ಕಲಬುರಗಿ: ಸರಕಾರಿ ಸಾರ್ವಜನಿಕ ಆಸ್ಪತ್ರೆ ಕಾಳಗಿಯಲ್ಲಿ ನಡೆದ ಕರ್ನಾಟಕ ಸರ್ಕಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಗೋಪಾಲದೇವ ಜಾಧವ ಮೆಮೋರಿಬಲ್ ಟ್ರಸ್ಟ ಮತ್ತು ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ವತಿಯಿಂದ ಹಮ್ಮಿಕೊಂಡ “ವಿಕಲಚೇತನ ಮೌಲ್ಯಮಾಪನ ಕಾರ್ಯಕ್ರಮ”ವನ್ನು ಹೂವಿನ ಗಿಡಕ್ಕೆ ನೀರನ್ನು ಹಾಕುವ ಮೂಲಕ ಆರಂಭಿಸಲಾಯಿತು.
ನಂತರ ಮಾತನಾಡಿದ ಡಾ.ಅಮರೇಶ ಹಳ್ಳದ್ ಆಡಳಿತ ವೈದ್ಯಧಿಕಾರಿಗಳು ಕಾಳಗಿಯ 21 ವಿಧಗಳ ವಿಕಲಚೇತರಿಗೆ ಸಾಧನ ಸಲಕರಣೆಗಳು ಮೌಲ್ಯಮಾಪನ ಮಾಡಿ ವಿತರಿಸಲಾಗುವುದು ಹಾಗೂ ಇದರ ಉಪಯೋಗ ಮಾಡಿಕೊಳ್ಳುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಗೋಪಾಲದೇವ ಜಾಧವ ಮೇಮೋರಿಬಲ್ ಟ್ರಸ್ಟ ಕಾರ್ಯದರ್ಶಿಗಳಾದ ಡಾ.ಅಬ್ದುಲ ಮುನೀರ, ಜಿಲ್ಲಾ ಹಾಗೂ ತಾಲೂಕ ವೈಧ್ಯಾಧಿಕಾರಿಗಳು, ತಾಲೂಕ ಮಟ್ಟದ ಅಧಿಕಾರಿಗಳು, ಆರೋಗ್ಯ ಸಮಿತಿ ಸದಸ್ಯರು, ಪ್ರಮುಖ ಮುಖಂಡರು ಉಪಸ್ಥಿತರಿದ್ದರು.