ಸುರಪುರ: ಕನ್ನಡ ಸಾಹಿತ್ಯ ಪರಿಷತ್ ಕೇಂದ್ರ ಸಮಿತಿಯು ಹಾವೇರಿಯಲ್ಲಿ ನಡೆಯಲಿರುವ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ನಾಡಿನಾದ್ಯಂತ ಸಂಚರಿಸಲಿರುವ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಭುವನಗಿರಿಯಿಂದ ಆರಂಭಿಸಿರುವ ಕನ್ನಡ ಭುವನೇಶ್ವರಿ ಜ್ಯೋತಿ ರಥ ಯಾತ್ರೆಯ ಜಾಥಾ ಬುಧವಾರ ನಗರಕ್ಕೆ ಆಗಮಿಸಿತು.
ನಗರದ ವೀರಪ್ಪ ನಿಷ್ಠಿ ತಾಂತ್ರಿಕ ಮಹಾವಿದ್ಯಾಲಯ ಬಳಿಯಲ್ಲಿನ ಮುಖ್ಯ ಹೆದ್ದಾರಿಯಲ್ಲಿ ಯಾತ್ರೆಗೆ ಸ್ವಾಗತಿ ಮಾಡಿಕೊಳ್ಳಲಾಯಿತು.ರಥದಲ್ಲಿ ಪ್ರತಿಷ್ಠಾಪಿಸಲಾಗಿದ್ದ ಕನ್ನಡ ಭುವನೇಶ್ವರಿ ಮೂರ್ತಿಗೆ ನಗರಸಭೆ ಅಧ್ಯಕ್ಷೆ ಸುಜಾತಾ ವೇಣುಗೋಪಾಲ ನಾಯಕ ಜೇವರ್ಗಿ ಮಾಲಾರ್ಪಣೆ ಮಾಡುವ ಮೂಲಕ ಬರಮಾಡಿಕೊಂಡರು. ನಂತರ ರಥ ಯಾತ್ರೆ ನಾಲ್ವಡಿ ರಾಜಾ ವೆಂಕಟಪ್ಪ ನಾಯಕ ವೃತ್ತದ ಮಾರ್ಗವಾಗಿ ನಗರಸ ಮಹಾತ್ಮ ಗಾಂಧಿ ವೃತ್ತ,ತಹಸೀಲ್ ರಸ್ತೆ ಮಾರ್ಗವಾಗಿ ಹಳೆ ಬಸ್ ನಿಲ್ದಾಣದ ನಂತರ ಕುಂಬಾರಪೇಟ ವೃತ್ತ ಮಾರ್ಗವಾಗಿ ಲಿಂಗಸೂಗುರಿಗೆ ಪ್ರಯಾಣ ನಡೆಸಲಾಯಿತು.
ಈ ಸಂದರ್ಭದಲ್ಲಿ ತಹಸೀಲ್ದಾರ್ ಸುಬ್ಬಣ್ಣ ಜಮಖಂಡಿ,ಕಸಾಪ ಜಿಲ್ಲಾಧ್ಯಕ್ಷ ಸುದ್ದಪ್ಪ ಹೊಟ್ಟಿ, ತಾಲೂಕು ಅಧ್ಯಕ್ಷ ಶರಣಬಸಪ್ಪ ಯಾಳವಾರ,ಡಿವೈಎಸ್ಪಿ ಮಂಜುನಾಥ ಟಿ.ಪಿಐ ಆನಂದ ಮಾಘಮೊಡೆ,ಬಿಇಓ ಮಹೇಶ ಪೂಜಾರಿ,ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಮೌನೇಶ ಕಂಬಾರ,ವೀರಪ್ಪ ನಿಷ್ಠಿ ಇಂಜಿನಿಯರಿಂಗ್ ಕಾಲೇಜ್ ಪ್ರಾಂಶುಪಾಲ ಶರಣಬಸಪ್ಪ ಸಾಲಿ,ಮುಖಂಡರಾದ ವೇಣುಗೋಪಾಲ ನಾಯಕ ಜೇವರ್ಗಿ,ಬಸವರಾಜ ಜಮದ್ರಖಾನಿ,ಪ್ರಕಾಶ ಅಂಗಡಿ ಕನ್ನೆಳ್ಳಿ,ಉಸ್ತಾದ ವಜಾಹತ್ ಹುಸೇನ್,ಸಿ.ಎನ್.ಭಂಡಾರೆ,ಬಸವರಾಜ ಕೊಡೆಕಲ್,ಸೋಮರಡ್ಡಿ ಮಂಗಿಹಾಳ,ರಾಘವೇಂದ್ರ ಭಕ್ರಿ,ಮಲ್ಲು ಬಾದ್ಯಾಪುರ,ಮೋನಪ್ಪ ಶಿರವಾಳ ಸೇರಿದಂತೆ ಅನೇಕರಿದ್ದರು.