ಸುರಪುರ: ನಗರದ ಬಸ್ ನಿಲ್ದಾಣದ ಬಳಿಯಲ್ಲಿನ ಡಾ:ಬಾಬಾ ಸಾಹೇಬ್ ಅಂಬೇಡ್ಕರ್ ಪುತ್ಥಳಿ ಬಳಿಯಲ್ಲಿನ ಮಂಗಳವಾರ ರಾತ್ರಿ ಮಹಾ ಪರಿನಿರ್ವಾಣ ದಿನವನ್ನು ಆಚರಿಸಲಾಗಿದೆ.
ವಿವಿಧ ದಲಿತ ಸಂಘಟನೆಗಳ ಮುಖಂಡರು ಹಾಗೂ ಕಾಂಗ್ರೆಸ್ ಮುಖಂಡರಾದ ರಾಜಾ ವೇಣುಗೊಪಾಲ ನಾಯಕ,ಯೂತ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ರಾಜಾ ಕುಮಾರ ನಾಯಕ ಭಾಗವಹಿಸಿದ್ದರು.ಕಾರ್ಯಕ್ರಮದ ಆರಂಭದಲ್ಲಿ ಡಾ:ಬಿ.ಆರ್ ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿ,ನಂತರ ಮೇಣದ ಬತ್ತಿಯನ್ನು ಬೆಳಗಿ ಎರಡು ನಿಮಿಷಗಳ ಮೌನಾಚರಣೆ ಮಾಡಿ ಅಂಬೇಡ್ಕರರಿಗೆ ಗೌರವ ನಮನ ಸಲ್ಲಿಸಿದರು.
ನಂತರ ಅನೇಕ ಮುಖಂಡರು ಮಾತನಾಡಿ,ಡಾ:ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಈ ಜಗತ್ತು ಕಂಡ ಮಹಾನ್ ಜ್ಞಾನಿಯಾಗಿದ್ದಾರೆ.ಅವರು ಬರೆದುಕೊಟ್ಟ ಸಂವಿಧಾನ ಜಗತ್ತಿಗೆ ಮಾದರಿಯಾಗಿದೆ.ಅಲ್ಲದೆ ಈ ದೇಶದಲ್ಲಿನ ದೀನ ದಲಿತ ಶೋಷಿತರಿಗೆ ಅಲ್ಪಸಂಖ್ಯಾತ ಹಿಂದುಳಿದವರಿಗೆ ಅನೇಕ ಏಳಿಗೆಗೆ ಕಾನೂನುಗಳನ್ನು ರೂಪಿಸಿಕೊಟ್ಟ ಪುಣ್ಯ ಪುರುಷರಾಗಿದ್ದಾರೆ.ಅವರು ಬದುಕಿನುದ್ದಕ್ಕೂ ನೋವು ಪಟ್ಟು ನಮ್ಮನ್ನು ಉದ್ಧರಿಸಿದರು.
ಅವರ ಜೀವಿತದ ಕೊನೆಯ ದಿನಗಳ ವರೆಗೂ ಬರವಣಿಗೆಯಲ್ಲಿ ಕಳೆದವರು,ಅಂತಹ ಮಹಾನ್ ಪುರುಷನು 1956 ಡಿಸೆಂಬರ್ 6 ರಂದು ಕೊನೆಯುಸಿರೆಳೆದಾಗ ಅವರ ಪಾರ್ಥಿವ ಶರೀರವನ್ನು ಮುಂಬಯಿಗೆ ತರಲು ಅಂದಿನ ಸರಕಾರ ಒಂದು ವಿಮಾನವನ್ನು ಕಲ್ಪಿಸಿರಲಿಲ್ಲ, ಅಂಬೇಡ್ಕರರ ಆಪ್ತ ಸಹಾಯಕನಾಗಿದ್ದ ನಾನಕ್ ಚಂದ್ ರತ್ತು ಅವರು ತಮ್ಮ ಕಾರನ್ನು ಮಾರಾಟ ಮಾಡಿ ಪಾರ್ಥಿವ ಶರೀರ ತಂದ ವಿಮಾನದ ಬಾಡಿಗೆಯನ್ನು ನೀಡಿದ್ದಾರೆ ಎಂದು ನೋವಿನಿಂದ ನುಡಿದರು.ಅಲ್ಲದೆ ಇಂದು ನಾವೆಲ್ಲರು ನೆಮ್ಮದಿಯಿಂದ ಜೀವಿಸುತ್ತಿದ್ದೇವೆ ಎಂದರೆ ಅದು ಅಂಬೇಡ್ಕರರು ನಮಗೆ ನೀಡಿದ ಭಿಕ್ಷೆ ಎಂದು ಮಾರ್ಮಿಕವಾಗಿ ನುಡಿದರು.
ಈ ಸಂದರ್ಭದಲ್ಲಿ ವಿವಿಧ ಸಂಘಟನೆಗಳ ಮುಖಂಡರಾದ ನಗರಸಭೆ ಸದಸ್ಯ ಶಿವಕುಮಾರ ಕಟ್ಟಿಮನಿ,ಮಹ್ಮದ್ ಗೌಸ್ ಕಿಣ್ಣಿ, ವೆಂಕಟೇಶ ಸುರಪುರ,ರಾಹುಲ್ ಹುಲಿಮನಿ,ರಾಜು ಕಟ್ಟಿಮನಿ,ವೈಜನಾಥ ಹೊಸ್ಮನಿ,ಎಮ್.ಪಟೇಲ್,ದಾವೂದ್ ಇಬ್ರಾಹಿಂ ಪಠಾಣ್,ಖಾಜಾ ಅಜ್ಮೀರ್ ಸೇರಿದಂತೆ ಅನೇಕರಿದ್ದರು.
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…