ಕಲಬುರಗಿ: ಜಿಲ್ಲಾದ್ಯಾಂತ ಕುಡಿಯುವ ನೀರಿಗಾಗಿ ಆಹಾ..ಕಾರ ಶುರುವಾಗಿದೆ. ಜಾನುವಾರು ಸಂಕಷ್ಟಕೆ ಸಿಲುಕಿ ಮೃತಪಡುತ್ತಿವೆ. ಶೀಘ್ರದಲ್ಲಿ ಕುಡಿಯುವ ನೀರಿನ ಸಮಸ್ಯೆ ನಿವಾರಿಸಬೇಕೆಂದು ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಅಧ್ಯಕ್ಷ ಶರಣಪ್ಪ ಮಮಶೆಟ್ಟಿ ಪ್ರತಿಭಟನೆಯಲ್ಲಿ ಒತ್ತಾಯಿಸಿದ್ದರು.
ಅವರು ಕಲಬುರಗಿ ಜಿಲ್ಲಾ ಪಂಚಾಯತ್ ಕಚೇರಿ ಎದುರು ಸಾಸರಗಾಂವ, ರುಮ್ಮುನಗುಡ ತಾಂಡಾ, ರಟಕಲ್ ಗ್ರಾಮ, ಕುರುಬುರ ಓಣಿ, ಸುಂಠಾಣ ಬಡಾ ಸಣ್ಣ ತಾಂಡಾಗಳ ನಿವಾಸಿಗಳು ಕುಡಿಯುವ ನೀರಿಗಾಗಿ ಕಲಬುರಗಿ ಜಿಲ್ಲಾ ಪಂಚಾಯಿತ ಕಚೇರಿಯ ಮುಂದೆ ಖಾಲಿ ಕ್ವಡಗಳನ್ನು ತಲೆಯ ಮೇಲೆ ಹೊತ್ತಿಕೊಂಡು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದರು.
ಅಭಿವೃದ್ಧಿ ಅಧಿಕಾರಿಗಳು ಗ್ರಾಮಗಳಿಗೆ ಸೂಕ್ತವಾಗಿ ನೀರಿನ ಸಮಸ್ಯೆ ಕುರಿತು ಸ್ಪಂದಿಸದ ಕಾರಣ ರೈತರು, ತಮ್ಮ ಜಾನುವಾರು ಎತ್ತು, ಎಮ್ಮೆ, ಕುರಿಗಳನ್ನು ಮಾರಾಟ ಮಾಡುತ್ತಿದ್ದಾರೆಂದು ಪ್ರತಿಭಟನೆಯಲ್ಲಿ ಕಳವಳ ವ್ಯಕ್ತ ಪಡಿಸಿದ್ದರು. ಈ ಸಂದರ್ಭದಲ್ಲಿ ಚಿಂಚೋಳಿ ತಾಲೂಕಿನ ಬೇರೆ ಬೇರೆ ಗ್ರಾಮ ಹಾಗೂ ಹಳ್ಳಿಗಳ ನಿವಾಸಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.