ಬಿಸಿ ಬಿಸಿ ಸುದ್ದಿ

ಆಳಂದ: 9ಕ್ಕೆ ಎನ್‍ಎಸ್‍ಎಲ್‍ಗೆ ಪ್ರತಿಭಟನೆ ಬಿಸಿ

ಜಿಲ್ಲಾಧಿಕಾರಿಗಳು ಮಂಗಳವಾರ ಕರೆದ ಸಭೆಯಲ್ಲಿ ರೈತರಿಗೆ 2500 ರೂಪಾಯಿ ಪ್ರತಿಟನ್ ಕಬ್ಬಿಗೆ ಬೆಲೆ ನೀಡದೇ ಹೋದಲ್ಲಿ ನ. 9ರಂದು ನಾಲ್ಕೈದು ಸಾವಿರ ರೈತರೊಂದಿಗೆ ಸೇರಿ ಎನ್‍ಎಸ್‍ಎಲ್ ಕಾರ್ಖಾನೆಗೆ ಮುತ್ತಿಗೆ ಹಾಕಿ ಕಾರ್ಖಾನೆಯ ಎಲ್ಲಾ ಚಟುವಟಿಕೆಗಳನ್ನು ಸ್ಥಗಿತಗೊಳಿಸಲು ಪ್ರತಿಭಟಿಸಲಾಗುವುದು.- ಸುಭಾಷ ಗುತ್ತೇದಾರ ಶಾಸಕರು ಆಳಂದ.

ಆಳಂದ: ಪ್ರತಿಟನ್ ಕಬ್ಬಿಗೆ 2500 ರೂಪಾಯಿ ಬೆಲೆ ನೀಡಲು ಒಪ್ಪದೇ ಹೋದರೆ ಮಂಗಳವಾರದಿಂದ ಸಂಪೂರ್ಣವಾಗಿ ಕಾರ್ಖಾನೆಯಲ್ಲಿ ಯಾವುದೇ ಕಾರ್ಯ ಚಟುವಟಿಕೆ ಕೈಗೊಳ್ಳಬಾರದು ಎಂದು ಶಾಸಕ ಸುಭಾಷ ಗುತ್ತೇದಾರ ಅವರು ಎನ್‍ಎಸ್‍ಎಲ್ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿಗೆ ಖಡಕ್ಕಾಗಿ ಸೂಚನೆ ನೀಡಿದ್ದಾರೆ.

ನೆರೆಯ ಅಫಜಲಪೂರದ ರೇಣಕಾ ಸಕ್ಕರೆ ಕಾರ್ಖಾನೆ ನೀಡುವ ದರವನ್ನು ಇಲ್ಲಿಯೂ ನೀಡುವಂತೆ ತಾಲೂಕಿನ ಭೂಸನೂರ ಬಳಿಯ ಎನ್‍ಎಸ್‍ಎಲ್ ಸಕ್ಕರೆ ಕಾರ್ಖಾನೆಯ ಮುಂದೆ ರೈತರು ಆರಂಭಿಸಿದ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಸ್ಥಳಕ್ಕೆ ಸೋಮವಾರ ಸಂಜೆ ಭೇಟಿ ನೀಡಿದ ಅವರು ಹಾಜರಿದ್ದ ಕಾರ್ಖಾನೆ ಉಪಾಧ್ಯಕ್ಷ ದೇವರಾಜಲು ಅವರಿಗೆ ಸೂಚನೆ ನೀಡಿದರು.

ಜಿಲ್ಲಾಧಿಕಾರಿಗಳ ಕರೆದ ಸಭೆಯ ನಿರ್ಣಯವರೆಗೂ ಕಾರ್ಖಾನೆ ನಡೆಸಕೊಡದು. ರೇಣುಕಾ ಶುಗರ್ಸನವರು 2500ರಿಂದ 2600 ರೂಪಾಯಿ ವರೆಗೆ ಪ್ರತಿಟನ್ ಕಬ್ಬಿಗೆ ನೀಡುತ್ತಿದ್ದು, ಎನ್‍ಎಸ್‍ಎಲ್ ಕಾರ್ಖಾನೆಯುವರು ಸಹ ಇವರ ದರವನ್ನೇ ಪ್ರತಿವರ್ಷ ಅನುಸರಿಸುತ್ತಾ ಬಂದು ಈ ವರ್ಷವೂ ಅವರನ್ನು ಅನುಸರಿಸದೆ, 2400 ರೂಪಾಯಿ ಮಾತ್ರ ನೀಡುವ ಹೇಳಿಕೆಗೆ ಕೊಡುವುದು ಸರಿಯಲ್ಲ. ಜಿಲ್ಲಾಧಿಕಾರಿಗಳ ಆದೇಶದಂತೆ ಎನ್‍ಎಸ್‍ಎಲ್ 2500 ರೂಪಾಯಿ ಬೆಲೆ ನಿಗದಿಪಡಿಸಿದರೆ ಕಾರ್ಖಾನೆ ಆರಂಭಕ್ಕೆ ಯಾವುದೇ ತಕರಾರಿಲ್ಲ ಎಂದು ಅವರು ಹೇಳಿದರು.

ಕಬ್ಬು ಸಾಗಾಣೆಯ ವಾಹನಗಳ ಕಳೆದ ಸಾಲಿನಲ್ಲಿ 252 ರೂಪಾಯಿ ಪ್ರತಿಟನ್‍ಗೆ ದರ ನೀಡುವ ಬದಲು ಈ ಬಾರಿ 202 ರೂಪಾಯಿ ಮಾತ್ರ ಇದು ಸಹ 30 ಕಿ.ಮೀ ಸಾರಿಗೆ ಬದಲು 20 ಕಿ.ಮೀ ಕೊಡುವುದಾಗಿ ಹೇಳುತ್ತಿದ್ದಾರೆ. ಸರಿಯಲ್ಲ. ಮೊದಲಿನ 252 ರೂಪಾಯಿ ಹೆಚ್ಚಿಸುವುದು ಮತ್ತು ಪ್ರತಿಟನ್ ಕಬ್ಬಿಗೆ 2500 ರೂಪಾಯಿ ಬೆಲೆ ಘೋಷಿಸಿ ಕಾರ್ಖಾನೆ ಆರಂಭಿಸಿ ಇಲ್ಲ ನಾಳೆಯಿಂದಲೇ ಯಾಅವುದೇ ಚಟುವಟಿಕೆ ನಡೆಯದಂತೆ ತಡೆಹಿಡಿಯರಿ ಎಂದು ಹೇಳಿದರು.

ಕಾರ್ಖಾನೆ ಉಪಾಧ್ಯಕ್ಷ ದೇವರಾಜಲು ಅವರು ರೈತರ ಬೇಡಿಕೆಯ ಕುರಿತು ಆಡಳಿತ ಮಂಡಳಿಯ ಗಮನಕ್ಕೆ ತರಲಾಗುವುದು ಎಂದಾಗ ರೈತ ಮುಖಂಡರು ಆಕ್ರೋಶಗೊಂಡು ಕಾರ್ಖಾನೆಯಲ್ಲಿ ನೌಕರರಿಂದ ಯಾವುದೇ ನಡೆದರೆ ಒಳಹೊಕ್ಕು ಉಗ್ರಹೋರಾಟ ಮಾಡಲಾಗುವುದು ಬೇಡಿಕಗೆ ಸ್ಪಂದಿಸಿದರೆ ಮಾತ್ರ ಕಾರ್ಖಾನೆ ನಡೆಸಿ ಇಲ್ಲ ಮುಚ್ಚಿಬಿಡಿ ಎಂದು ಗಡಿಗಿದರು.

ರೈತರ ಎದುರು ಹಾಕಿಕೊಂಡರೆ ತಕ್ಕಶಾಸ್ತಿ: ಈ ಮೊದಲು ಮುಖಂಡ ಅಶೋಕ ಗುತ್ತೇದಾರ ಅವರು, ಕಾರ್ಖಾನೆ ಅಧಿಕಾರಿಗಳ ಮೇಲೆ ಹರಿಹಾಯ್ದ ಅವರು, ರೈತರ ಸಂಕಷ್ಟ ಕೇಳುವ ಸೌಜನ್ಯವೂ ಇಲ್ಲದ ಆಡಳಿತ ಮಂಡಳಿಯ ಉಪಾಧ್ಯಕ್ಷರ, ಅಧಿಕಾರಿಗಳ ವಿರುದ್ಧ ಆಕ್ರೋಶವ್ಯಕ್ತಪಡಿಸಿದರು.

ರೈತರ ಎದುರು ಹಾಕಿಕೊಂಡ ಕೃಷಿಂಗ ಮಾಡಿ ಕಾರ್ಖಾನೆ ನಡೆಸುವ ತಾಕ್ಕತ್ತಿದಿಯಾ ಅದು ಹೇಗೆ ನಡೆಸುತ್ತಿರೇ ನೋಡುತ್ತೇವೆ ಗುಡಗಿದರು.

ಮನೆಯ ಹೆಂಡತಿಯ ತಾಳಿಮಾರಿ ಕಬ್ಬು ಬೆಳೆದು ಕಾರ್ಖಾನೆಗೆ ಕೊಡುತ್ತಿದ್ದೇವೆ. ಸಹಕಾರಿ ರಂಗದ ಕಾರ್ಖಾನೆ ಗುತ್ತಿಗೆ ಪಡೆದು 11 ವರ್ಷವಾಗಿದೆ. ನಿಯಮದಂತೆ ಯಾವುದು ಅನುಸರಿಸಿಲ್ಲ. ಕಬ್ಬು ಕೊಟ್ಟವರಿಗೆ ಸಮಯಕ್ಕೆ ಹಣ ಪಾವತಿಸಿಲ್ಲ. ಜಿಲ್ಲಾಡಳಿತ ಆದೇಶ ಎಲ್ಲಿ ಪಾಲಿಸಿದ್ದಾರೆ. ಹೈಕೋರ್ಟ್ ಆದೇಶವು ಪಾಲಿಸಿಲ್ಲ. ರೈತರನ್ನು ಮೋಸಮಾಡುತ್ತಿದ್ದಾರೆ. ರೈತರನ್ನು ಒಡಕುಮಾಡಿ ಜಗಳ ಹಚ್ಚುವ ಕೆಲಸಮಾಡುತ್ತೀರಿ ಎಂದು ಏರುಧ್ವನಿಯಲ್ಲಿ ಕಾರ್ಖಾನೆಯವರನ್ನು ತರಾಟೆಗೆ ತೆಗೆದುಕೊಂಡರು.

ಅವರು, ರೇಣುಕಾ ಶುಗರ್ಸ್ ಕೊಟ್ಟ ಬೆಲೆ ನೀಡಿದರೆ ಮಾತ್ರ ಕಾರ್ಖಾನೆ ನಡೆಸಿ. ಇಲ್ಲವಾದಲ್ಲಿ ನಮ್ಮ ಜೀವ ಹೋದರು ಸರಿ ಕಾರ್ಖಾನೆ ನಡೆಯಲು ಬಿಡುವುದಿಲ್ಲ ಎಂದು ಅವರು ಗುಡಗಿದರು. ಈ ವೇಳೆ ಶಾಸಕರು ಆಗಮಿಸಿದಾಗ ಪರಸ್ಥಿತಿ ಶಾಂತವಾಯಿತು.

ರೈತ ಧನು ಜಾಧವ ಅವರು ಬೆಲೆ ನಿಗದಿಪಡಿಸದೇ ಕಬ್ಬು ಕಟಾವು ಮಾಡಿ ಎಂದು ಕಟಾವು ಮಾಡಿದ್ದಾರೆ. ಈಗ ಕಟಾವಾದ ಕಬ್ಬಿನ ಹಾನಿ ಕಾರ್ಖಾನೆಯವರು ಕೊಡಬೇಕು. ಕಡಿದ ಕಬ್ಬು ತೂಕಮಾಡಿಟ್ಟು ಉಳಿದವರಿಗೆ ಕಡಿಬೇಡಿ ಎಂದು ಹೇಳುತ್ತೇವೆ. ಮೊದಲು ಕಬ್ಬಿಗೆ 2500 ರೂಪಾಯಿ ಕೊಡಬೇಕು ಎಂದರು.

ಈ ಮೊದಲು ಗ್ರಾಮೀಣ ಮತಕ್ಷೇತ್ರ ಶಾಸಕ ಬಸವರಾಜ ಮತ್ತಿಮುಡ್ ಭೇಟಿ ನೀಡಿ ಬೇಡಿಕೆ ಚರ್ಚಿಸಿದರು. ಸ್ಥಳಕ್ಕೆ ಆಗಮಿಸಿದ್ದ ಆಹಾರ ಇಲಾಖೆಯ ಕಲಬುರಗಿ ಉಪನಿರ್ದೇಶಕ ಶಾಂತಗೌಡ ಗೊಳಕಿ ಭೇಟಿ ನೀಡಿ ರೈತರ ಬೇಡಿಕೆ ಆಲಿಸಿ ಚರ್ಚಿಸಿದರು.

ಮುಖಂಡ ಚಂದ್ರಶೇಖರ ಸಾಹು, ರಾಜಶೇಖರ ಮಲಶೆಟ್ಟಿ, ಕಲ್ಯಾಣಿ ಜಮಾದಾರ, ವೀರಣ್ಣಾ ಮಂಗಾಣೆ, ಅಶೋಕ ಪಾಟೀಲ, ಶರಣಪ್ಪ ಮಲಶೆಟ್ಟಿ, ಸಹಕಾರಿ ಸಕ್ಕರೆ ಕಾರ್ಖಾನೆ ನಿರ್ದೇಶಕ ಶಂಕರ ಸೋಮಾರ, ಶಂಕರ ಎಸ್. ಮದಗುಣಕಿ, ಶಾಂತಪ್ಪ ಮೈನಾಳ, ಬಸವರಾಜ ಮಲಶೆಟ್ಟಿ, ದಿಲೀಪ ಕೋಥಲಿ ಸೇರಿದಂತೆ ನೂರಾರು ರೈತರು ಮತ್ತು ಕಬ್ಬು ಸಾಗಾಣೆಯ ವಾಹನ ಮಾಲೀಕರು ಇದ್ದರು.

emedialine

Recent Posts

ನಿಧನ ವಾರ್ತೆ; ಆನಂದಪ್ಪ ಉಮ್ಮನಗೋಳ್

ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…

1 hour ago

ಸಂಘಸಂಸ್ಥೆಗಳು ಸಮಾಜಕ್ಕೆ ನೀಡಿದ ಕೋಡುಗೆ ಅಪಾರ ಪಾಳಾಶ್ರೀ

ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…

1 hour ago

ಹೊಸ ಹೊಸ ಉದ್ಯೋಗ ಸೃಷ್ಟಿಸಲು HKE ಸಂಸ್ಥೆ ಕಾರ್ಯ ಶ್ಲಾಘನೀಯ

ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…

2 hours ago

ಸ್ವಾಭಿಮಾನದ ಬದುಕಿಗೆ ಸಂಗೀತ ಪೂರಕ

ಕಲಬುರಗಿ : ಒತ್ತಡದ ಬದುಕಿನಲ್ಲಿ ಸಂಗೀತ ಆಲಿಸುವುದರಿಂದ ಮಾನಸಿಕ ನೆಮ್ಮದಿ, ಶಾಂತಿ ದೊರೆಯಲು ಸಾಧ್ಯವಿದೆ. ಅನೇಕ ಜನ ಸಂಗೀತ ಕಲಾವಿದರಿಂದು…

2 hours ago

ಅಲ್ಪಸುಖಕ್ಕಾಗಿ ಯುವ ಜನತೆ ಮಾದಕ ಪದಾರ್ಥಗಳಿಗೆ ದಾಸರಾಗಬೇಡಿ

ಕಲಬುರಗಿ; ಅಲ್ಪಸುಖಕ್ಕಾಗಿ ಯುವ ಜನತೆ ಮಾದಕ ಪದಾರ್ಥಗಳಿಗೆ ದಾಸರಾಗಿ ತಮ್ಮ ಜೀವನ ಹಾಳು ಮಾಡಿಕೊಳ್ಳಬಾರದು ಎಂದು ಜಿಲ್ಲಾ ತಂಬಾಕು ನಿಯಂತ್ರಣ…

2 hours ago

ಸೇಡಂ: `ಅಮ್ಮ ಪ್ರಶಸ್ತಿ’ ಪ್ರದಾನ ಸಮಾರಂಭ ನಾಳೆ

ಸೇಡಂ (ಕಲಬುರಗಿ);  ಜಿಲ್ಲೆಯ ಸೇಡಂನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನ ಕೊಡಮಾಡುವ `ಅಮ್ಮ ಪ್ರಶಸ್ತಿ’ 24ನೇ ವರ್ಷದ ಸಮಾರಂಭವು…

2 hours ago