ಬಿಸಿ ಬಿಸಿ ಸುದ್ದಿ

ಸ್ವಂತ ಶಕ್ತಿಯಿಂದ ಪ್ರಿಯಾಂಕ್ ಖರ್ಗೆ ರಾಜ್ಯಮಟ್ಟದಲ್ಲಿ ಬೆಳೆದಿದ್ದಾರೆ: ಮೊಹಮದ್ ನಲಪಾಡ್

ಕಲಬುರಗಿ: ಎನ್ ಎಸ್ ಐ ಯೂ ನಿಂದ ತಮ್ಮ ರಾಜಕೀಯ ಪ್ರಾರಂಭಿಸಿದ ಶಾಸಕರಾದ ಪ್ರಿಯಾಂಕ್ ಖರ್ಗೆ ಅವರು ಸ್ವಂತ ಪರಿಶ್ರಮ ಹಾಗೂ ಶಕ್ತಿಯಿಂದಾಗಿ ಸಚಿವರಾಗಿ ಜನಾನುರಾಗಿಯಾಗಿ ರಾಜ್ಯ ನಾಯಕರಾಗಿ ಬೆಳೆದಿದ್ದಾರೆ ಯೂಥ್ ಕಾಂಗ್ರೆಸ್ ರಾಜ್ಯಾಧ್ಯಕ್ಷರಾದ ಮೊಹಮ್ಮದ್ ಹ್ಯಾರಿಸ್ ನಲಪಾಡ್ ಮಾತನಾಡುತ್ತಿದ್ದರು.

ವಾಡಿ ಪಟ್ಟಣದಲ್ಲಿ ಏರ್ಪಡಿಸಲಾಗಿದ್ದ ಯುವಗರ್ಜನೆ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.ರಾಜ್ಯದಲ್ಲಿ ಯಾವುದೇ ಕ್ಷೇತ್ರದಲ್ಲಿಯೂ ಇಷ್ಟೊಂದು ಪ್ರಮಾಣದಲ್ಲಿ ಯುವಕರನ್ನು ಸೆಳೆಯುವಂತ ಶಕ್ತಿ ಕೇವಲ ಪ್ರಿಯಾಂಕ್ ಖರ್ಗೆ ಅವರಿಗಿದೆ. ಮುಂದೆ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಾಗ ಸಚಿವರಾಗುತ್ತಾರೆ. ಮುಂದಿನ ವರ್ಷಗಳಲ್ಲಿ ಅವರು ಈ ರಾಜ್ಯದ ಮುಖ್ಯಮಂತ್ರಿಗಳಾಗುತ್ತಾರೆ ಎಂದು ನಲಪಾಡ್ ಹೇಳಿದರು.

ಕೇಂದ್ರ ಸರ್ಕಾರದ ನಿರ್ಲಕ್ಷ್ಯತನ ಹಾಗೂ ಬೇಜವಾಬ್ದಾರಿಯಿಂದಾಗಿ ಯುವಕರು ನಿರುದ್ಯೋಗಿಗಳಾಗಿದ್ದಾರೆ. ಪದವಿಧರರು ಜೊಮೋಟೋ, ಸ್ವಿಗ್ಗಿ ಡೆಲಿವರಿ ಬಾಯ್ ಗಳಾಗಿ ಕೆಲಸ ಮಾಡುತ್ತಿದ್ದಾರೆ. ಮೋದಿಯವರೇ, ನಮ್ಮ ಸರ್ಕಾರವಿದ್ದಾಗ ಬೆಲೆ ಏರಿಕೆಯಿಂದಾಗಿ ಈ ಸರ್ಕಾರ ಹೋಗಲಿ ಎಂದು ಘೋಷಣೆ ಹಾಕಿದ್ದೀರಿ ಈಗ ಏನಾಗಿದೆ? ಪ್ರತಿವರ್ಷ ಎರಡು ಕೋಟಿ ಉದ್ಯೋಗ ಕೊಡಿಸುವ ನಿಮ್ಮ ಭರವಸೆ ಏನಾಗಿದೆ? ಇಲ್ಲಿಯವರೆಗೆ ನಿಮ್ಮ ಎಂಟು ವರ್ಷದ ಅವಧಿಯಲ್ಲಿ 16 ಕೋಟಿ ಯುವಕರು ಉದ್ಯೋಗಪಡೆದುಕೊಳ್ಳಬೇಕಿತ್ತು. ನೀವೆ ಹೇಳಿ ಎಷ್ಟು ಜನ ಉದ್ಯೋಗ ಪಡೆದಿದ್ದಾರೆ ಎಂದು ಪ್ರಶ್ನಿಸಿದರು.

ಈಗಿನ ಪರಿಸ್ಥಿತಿಯಲ್ಲಿ ತಂದೆ ತಾಯಿಗಳು ಮಕ್ಕಳನ್ನು ಓದಿ ಎನ್ನದಂತಾಗಿದೆ. ಓದಿದ ಮಗ ಕೆಲಸ ಸಿಗದೆ ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಿತಿ ಬಂದಿದೆ ಎಂದು ವಿಷಾದ ವ್ಯಕ್ತಪಡಿಸಿದ ನಲಪಾಡ್  ದಿನಬಳಕೆ ವಸ್ತುಗಳ ಬೆಲೆ ಗಗನಕ್ಕೇರಿದೆ. ಭ್ರಷ್ಟಚಾರ ವ್ಯಾಪಕವಾಗಿದೆ. ಪಿಎಸ್ ಐ ನೇಮಕಾತಿಯಲ್ಲಿ ಭ್ರಷ್ಟಚಾರ ಎಸಗಿ ೪೦% ಲಂಚದ ಸರ್ಕಾರ ಪಿಎಸ್ ಐ ಆಗಬೇಕಿದ್ದವರ ಬಾಳಿಗೆ ಕೊಳ್ಳಿ ಇಟ್ಟಿದೆ ಎಂದು ಖಾರವಾಗಿ ಹೇಳಿದರು.

ಗುತ್ತಿಗೆದಾರರಿಗೆ ಕಿರುಕುಳ ಜಾಸ್ತಿಯಾಗಿದ್ದಕ್ಕೆ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡ ಆದರೆ ಸಚಿವ ಈಶ್ವರಪ್ಪನವರ ಮೇಲೆ ಒಂದು ಎಫ್ ಐ ಆರ್ ದಾಖಲಾಗಲಿಲ್ಲ. ಬಾಬಾಸಾಹೇಬರು ಒದಗಿಸಿದ ಮಾತನಾಡುವ ಹಕ್ಕನ್ನು ಈ ಸರ್ಕಾರ ಕಿತ್ತುಕೊಂಡಿದೆ. ಸರ್ಕಾರದ ವಿರುದ್ದ ಮಾತ‌ನಾಡುವವರ ಮೇಲೆ ಕೇಸು ದಾಖಲಿಸಲಾಗುತ್ತಿದೆ. ಕಾಂಗ್ರೆಸ್‌ ಪಕ್ಷ ಇಂತಹ ಬೆದರಿಕೆಗಳಿಗೆ ಬಗ್ಗಲ್ಲ. ಯುವಕರ ಎಲ್ಲ ಸಮಸ್ಯೆ ಬಗೆಹರಿಯಬೇಕಾದರೆ, 2023 ರಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಬೇಕು. ನೀವೆಲ್ಲ ಇದಕ್ಕೆ ಪರಿಶ್ರಮ ಪಡಬೇಕು ಎಂದು ಮನವಿ ಮಾಡಿದರು.

ಉದ್ಯೋಗ ಸೃಷ್ಠಿ ಡಾನ್ ಇನ್ ಆ್ಯಪ್ ನಲ್ಲಿ ನೀವೆಲ್ಲ ರಾಹುಲ್ ಗಾಂಧಿಯವರೊಂದಿಗೆ ನೇರವಾಗಿ ಮಾತನಾಡಬಹುದು. ಭಾರತ್ ಜೋಡೋ ಯಾತ್ರೆ 3500 ಕಿಮಿ ದೂರದ ಯಾತ್ರೆ ಯುವಕರ ಧ್ವನಿಯಾಗುವುದಕ್ಕೆ ರಾಹುಲ್ ಗಾಂಧಿ ನಡೆಯುತ್ತಿದ್ದಾರೆ. ಜನರನ್ನ ಹಿಂದೂ ಮುಸ್ಲಿಂ ಎಂದು ಧರ್ಮದ ಆಧಾರದ ಮೇಲೆ ಒಡೆಯಲಾಗುತ್ತಿದೆ ಅದನ್ನು ತಡೆಯಲು‌ ಭಾರತ್ ಜೋಡೋ ಯಾತ್ರೆ ಕೈಗೊಳ್ಳಲಾಗುತ್ತಿದೆ.‌ ಈ ಯಾತ್ರೆಯಲ್ಲಿ ನೀವೆಲ್ಲ ಹೆಜ್ಜೆ ಹಾಕಬೇಕು ನಾವೆಲ್ಲ ಒಂದೇ. ನಾವು ಮಾನವೀಯತೆ ಉಳ್ಳವರು ಎಂದು  ಸಾಬೀತುಪಡಿಸಿ ಎಂದರು.

ಚೀತಾ ಬೀಡುವುದೇ ಏನು ಮಹಾನ್ ಕೆಲಸವೇ? ಎಂದು ಪ್ರಶ್ನಿಸಿದ ನಲಪಾಡ್ ಅವರು ಮೋದಿಯವರಿಗೆ ಚೀತಾ ಹೊರಗೆ ಬಿಡಲು ನಾಲ್ಕು ತಾಸು ಸಮಯವಿದೆ. ಆದರೆ ಯುವಕರಿಗೆ ಉದ್ಯೋಗ ಒದಗಿಸಲು ಸಮಯವಿಲ್ಲವೇ? ಮೋದಿ ಚೀತಾ ಬಿಡುವುದನ್ನೇ ತಾಸುಗಟ್ಟಲೇ ಪದೇ ಪದೇ ತೋರಿಸುವ ಟಿವಿ ಮಾಧ್ಯಮಗಳೇ ಎರಡು‌ನೂರು ಕಿಲೋಮೀಟರ್ ಪಾದಯಾತ್ರೆ ಮಾಡಿದ ಗಂಡುಮಗ ರಾಹುಲ್ ಗಾಂಧಿ‌ ಯಾಕೆ ತೋರಿಸಲ್ಲ? ಎಂದು ಆಕ್ರೋಶ ವ್ಯಕ್ತಪಡಿಸಿದರು.

ದೇಶದ ಭವಿಷ್ಯ ಉದ್ದಾರವಾಗಲು ಯುವಕರ ಬಾಳು ಬೆಳಕಾಗಲು ನೀವೆಲ್ಲ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕು ಕ್ಷೇತ್ರದ ಮತ್ತಷ್ಟು ಅಭಿವೃದ್ದಿಯಾಗಬೇಕಾದರೆ‌ ಪ್ರಿಯಾಂಕ್ ಖರ್ಗೆ ಅವರನ್ನ ಮತ್ತೊಮ್ಮೆ ಶಾಸಕರನ್ನಾಗಿ ಮಾಡಿ ಎಂದು ಮನವಿ ಮಾಡಿದರು.

ಮಾಜಿ ಸಚಿವರಾದ ಡಾ ಶರಣಪ್ರಕಾಶ ಪಾಟೀಲ, ಡಿಸಿಸಿ ಅಧ್ಯಕ್ಷ ಜಗದೇವ ಗುತ್ತೇದಾರ, ಸುಭಾಷ್ ರಾಠೋಡ, ಮಾಜಿ ಎಂ ಎಲ್ ಸಿ ತಿಪ್ಪಣ್ಣಪ್ಪ ಕಮಕನೂರು, ಶಿವಾನಂದ ಪಾಟೀಲ,‌ನವೀನ್, ನಿಕೇತ್ ರಾಜ್, ಸೇರಿದಂತೆ ಹಲವರು ಉಪಸ್ಥಿತರಿದ್ದರು.

emedialine

Recent Posts

ಬಸವೇಶ್ವರ ಆಸ್ಪತ್ರೆಯ ಅತ್ಯುತ್ತಮ ಸೇವಾ ಸಿಬ್ಬಂದಿಗಳೆಗೆ ಪುರಸ್ಕಾರ

ಕಲಬುರಗಿ: ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಬಸವೇಶ್ವರ ಬೋಧನಾ ಹಾಗೂ ಸಾರ್ವಜನಿಕ ಆಸ್ಪತ್ರೆಯಲ್ಲಿ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತಿರುವ ಸೇವಾ ಸಿಬ್ಬಂದಿಗಳನ್ನು …

2 hours ago

ವಿವಿಧ ಕ್ಷೇತ್ರದ ಸಾಧಕರಿಗೆ ಕಲ್ಯಾಣ ಸಿರಿ ಪ್ರಶಸ್ತಿ ಪ್ರದಾನ

ಕಲಬುರಗಿ: ನಗರದ ಶಹಾಬಜಾರ್ ಆರಾಧನಾ ಶಿಕ್ಷಣ ಸಂಸ್ಥೆಯಲ್ಲಿ ಕಲ್ಯಾಣ ಕರ್ನಾಟಕ ರಕ್ಷಣಾ ವೇದಿಕೆಯು ಆಯೋಜಿಸಿದ ಕನ್ನಡ ರಾಜ್ಯೋತ್ಸವ ಆಚರಣೆ ಕಾರ್ಯಕ್ರಮದಲ್ಲಿ…

2 hours ago

ಸರ್ಕಾರಿ ನೌಕರರ ತುಟ್ಟಿ ಭತ್ಯೆ ಹೆಚ್ಚಳ; ಶ್ರೀಧರ ನಾಗನಹಳ್ಳಿ ಅಭಿನಂದನೆ

ಕಲಬುರಗಿ: ರಾಜ್ಯ ಸರ್ಕಾರಿ ನೌಕರರ ತುಟ್ಟಿ ಭತ್ಯೆ ಹೆಚ್ಚಳ ಮಾಡಿರುವುದಕ್ಕೆ ಶಹಾಬಾದ ನೌಕರರ ಸಂಘದ ನಿರ್ದೇಶಕ ಶ್ರೀಧರ ನಾಗನಹಳ್ಳಿ ಸರಕಾರಕ್ಕೆ…

2 hours ago

ಸರಕಾರಕ್ಕೆ ಸಂಜಯ್ ರಾಠೋಡ್ ಅಭಿನಂದನೆ

ಕಲಬುರಗಿ: ರಾಜ್ಯ ಸರಕಾರಿ ನೌಕರರಿಗೆ ಶೇ.2.25 ತುಟ್ಟಿ ಭತ್ಯ ಹೆಚ್ಚಿಸಿ ಸರಕಾರಿ ಆದೇಶ ಹೊರಡಿಸಿದ  ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮತ್ತು…

2 hours ago

ಕನ್ನಡಿಗರ ಹಬ್ಬ ಕಾರ್ಯಕ್ರಮ ಉದ್ಘಾಟನೆ

ಕಲಬುರಗಿ: ನಗರದ ಡಾ.ಎಸ್.ಎಂ.ಪಂಡಿತ ರಂಗಮಂದಿರದಲ್ಲಿ ಕಲ್ಯಾಣ ಕರ್ನಾಟಕ ಸೇನೆ ಜಿಲ್ಲಾ ಘಟಕದಿಂದ ಕನ್ನಡ ರಾಜ್ಯೋತ್ಸವ ದಿನ ನಿಮಿತ್ತ ಕನ್ನಡಿಗರ ಹಬ್ಬ…

2 hours ago

ಅಮೀತ ಪಾಟೀಲ್ ಸೆಂಟ್ರಲ್ ಸ್ಕೂಲ ವಿದ್ಯಾರ್ಥಿ ಆದಿತ್ಯ ಪಾಟೀಲ್ ರಾಜ್ಯಕ್ಕೆ ಆಯ್ಕೆ

ಕಲಬುರಗಿ : ರಂಗಾಯಣದಲ್ಲಿ ಇತ್ತೀಚೆಗೆ ರಾಜ್ಯ ಬಾಲ ಭವನ ಸೊಸೈಟಿ ಜಿಲ್ಲಾ ಪಂಚಾಯಿತಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ…

2 hours ago