ಕಲಬುರಗಿ: ನಗರದ ಹೈ.ಕ.ಶಿ.ಸಂಸ್ಧೆಯ ಎಂ.ಎಸ್.ಇರಾಣಿ ಪದವಿ ಮಹಾವಿದ್ಯಾಲಯದಲ್ಲಿ ಗುಲಬರ್ಗಾ ವಿಶ್ವವಿದ್ಯಾಲಯ ಕಲಬುರಗಿ ಪುರುಷ ಮತ್ತು ಮಹಿಳಾ ಬ್ಯಾಡ್‍ಮಿಂಟನ್ ತಂಡದ ಆಯ್ಕೆ ಪ್ರಕ್ರೀಯೆ 2022-23ನೇ ಸಾಲಿನ ಕ್ರೀಡಾಕೂಟವನ್ನು ಗು.ವಿ. ದೈಹಿಕಶಿಕ್ಷಣ ವಿಭಾಗದ ನಿರ್ದೇಶಕ ಡಾ.ಎನ್.ಜಿ.ಕಣ್ಣೂರ್ ಅವರು ಬ್ಯಾಡಮಿಂಟನ್ ಆಟ ಆಡುವದರ ಮೂಲಕ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಆಸಕ್ತಿ ವಹಿಸಬೇಕು ಕಾರಣ ಆರೋಗ್ಯದ ದೃಷ್ಟಿಯಿಂದ ಓದುವುದರ ಜೊತೆ ಪಠ್ಯೇತರ ಚಟುವಟಿಕೆಯಲ್ಲಿ ಭಾಗವಹಿಸಬೇಂದು ವಿದ್ಯಾರ್ಥಿಗಳಿಗೆ ತಿಳಿ ಹೇಳಿದರು.
ಮುಖ್ಯ ಆಥಿತಿಗಳಾಗಿ ಆಗಮಿಸಿದ ಆಡಳಿತ ಮಂಡಳಿ ಸದಸ್ಯರು ಹಾಗೂ ಸಂಯೋಜಕ ಸೋಮನಾಥ ಸಿ.ನಿಗ್ಗುಡಗಿ ಅವರು ಕ್ರೀಡಾಪಟುಗಳಿಗೆ ಶುಭ ಹಾರೈಸಿದರು.
ಪ್ರಾಚಾರ್ಯ ಡಾ.ರಾಜಶೇಖರ ವ್ಹಿ ಬೀರನಳ್ಳಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ಎರಡು ವರ್ಷಗಳ ಕಾಲ ಕೋವಿಡ್ ಸಲುವಾಗಿ ಎಲ್ಲಾ ಚಟುವಟಿಕೆಗಳು ಸ್ಥಗಿತಗೊಂಡಿರುತ್ತವೆ ಈಗ ವಿಶ್ವವಿದ್ಯಾಲಯದ ಕ್ರೀಡಾ ಚಟುವಟಿಕೆಗಳು ಪ್ರಾರಂಭವಾಗಿದ್ದು. ತುಂಬಾ ಸಂತೋಷ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಕರೆಕೊಟ್ಟರು.
ಕಾರ್ಯಕ್ರಮವು ಕುಮಾರಿ.ಯಶೋಧ.ಮಿಸ್ಕಿ ಬಿ.ಎ. ಪ್ರಥಮ ಸೇಮಿಸ್ಟರ್ ವಿದ್ಯಾರ್ಥಿನಿ ಪ್ರಾರ್ಥನೆಗೀತೆ ಹಾಡಿದರು, ಕಾಲೇಜಿನ ದೈಹಿಕ ನಿರ್ದೇಶಕರಾದ ಡಾ.ಶಂಕ್ರಪಾ ್ಪಕಲಬುರ್ಗಿ ಸ್ವಾಗತೀಸಿದರು. ಮತ್ತು ಗ್ರಂಥಪಾಲಕ ಡಾ. ಪ್ರಾಣೇಶ. ಎಸ್. ವಂದಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ಪ್ರೋ ಬಿ.ಎಸ್. ಕಾಗೆ ನೇರವೇರಿಸಿದರು. ಕಾರ್ಯಕ್ರಮಲ್ಲಿ ಕ್ರೀಡಾ ಸಲಹಾಗಾರ ಡಾ.ನೀಲಕಂಠ ವಾಲಿ, ಐ.ಕ್ಯೂ.ಎ.ಸಿ.ಸಂಯೋಜಕ ಪ್ರೊ.ಆರ್.ಎಸ್. ಹಿಳ್ಳಿ, ಡಾ.ಎಸ್.ಡಿ. ಬರ್ದಿ, ಪ್ರೊ.ಎಸ್.ಎಮ್.ಕೋಟನೂರ ಹಾಗೂ ವಿವಿಧ ಕಾಲೇಜೀನ ವಿದ್ಯಾರ್ಥಿಗಳು ಮತ್ತುದೈಹಿಕ ನಿರ್ದೇಶಕರು, ಕಾಲೇಜಿನ ಎಲ್ಲಾ ಬೋಧಕ ಮತ್ತು ಬೋಧಕೇತರ ಸಿಬ್ಬಂದಿವರ್ಗದವರು ಉಪಸ್ಥಿತರಿದ್ದರು.