಂದು ವಿವರಿಸಿದರು. -ಸುರೇಶ ಬಡಿಗೇರ, ಕನ್ನಡಅಭಿವೃದ್ಧಿ ಪ್ರಾಧಿಕಾರದ ಸದಸ್ಯ, ಕಲಬುರಗಿ.
ಕಲಬುರಗಿ: ವಚನ ಸಂರಕ್ಷಕ ಫ.ಗು. ಹಳಕಟ್ಟಿ ಅವರನ್ನು ವಚನ ಪಿತಾಮಹಎಂದುಕರೆದರೆ, ಪ್ರವಚನ ಪಟು ಲಿಂಗಾನಂದ ಸ್ವಾಮೀಜಿಯವರನ್ನು ಪ್ರವಚನ ಪಿತಾಮಹಎಂದುಕೆರಯಲಾಗುತ್ತದೆಎಂದು ಪತ್ರಕರ್ತ-ಲೇಖಕ ಡಾ. ಶಿವರಂಜನ ಸತ್ಯಂಪೇಟೆ ಅಭಿಪ್ರಾಯಪಟ್ಟರು.
ನಗರದ ಬಸವ ಮಂಟಪದಲ್ಲಿ ಬುಧವಾರರಾಷ್ಟ್ರೀಯ ಬಸವ ದಳದ ಮಹಿಳಾ ಘಟಕ ಆಯೋಜಿಸಿದ್ದ ಲಿಂಗಾನಂದ ಸ್ವಾಮೀಜಿಯವರ ಜಯಂತ್ಯುತ್ಸವ ಹಾಗೂ ರಾಷ್ಟ್ರೀಯ ಬಸವ ದಳದ ಹುಟ್ಟುಹಬ್ಬ ದಿನಾಚರಣೆ ಹಾಗೂ ಶ್ರಾವಣ ಮಾಸದ ಬಸವಜ್ಯೋತಿಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಬಸವ ಧ್ವಜಾರೋಹಣ ನೆರವೇರಿಸಿ ಮಾತನಾಡಿದಅವರು, ಲಿಂಗಾನಂದರು ಪ್ರವಚನಕ್ಷೇತ್ರದ ಬ್ರಾಂಡ್ ಅಂಬಾಸಿಡರ್ ಆಗಿದ್ದರುಎಂದು ತಿಳಿಸಿದರು.
ಧಾರವಾಡಲ್ಲಿ ಪ್ರಪ್ರಥಮ ಮಹಿಳಾ ಜಗದ್ಗುರು ಪೀಠವನ್ನುಅಕ್ಕಮಹಾದೇವಿ ಅನುಭಾವ ಪೀಠ ಎಂಬ ಹೆಸರಲ್ಲಿ ಪೀಠ ಸ್ಥಾಪಿಸಿ ಮಾತೆ ಮಹಾದೇವಿಯವರನ್ನು ಪ್ರಥಮಅಧಿಕಾರಿಯನ್ನಾಗಿ ಮಾಡಿದಕೀರ್ತಿ ಲಿಂಗಾನಂದರಿಗೆ ಸಲ್ಲುತ್ತದೆ.ಬೆಂಗಳೂರಿನಲ್ಲಿ ವಿಶ್ವಕಲ್ಯಾಣ ಮಿಷನ್, ಕೂಡಲಸಂಗಮದಲ್ಲಿ ಬಸವಧರ್ಮ ಪೀಠ ಸ್ಥಾಪಿಸಿದ ಹೆಗ್ಗಳಿಕೆ ಇವರದಾಗಿದೆ ಎಂದರು.
ಕನ್ನಡಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಸುರೇಶ ಬಡಿಗೇರಜ್ಯೋತಿ ಪ್ರಜ್ವಲನೆ ಮಾಡಿದರು.ಮುಖ್ಯಅತಿಥಿಯಾಗಿದ್ದ ಭದ್ರಾವತಿಯ ಸುನಿತಾ ಮಾತನಾಡಿ, ಇಡೀಕನ್ನಡ ನಾಡಿಗೆ ಬಸವಾದಿ ಶರಣರನ್ನು ಪರಿಚಯಿಸಿದ ಕೀರ್ತಿ ಲಿಂಗಾನಂದ ಸ್ವಾಮಿ ಮತ್ತು ಮಾತೆ ಮಹಾದೇವಿಯಾತಿಯವರಿಗೆ ಸಲ್ಲುತ್ತದೆ.ಅವರಿಬ್ಬರೂ ಲೋಕದಂತೆ ಬಾರರು.ಲೋಕದಂತೆಇರರು.ಅವರುಉಪಮಾತೀತರಾಗಿದ್ದರುಎಂದು ಬಣ್ಣಿಸಿದರು.ಲಲಿತಾಜೀವಣಗಿ ಮಾತನಾಡಿದರು. ಬಸವಂತರಾಯಏರಿಅಧ್ಯಕ್ಷತೆ ವಹಿಸಿದ್ದರು.
ಜಗದೇವ ಸಂಗಮೇಶ ಚೆಟ್ಟಿ ಸ್ವಾಗತಿಸಿದರು, ನಾಗೇಂದ್ರಪ್ಪ ನಿಂಬರ್ಗಿ ನಿರೂಪಿಸಿದರು. ವಿಜಯಲಕ್ಷ್ಮೀ ಕೆಂಗನಾಳ ವಚನ ಗಾಯನ ಮಾಡಿದರು. ಸಂತೋಷ ಕಟ್ಟಾಳೆ ಶರಣು ಸಮರ್ಪಿಸಿದರು.ಜಗದೇವಿ ಚಟ್ಟಿ, ವೀರಣ್ಣ ಲೊಡ್ಡನ್, ಜ್ಯೋತಿ ಕಟ್ಟಾಳೆ, ದೀಪಾಲಿ ಬಿರಾದಾರ, ವೀರೇಶಇತರರಿದ್ದರು. ಇದೇವೇಳೆಯಲ್ಲಿ ಬಸವರಾಜ ಕೌಳಾಸೆ, ಶಿವನಾಗಪ್ಪ ಪಾಟೀಲ, ಮುನೀಂದ್ರ ಕುಮಸಿ ದಂಪತಿಗಳನ್ನು ಸನ್ಮಾನಿಸಲಾಯಿತು.
ಮಾರ್ಚ್ 8 ರಂದು ಅಂತರರಾಷ್ಟ್ರೀಯ ಮಹಿಳಾ ದಿನ ಅಶೋಕ ಪಾಟೀಲ ಮಹಿಳೆ ಅಥವಾ ಸ್ತ್ರೀ ಪದವು ಸಂಸ್ಕøತದ್ದು, ಕನ್ನಡದಲ್ಲಿ ಈ…
ಶಹಾಬಾದ:ನಗರದ ಹಳೆಶಹಾಬಾದನ ವೀರಶೈವ ಲಿಂಗಾಯತ ಸಮಾಜದ ಮುಖಂಡರಾದ ಭೀಮರಾವ.ಸಿ.ಸುಗೂರ (77) ಶನಿವಾರದಂದು ನಿಧನರಾಗಿದ್ದಾರೆ. ಇವರಿಗೆ ಇಬ್ಬರು ಸುಪುತ್ರರು, ಇಬ್ಬರು ಸುಪುತ್ರಿಯರು…
ಜೇವರ್ಗಿ: ಇಂದು ನೆಲೋಗಿ ಗ್ರಾಮದಲ್ಲಿ ಡಾ. ಅಂಬೇಡ್ಕರ್ ಸೇವಾ ಚಾರಿಟೇಬಲ್ ಟ್ರಸ್ಟ್ ನೆಲೋಗಿವತಿಯಿಂದ ಡಾ. ಬಿ.ಆರ್.ಅಂಬೇಡ್ಕರ ಸಮುದಾಯ ಭವನದಲ್ಲಿ ಛತ್ರಪತಿ…
ಇ-ಮೀಡಿಯಾ ಲೈನ್ ನ್ಯೂಸ್ ಕಲಬುರಗಿ: ಮೂಢನಂಬಿಕೆ, ಅನಿಷ್ಟ ಪದ್ಧತಿ, ಸಂವಿಧಾನದ ಆಶಯ ಈಡೇಸುವ ನಿಟ್ಟಿನಲ್ಲಿ ಜನ್ಮ ತಾಳಿದ ಮಾನವ ಬಂಧುತ್ವ…
ಕಲಬುರಗಿ: ನಗರದ ಸೆಂಟ್ ಮೇರಿ ಶಾಲೆಯಲ್ಲಿ 5 ರಿಂದ 9 ನೇ ತರಗತಿಯ 200 ಶಾಲಾ ಮಕ್ಕಳಿಗೆ ಆನಾಪಾನ ಧ್ಯಾನ…
ಜೇವರ್ಗಿ: ತಾಲೂಕಿನ ಜನರ ಸೇವೆಗಾಗಿ ಕಲಬುರಗಿಯ ಇಸ್ಲಾಮಾಬಾದ ಕಾಲೋನಿಯ ಅಲ್ ಶಿಫಾ ಆಸ್ಪತ್ರೆಯ ಮುಖ್ಯಸ್ಥರು ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು…