ಸುರಪುರ: ಅಭಿಮಾನಿಗಳಿಂದ ಬಿ.ವೈ ವಿಜಯೇಂದ್ರ ಜನ್ಮ ದಿನಾಚರಣೆ

0
14

ಸುರಪುರ: ನಗರದಲ್ಲಿ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರ ಜನ್ಮ ದಿನಾಚರಣೆಯನ್ನು ಅಭಿಮಾನಿಗಳು ವಿಶೇಷವಾಗಿ ಆಚರಿಸಿದ್ದಾರೆ.ನಗರದ ಶ್ರೀವೇಣುಗೋಪಾಲ ಸ್ವಾಮಿ ದೇವಸ್ಥಾನ ಹಾಗೂ ವೀರಶೈವ ಕಲ್ಯಾಣ ಮಂಟಪದ ಆವರಣದಲ್ಲಿರುವ ಶ್ರೀ ಬನಶಂಕರಿ ದೇವಿ ದೇವಸ್ಥಾನದಲ್ಲಿ ವಿಶೇಷ ಪೂಜೆ ನಡೆಸಲಾಗಿದೆ.ನಂತರ ನಗರದ ತಾಲೂಕು ಆಸ್ಪತ್ರೆಯಲ್ಲಿನ ಎಲ್ಲಾ ರೋಗಿಗಳಿಗೆ ಹಣ್ಣು ಹಾಲು ಬ್ರೇಡ್ ವಿತರಣೆ ಮಾಡುವ ಮೂಲಕ ಆಚರಿಸಿದರು.

ಈ ಸಂದರ್ಭದಲ್ಲಿ ಮುಖಂಡರಾದ ಚಂದ್ರಶೇಖರ ಗೋಗಿ,ಮಂಜುನಾಥ ಜಾಲಹಳ್ಳಿ,ಶರಣು ಹಸನಾಪುರ,ಸೂಗು ಸಜ್ಜನ್ (ಮೋದಿ),ರಮೇಶ ಗುತ್ತೇದಾರ,ಜಗದೀಶ ಪಾಟೀಲ್,ಪ್ರದೇಪ ಕದರಾಪುರ,ಶಿವರುದ್ರ ಉಳ್ಳಿ,ಮಲ್ಲು ಹೂಗಾರ,ಸಿದ್ದನಗೌಡ ಹೆಬ್ಬಾಳ ಸೇರಿದಂತೆ ಅನೇಕರು ಭಾಗವಹಿಸಿದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here