ನವದೆಹಲಿ: ಮಹಾರಾಷ್ಟ್ರ ಮೂಲದ ದಂಪತಿಗಳು ಮುಸ್ಲಿಂ ಮಹಿಳೆಯರಿಗೆ ಮಸೀದಿಯೊಳಗೆ ಪ್ರವೇಶಿಸಲು ಮತ್ತು ಪ್ರಾರ್ಥನೆಗೆ ಅವಕಾಶ ಕಲ್ಪಿಸುವಂತೆ ಸುಪ್ರೀಂ ಕೋರ್ಟ್ ಗೆ ಸಾರ್ವಜನಕ ಹಿತಾಸಕ್ತಿ ಅರ್ಜಿಯನ್ನು ಕೈಗೆತ್ತಿಕೊಂಡಿರುವ ಸುಪ್ರೀಂ ಕೋರ್ಟ್ ರಾಷ್ಟ್ರೀಯ ಮಹಿಳಾ ಆಯೋಗ, ಕೇಂದ್ರ ವಕ್ಫ್ ಕೌನ್ಸಿಲ್ ಮತ್ತು ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ಗೆ ನೋಟಿಸ್ ನೀಡಿದೆ.
ದಂಪತಿ ಯಸ್ಮೀನ್ ಝುಬರ್ ಅಹಮದ್ ಪೀರ್ಜಾಡೆ ಮತ್ತು ಅವರ ಪತಿ ಜುಬರ್ ಅಹ್ಮದ್ ನಜೀರ್ ಅಹ್ಮದ್ ಪೀರ್ಜಾಡೆ ಎನ್ನುವವರು ಸಾರ್ವಜನಿಕ ಹಿತಸಾಕ್ತಿ ಅರ್ಜಿಯನ್ನು ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾದ ಎಸ್.ಎ. ಬ್ಬಾಬ್ಡೆ ಮತ್ತು ಎಸ್.ಅಬ್ದುಲ್ ನಝೀರ್ ಅವರ ಪೀಠವು ಅರ್ಜಿದಾರರಿಗೆ ಕೌನ್ಸಿಲ್ ನೀಡಿರುವ ಉತ್ತರ ತೃಪ್ತಿಕರವಾಗಿಲ್ಲ ಎಂದು ಹೇಳಿ, ಈಗ ವಿಚಾರಣೆ ಕೈಗೊಳ್ಳಲು ಪ್ರಮುಖ ಕಾರಣ ಶಬರಿಮಲೆ ವಿಚಾರದಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ಎಂದು ಪೀಠ ಅಭಿಪ್ರಾಯಪಟ್ಟಿದೆ. ಶಬರಿಮಲೆ ವಿಷಯದಲ್ಲಿ ಸುಪ್ರೀಂಕೋರ್ಟ್ ತೀರ್ಪನ್ನು ಉದಾಹರಿಸುತ್ತಾ, ಮಹಿಳೆಯರಿಗೆ ಆರಾಧನೆ ಹಕ್ಕುಗಳನ್ನು ನಿರಾಕರಿಸಲು ಧರ್ಮವನ್ನು ಮಾರ್ಗವನ್ನಾಗಿ ಬಳಸಬಾರದು ಎಂದು ನ್ಯಾಯಾಲಯ ಹೇಳಿದೆ.