ಕಾಯಕ ಕಾಲೇಜಿಗೆ ಶೇ.94ರಷ್ಟು ಫಲಿತಾಂಶ

0
109

ಕಲಬುರಗಿ: ನಗರದ  ಕೆಸರಟಗಿ ರಸ್ತೆಯಲ್ಲಿರುವ ಸಮಧಾನ ಬಳಿಯಿರುವ ಪ್ರತಿಷ್ಠಿತ ಕಾಯಕ ಫೌಂಡೇಷನ್ ವಿಜ್ಞಾನ ಮತ್ತು ವಾಣಿಜ್ಯ ವಸತಿ ಪಿಯು ಕಾಲೇಜಿಗೆ  ದ್ವಿತೀಯ ಪಿಯುಸಿಯಲ್ಲಿ ಶೇ.೯೪ರಷ್ಟು ಫಲಿತಾಂಶ ಲಭಿಸಿದೆ. ಇದರೊಂದಿಗೆ ಈ ವರ್ಷವೂ  ಅತ್ಯುತ್ತಮ ಫಲಿತಾಂಶ ಪಡೆದುಕೊಂಡಿದೆ ಎಂದು ಕಾಯಕ ಫೌಂಡೇಷನ್ ಸಂಸ್ಥಾಪಕ ಶಿವರಾಜ ಟಿ.ಪಾಟೀಲ್ ಹರ್ಷವ್ಯಕ್ತಪಡಿಸಿದ್ದಾರೆ.

ದ್ವಿತೀಯ ಪಿಯುಸಿ ವಿಜ್ಞಾನ ಪರೀಕ್ಷೆಯನ್ನು ಬರೆದ 114 ವಿದ್ಯಾರ್ಥಿಗಳಲ್ಲಿ 13 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಶ್ರೇಣಿಯಲ್ಲಿ ಪಾಸಾಗಿದ್ದಾರೆ. 62 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ, 29 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಹಾಗೂ ನಾಲ್ವರು ಪಾಸ್ ಕ್ಲಾಸ್‌ನಲ್ಲಿ ಪಾಸಾಗಿದ್ದಾರೆ.

Contact Your\'s Advertisement; 9902492681

ಚಿನ್ಮಯ ಅಜಿತ ಕುಲಕರ್ಣಿ ಶೇ.95.68 ಅಂಕ ಪಡೆದುಕೊಂಡು ಕಾಲೇಜಿಗೆ ಪ್ರಥಮ ಹಾಗೂ ಅನಿಕೇತನ ಜೆ.,ಶೇ.95.33 ಅಂಕ ಪಡೆದುಕೊಂಡು ದ್ವಿತೀಯ ಹಾಗೂ ಅಶುತೋಷ ಜೆ. ಶೇ.93.33  ಅಂಕ ಪಡೆದುಕೊಂಡು ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ ಎಂದು ಪ್ರಾಚಾರ್ಯ ಗುರುಬಸಯ್ಯ ಸಾಲಿಮಠ ತಿಳಿಸಿದ್ದಾರೆ.

ಅಲ್ಲದೆ ಮೈಥಾಲಿ ಶೇ.91ರಷ್ಟು, ಭೀಮಾಶಂಕರ, ಭಾಸ್ಕರರೆಡ್ಡಿ, ಮಲ್ಲಮ್ಮ ಶೇ.90ರಷ್ಟು ಅಂಕ ಪಡೆದುಕೊಂಡಿದ್ದಾರೆ. ಉಳಿದಂತೆ ವೆಂಕಟೇಶ, ನಚಿಕೇತ, ರಾರ್ಬಟ್, ಸುನಿಲ್ ಶೇ.86.16 ರಷ್ಟು ಅಂಕ ಗಿಟ್ಟಿಸಿಕೊಂಡಿದ್ದಾರೆ. ವಿಕಾಸ ಮನು, ಶೇ.85.18 ಹಾಗೂ ಭಾಗಣ್ಣ, ಪವನ ಮೇತ್ರಿ, ಭರತ,ಗಣೇಶ, ನೇಹಾ ಜಾಧವ, ರಮೇಶ ಅವರು ಶೇ. ಶೇ.85ರಿಂದ ೮೪ರಷ್ಟು ಅಂಕ ಪಡೆದುಕೊಂಡಿದ್ದಾರೆ.

ವಿದ್ಯಾರ್ಥಿಗಳ ಸಾಧನೆಗೆ ಕಾಯಕ ಫೌಂಡೇಷನ್ ಏಜುಕೇಷನ್ ಟ್ರಸ್ಟ್ ಸಂಸ್ಥಾಪಕರಾದ ಶಿವರಾಜ ಟಿ.ಪಾಟೀಲ್, ಅಧ್ಯಕ್ಷರಾದ ಸಪ್ನಾ ಶಿವರಾಜ ಪಾಟೀಲ್,ಪ್ರಾಚಾರ್ಯ ಗುರುಬಸಯ್ಯ ಸಾಲಿಮಠ, ಕಾನೂನು ಸಲಹೆಗಾರರಾದ ಬಸವರಾಜ ಬಿರಾದಾರ ಸೊನ್ನ,  ಆಡಳಿತಾಧಿಕಾರಿಗಳಾದ ಮಹಾಂತೇಶ ಪಾಟೀಲ್, ಗೋವಿಂದ ಕುಲಕರ್ಣಿ,ಚಂದ್ರಶೇಖರ ಶಂಕನೋರ ಮೊದಲಾದವರು ಹರ್ಷ ವ್ಯಕ್ತಪಡಿಸಿದ್ದಾರೆ.

ಕಾಯಕ ಸಂಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ಹೈಟೆಕ್ ಮತ್ತು ಗುಣಮಟ್ಟದ ಶಿಕ್ಷಣವನ್ನು ನೀಡುವ ಮೂಲಕ ವೈದ್ಯ,ಇಂಜಿನಿಯರ್‌ಗಳಾಗುವಂತೆ ಸೂಕ್ತ ತರಬೇತಿ ನೀಡಲಾಗುತ್ತಿದೆ. ಈ ಸಲವೂ ಉತ್ತಮ ಫಲಿತಾಂಶ ಬಂದಿರುವುದಕ್ಕೆ ಕಾಲೇಜಿನಲ್ಲಿ ನೀಡುತ್ತಿರುವ ಗುಣಮಟ್ಟದ ಶಿಕ್ಷಣಕ್ಕೆ ಹಿಡಿದ ಕನ್ನಡಿಯಾಗಿದೆ. ಎಸ್‌ಎಸ್‌ಎಲ್‌ಸಿಯಲ್ಲಿ ಅತಿ ಹೆಚ್ಚಿನ ಅಂಕಗಳನ್ನು ಪಡೆದುಕೊಂಡಿರುವ ವಿದ್ಯಾರ್ಥಿಗಳನ್ನು ದತ್ತು ತೆಗೆದುಕೊಂಡು  ಉಚಿತ ಶಿಕ್ಷಣ ನೀಡಲಾಗುವುದು.

 

 

 

 

 

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here