ಕಲಬುರಗಿ: ನಗರದ ಎಂ. ಎಸ್.ಕೆ.ಮಿಲ್ ಕೇಂದ್ರ ಬಸ್ ನಿಲ್ದಾಣದ ಪಕ್ಕದಲ್ಲಿ ಇರುವ ವಾಣಿಜ್ಯ ನಿವೇಶನದ ಹರಾಜು ಪ್ರಕ್ರಿಯೆಯಲ್ಲಿ ಅವ್ಯವಹಾರ ನಡೆದಿದ್ದು ಕೂಡಲೆ ಇದರಲ್ಲಿ ಭಾಗಿಯಾದವರ ವಿರುದ್ಧ ಸೂಕ್ತವಾದ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಸಚಿವ ಎಸ್.ಕೆ ಕಾಂತಾ ಒತ್ತಾಯಿಸಿದರು.
ಕೇಂದ್ರ ಬಸ್ ನಿಲ್ದಾಣ ಪಕ್ಕದಲ್ಲಿಇರುವಒಟ್ಟು ೧೫ ನಿವೇಶನಗಳ ಹರಾಜು ಮಾಡಲು ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರ ನವೆಂಬರ್ ೨೪-೨೦೨೦ ರಂದು ಪ್ರಕಟಣೆ ಹೊರಡಿಸಿತ್ತು. ಆದರೆ ವಾಣಿಜ್ಯ ನಿವೇಶನ ಸಂಖ್ಯೆ ೮೮/೧ ಕ್ಕೆ ಒಂದೇಒಂದುಅರ್ಜಿ ಬಂದಿದ್ದು, ಅದು ಒಂದೇ ಕುಟುಂಬದವರು ಹರಾಜು ಪ್ರಕ್ರಿಯೆಯಲ್ಲಿ ಬೇರೆ ಬೇರೆ ವಿಳಾಸ ನೀಡಿ ಭಾಗಿಯಾಗಿದ್ದರುಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ಹರಾಜು ಪ್ರಕ್ರಿಯೆಯಲ್ಲಿ ಶ್ವೇತಾ ಪಾಟೀಲ್, ಡಾ.ಅಲೋಕ ಪಾಟೀಲ್ ಹಾಗೂ ಶಾಂತಲಿಂಗ ಎಂ. ಅಲಿಪೂರ ಭಾಗವಹಿಸಿದ್ದರು.ಶ್ವೇತಾ ಪಾಟೀಲ್‌ಅವರು ಮಹಾರಾಷ್ಟ್ರದ ಸತಾರಾ ವಿಳಾಸ ನೀಡಿದ್ದರು.ಆದರೆಅವರು ಶಾಸಕ ದತ್ತಾತ್ರೇಯ ಪಾಟೀಲ ಅವರ ಸಹೋದರ ಡಾ. ಅಲೋಕ ಪಾಟೀಲ್‌ಅವರ ಪತ್ನಿಯಾಗಿದ್ದು, ಶಾಂತಲಿಂಗ ಅಲಿಪೂರಅವರು ಸಹ ಅಲೋಕ ಪಾಟೀಲ್‌ಅವರಿಗೆಆಪ್ತರಾಗಿದ್ದಾರೆ.
ಹರಾಜು ಪ್ರಕ್ರಿಯೆಯಲ್ಲಿ ಶ್ವೇತಾ ಪಾಟೀಲ್‌ಅವರಿಗೆ ನಿವೇಶನ ನೀಡಲಾಯಿತು. ಹರಾಜು ನಿಯಮದ ಪ್ರಕಾರ ನಿವೇಶನದ ಬಾಕಿ ಮೊತ್ತವನ್ನು ೬೦ ದಿನದಲ್ಲಿ ಪಾವತಿ ಮಾಡಬೇಕು. ಇಲ್ಲವಾದರೆ ಹರಾಜಾದ ನಿವೇಶನವನ್ನುರದ್ದುಪಡಿಲಾಗುವುದುಎಂದುಇದೆ.ಆದರೆ ಶ್ವೇತಾ ಪಾಟೀಲ್‌ಅವರು ಬಾಕಿ ಹಣ ಪಾವತಿಗೆ ಕಾಲಾವಕಾಶ ಕೋರದೆಇದ್ದರೂ ಸಹ ನಗರಾಭಿವೃದ್ಧಿ ಪ್ರಾಧಿಕಾರ ಹಾಗೂ ಆಯುಕ್ತರುಅವರಿಗೆ ನಿವೇಶನ ನೀಡಿದ್ದು ಕಾನೂನು ಬಾಹಿರವಾಗಿರುತ್ತದೆಎಂದು ಆಪಾದಿಸಿದರು.
ಪ್ರಾಧಿಕಾರದಅಧಿನಿಯಮಉಲ್ಲಂಘನೆ ತಿಳಿದಿದ್ದರು ಸಹ ಕಚೇರಿಯಲ್ಲಿ ನಿರ್ವಾಹಕರೆಂದು ಕೆಲಸ ಮಾಡುತ್ತಿರುವ ಸುಬ್ಬರಾವ ಸುಬೇದಾರ ಹಾಗೂ ಆಯುಕ್ತರಾದರಾಚಪ್ಪಅವರು ಸುಮಾರು ೪.೩೦ ಕೋಟಿಠೇವಣಿ ಮೊತ್ತ ಮುಟ್ಟುಗೋಲು ಹಾಕಿಕೊಳ್ಳಬೇಕಾಗಿತ್ತು ಆದರೆಅದನ್ನು ನಿರ್ವಹಿಸದೆ ನೇರವಾಗಿ ಶ್ವೇತಾ ಪಾಟೀಲರಿಗೆ ನಿವೇಶನ ಪಡೆದುಕೊಳ್ಳಲು ಅನುಕೂಲ ಮಾಡಿದ್ದಾರೆ. ಇದರಿಂದ ಪ್ರಾಧಿಕಾರಕ್ಕೆ ೪.೩೦ಕೋಟಿ ನಷ್ಟವಾಗಿದ್ದು, ಕೂಡಲೇ ಸಂಬಂಧಪಟ್ಟಅವ್ಯವಹಾರದಲ್ಲಿ ಭಾಗಿಯಾದಎಲ್ಲರ ಮೇಲೂ ಭ್ರಷ್ಟಾಚಾರ ಕಾಯ್ದೆಯಡಿಯಲ್ಲಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದುಅವರು ಒತ್ತಾಯಿಸಿದರು.ಅಸ್ಲಂಕಲ್ಯಾಣಿಇತರರಿದ್ದರು.
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…