ಆಳಂದ: ವೃದ್ಧೆಯರ ಮೇಲೆ ದೌರ್ಜನ ಆಗಿದ್ದು ಕೇಳಿದ್ದೇವೆ. ಆದರೆ ಇಂದು ಅಪ್ರಾಪ್ತರ ಮೇಲೆ ದೌರ್ಜನ್ಯ ಕೊಲೆಯಂತ ಘೋರ ಕೃತ್ಯಗಳು ಹೆಚ್ಚುತ್ತಿರುವುದು ನಾಗರಿಕ ಸಮಾಜ ತಲೆತಗಿಸುವಂತಾಗಿದೆ ಎಂದು ಕಲಬುರಗಿ ಗೋದುತಾಯಿ ಪದವಿ ಮಹಾವಿದ್ಯಾಲಯ ಪ್ರಾಚಾರ್ಯ ಹಾಗೂ ನಿಕಟ ಪೂರ್ವ ಕಸಾಪ ಸಮ್ಮೇಳನಾಧ್ಯಕ್ಷೆ ಡಾ. ನೀಲಾಂಬಿಕಾ ಪೊಲೀಸ್ ಪಾಟೀಲ ಅವರು ತೀವ್ರ ಕಳವಳ ವ್ಯಕ್ತಪಡಿಸಿದರು.
ತಾಲೂಕಿನ ಮಾಡಿಯಾಳ ಗ್ರಾಮದಲ್ಲಿ ದಿ.ಮಲ್ಲೇಶಪ್ಪ ಬಿರಾದಾರ ಮಾಡಿಯಾಳ ವೇದಿಕೆಯಲ್ಲಿ ನಡೆದ 11ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಕೋರಳ್ಳಿ ಗ್ರಾಮದಲ್ಲಿ ಅಪ್ರಾಪ್ತೆ ಬಾಲಕಿಯ ಮೇಲೆ ನಡೆದ ದೌರ್ಜನ್ಯ ಕೊಲೆ ಘಟನೆಯನ್ನು ತೀವ್ರವಾಗಿ ಖಂಡಿಸಿದ ಅವರು, ಇಂಥ ಕೃತ್ಯ ಮರುಕಳಿಸದಂತೆ ಸರ್ಕಾರ ಕ್ರಮಕೈಗೊಳ್ಳಬೇಕು ಇಲ್ಲವಾದಲ್ಲಿ ಜನರೇ ಕಾನೂನು ಕೈಗೆತ್ತಿಕೊಳ್ಳುವ ಪರಿಸ್ಥಿತಿ ಎದುರಾಗಬಹುದು ಎಂದು ಅವರು ಎಚ್ಚರಿಸಿದರು.
ಸಮಾಜ ಇಂದು ಸಾಕಷ್ಟು ರೀತಿಯಲ್ಲಿ ಹಾಳಾಗಿದೆ, ಇದನ್ನು ಸರಿದಾರಿಗೆ ತರಲು ಸರ್ವರು ಕೈಜೋಡಿಸಬೇಕಾಗಿದೆ. ಹೆಣ್ಣುಮಕ್ಕಳು ಅನ್ಯಾಯದ ವಿರುದ್ಧ ಮೆಟ್ಟಿನಿಲ್ಲಬೇಕು. ರಾಣಿಚೆನ್ನಮ್ಮ, ಅಬ್ಬಕ್ಕ, ಶಿವಶರಣಿ ಅಕ್ಕಮಹಾದೇವಿಯಂತವರ ಚರಿತ್ರೆಯನ್ನು ಓದಬೇಕು. ಅಂದು ಅಕ್ಕಮಹಾದೇವಿ ಅಲ್ಲಂ ಪ್ರಭುಗಳಿಂದ ಅಕ್ಕ ಎನಿಸಿಕೊಂಡಳು, ಇಂದು ಮನೆಗಳಲ್ಲಿ ಶೌಚಾಲಯಗಳಿಲ್ಲದಕ್ಕೆ ಬಹಿರ್ದೇಸೆಗೆ ಹೋದಾಗ ಹಣ್ಣೆಮಕ್ಕಳ ಮೇಲೆ ಕೃತ್ಯ ಎಸಗಲಾಗುತ್ತಿದೆ. ಮೊದಲು ಎಲ್ಲರ ಮನೆಯಲ್ಲಿ ಶೌಚಾಲಯ ಕಟ್ಟಿಸಿಕೊಡುವಂತೆ ತಂದೆ, ತಾಯಿಗಳ ಬೆನ್ನು ಬೀಳಬೇಕು. ಸರ್ಕಾರವು ಶೌಚಾಲಯದಂತ ಮೂಲಸೌಲಭ್ಯವನ್ನು ಕಲ್ಪಿಸಿ ಹೆಣ್ಣುಮಕ್ಕಳ ರಕ್ಷಣೆ ಮಾಡಬೇಕು.ಇಂಥ ಸಮ್ಮೇಳನ ಅಪರಾಧ ಕೃತ್ಯಗಳ ಹತ್ತಿಕುವಂತ ಕರೆಯಾಗಲಿ ಎಂದರು.
ಸಮ್ಮೇಳನ ಉದ್ಘಾಟಿಸಿದ ಶಾಸಕ ಸುಭಾಷ ಗುತ್ತೇದಾರ ಅವರು ಮಾತನಾಡಿ, ನಾವೆಲ್ಲರೂ ಕನ್ನಡದಲ್ಲಿ ಶಿಕ್ಷಣ ಕಲಿಯೋಣ, ಕನ್ನಡ ಮಾತನಾಡೋಣ, ಕನ್ನಡಕ್ಕಾಗಿ ಕೆಲಸ ಮಾಡೋಣಾ, ಮಾಡಿಯಾಳ ಗ್ರಾಮದಲ್ಲಿ ವಾಚನಾಲಯ ಸ್ಥಾಪನೆ ಮೂಲಕ ದಿ. ಹಿರಿಯ ಸಾಹಿತಿ ಶಿವರಣಪ್ಪ ಪಾಟೀಲ ಜಾವಳಿ ಮತ್ತು ದೇಗಾಂವದ ಕವಿ ಗುಂಡಪ್ಪ ಅವರ ನಾಮಕಾರಣ ಮಾಡಲು ಉದ್ದೇಶಿಸಲಾಗಿದೆ. ಕನ್ನಡ ಸಾಹಿತ್ಯ ಸೇರಿ ಅಭಿವೃದ್ಧಿ ಕಾರ್ಯಕ್ಕೆ ಸದಾ ಸಹಕರಿಸಲಾಗುವುದು ಎಂದರು.
ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತ್ತಿಪ್ಪಿ ಅವರು ಮಾತನಾಡಿ, ತಾಲ್ಲೂಕು ಪ್ರಜ್ಞಾವಂತರ ಊರು, ತಾಲ್ಲೂಕಿನ ಹಲವು ಜ್ವಲಂತ ಸಮಸ್ಯೆಗಳಿ ಸಮ್ಮೇಳನ ಮೂಲಕ ಬೆಳಕು ಚೆಲ್ಲುವ ಪ್ರಯತ್ನ ಇದಾಗಿದೆ. ಮುಂದಿನ ದಿನಗಳಲ್ಲಿ ಆಳಂದನಲ್ಲಿ ಜಿಲ್ಲಾ ಸಮ್ಮೇಳನ ನಡೆಸಲಾಗುವುದು ಎಂದರು.
ಸಿದ್ಧಲಿಂಗೇಶ್ವರ ಪ್ರಕಾಶನ ಬಸವರಾಜ ಕೊನಕ ಅವರು ಮಾತನಾಡಿ, ತವರು ಗ್ರಾಮ ಮಾಡಿಯಾಳದಲ್ಲಿ ಸಮ್ಮೇಳನ ಜರುಗಿದ್ದ ಸಂತಷ ತಂದಿದೆ. ಎಸ್‍ಎಲ್‍ಸಿ ಮೇಲ್ಪಟ್ಟು ಶೇ 80 ಅಂಕ ಪಡೆಯುವ ವಿದ್ಯಾರ್ಥಿಗಳಿಗೆ ಉಚಿತ ಪಠ್ಯ ಪುಸ್ತಕ ನೀಡಲಾಗುವುದು ಎಂದು ಪ್ರಕಟಿಸಿದ ಅವರು, ನೂರು ದೇವಾಲಯಗಳ ಮಾಡಿಯಾಳ ಸಂಶೋಧನಾ ಕೃತಿ ಬರೆದುಕೊಟ್ಟರೆ ಪ್ರಕಟಿಸಲಾಗುವುದು ಎಂದರು.
ಗ್ರಾಮದ ಸೂರ್ಯಕಾಂತ ರಾಮಜಿ ಅವರು ಗ್ರಂಥಾಲಯ ನಿರ್ಮಾಣಕ್ಕೆ ಐದು ಲಕ್ಷ ಬೆಲೆಯ 30*40 ಅಳತೆಯ ನಿವೇಶನ ಧಾನ ನೀಡುವ ವಾಗ್ದಾನ ಮಾಡಿದರು.
ಮಾಡಿಯಾಳ ಒಪ್ಪತ್ತೇಶ್ವರ ಮಠದ ಶ್ರೀ ಮರುಳಸಿದ್ಧ ಮಹಾಸ್ವಾಮೀಜಿ ಆಶೀರ್ವಚನ ನೀಡಿದರು. ವೇದಿಕೆಯ ಮೇಲೆ ಪ್ರಮುಖರು ಇದ್ದರು.
ಶಿಕ್ಷಕ ಮಲ್ಲಿಕಾರ್ಜುನ ಬುಕ್ಕೆ, ಸ್ವಾಗತಿಸಿದರು. ರವಿಕುಮಾರ್ ಹೂಗಾರ್ ನಿರೂಪಿಸಿದರು. ಶ್ರೀಶೈಲ ಭೀಮಪೂರೆ ಖಜೂರಿ ವಂದಿಸಿದರು.
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…
ಕಲಬುರಗಿ: ಕರ್ನಾಟಕ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಚಿವ ಪ್ರಿಯಾಂಕ್ ಖರ್ಗೆ ಅವರ ಜನ್ಮದಿನದ ಪ್ರಯುಕ್ತ ಜೈ ಕನ್ನಡಿಗರ…
ಕಲಬುರಗಿ; ಕಾರಾಗೃಹದ ಬಂದಿಗಳಿಗೆ ಉಚಿತವಾಗಿ ಅದಾನಿ ಸಕ್ಷಮ ಸ್ಕಿಲ್ ಡೆವಲಪ್‍ಮೆಂಟ್, ವಾಡಿ ಹಾಗೂ ಕೇಂದ್ರ ಕಾರಾಗೃಹದ ಸಹಯೋಗದೊಂದಿಗೆ ಬಂದಿಗಳ ಮನಃ…