ಕಲಬುರಗಿ: ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಬುಧವಾರ ರೈತರು ಬಿಸಾಕಿ ಹೋಗಿದ್ದ ತೊಗರಿ ಗಿಡಗಳನ್ನು ಎತ್ತಿಕೊಂಡು ಹೋಗುತ್ತಿರುವ ಇನ್‍ಸ್ಪೆಕ್ಟರ್ ಪಂಡಿತ ಸಗರ.
ಪ್ರತಿಭಟನೆ ನಡೆಸಿದ ರೈತರು ನಗರದ ಜಿಲ್ಲಾಧಿಕಾರಿಗಳ ಕಚೇರಿಯ ಮೆಟ್ಟಿಲುಗಳ ಮೇಲೆ ಬಿಸಾಕಿ ಹೋಗಿದ್ದ ಒಣಗಿದ ತೊಗರಿ ಗಿಡಗಳ ಹೊರೆಗಳನ್ನು ಪೆÇಲೀಸ್ ಇನ್ಸ್‍ಪೆಕ್ಟರ್ ಎತ್ತಿ ಹೊರಗಡೆ ಹಾಕಿ, ಕಸಗೂಡಿಸಿ ಆವರಣ ಸ್ವಚ್ಛಗೊಳಿಸಿದ ಘಟನೆ ಬುಧವಾರ ನಗರದಲ್ಲಿ ನಡೆದಿದೆ. ಈ ಕೆಲಸ ಜನರ ಮೆಚ್ಚುಗೆಗೆ ಪಾತ್ರವಾಗಿದೆ.
ನೆಟೆ ರೋಗದಿಂದ ಹಾಳಾಗಿರುವ ತೊಗರಿಗೆ ಪರಿಹಾರ ನೀಡುಂತೆ ಕಾಂಗ್ರೆಸ್ ಪಕ್ಷದ ನೇತೃತ್ವದಲ್ಲಿ ರೈತರು ಬೃಹತ್ ಪ್ರತಿಭಟನೆ ನಡೆಸಿದ್ದರು. ಈ ವೇಳೆಯಲ್ಲಿ ಪ್ರತಿಭಟನಾಕಾರು ತಂದಿದ್ದ ಒಣಗಿದ ತೊಗರಿ ಗಿಡಗಳು ಹೊರೆಗಳನ್ನು ಡಿಸಿ ಕಚೇರಿಯ ಮೆಟ್ಟಿಲುಗಳ ಮೇಲೆ ಮತ್ತು ಡಿಸಿ ಕಚೇರಿ ಆವರಣದಲ್ಲಿ ಬಿಸಾಕಿ ಹೋಗಿದ್ದರು.
ಪ್ರತಿಭಟನಾಕಾರರೆಲ್ಲರು ಅಲ್ಲಿಂದ ಹೋದ ಮೇಲೆ ಅಲ್ಲಿಯೇ ಬಿದಿದ್ದ ಒಣಗಿದ ತೊಗರಿ ಹೊರೆಗಳನ್ನು ನೋಡಿದ ಅಶೋಕ ನಗರ ಪೆÇಲೀಸ್ ಠಾಣೆಯ ಇನ್‍ಸ್ಪೆಕ್ಟರ್ ಪಂಡಿತ ಸಗರ ಅವರು ಹೊರೆಗಳನ್ನು ಮೇಟ್ಟಿಲು ಮೇಲಿಂದ ಹೊತ್ತುಕೊಂಡು ಬಂದು ಅವನ್ನು ಹೊರಗಡೆ ಹಾಕಿದರು. ಬಳಿಕ ಅದೇ ತೊಗರಿ ಗಿಡಗಳನ್ನು ಪೆÇರಕೆಯನ್ನಾಗಿಸಿಕೊಂಡು ಮೆಟ್ಟಿಲು ಮೇಲೆ ಬಿದ್ದಿದ್ದ ಕಸ ಮತ್ತು ಮುಂಭಾಗದಲ್ಲಿ ಬಿದ್ದ ಒಣಗಿದ ತಪ್ಪು ಗುಡುಸಿ ಸ್ಚಚ್ಛಗೊಳಿಸಿ ಕಳಕಳಿ ಮೆರೆದರು. ಖಾಕಿ ಡ್ರೇಸ್ ಮೇಲಿದ್ದರೂ ಸಹ ಹಿಂಜರಿಯದೆ ಇಂತಹ ಮಾದರಿ ಕೆಲಸ ಮಾಡುವ ಮೂಲಕ ಆದರ್ಶಕ್ಕೆ ಮೇಲ್ಪಂಕ್ತಿಯಾದರು.
ಆವರಣದಲ್ಲಿ ಬಿದ್ದ ತೊಗರಿ ಗಿಡಗಳ ಹೊರೆಗಳನ್ನು ಪೆÇಲೀಸ್ ಇನ್‍ಸ್ಪೆಕ್ಟರ್ ಪಂಡಿತ ಸಗರ್ ಅವರು ಹೊತ್ತುಕೊಂಡು ಹೋಗಲು ಆರಂಭಿಸುತ್ತಿದ್ದಂತೆ ಬಂದೋಬಸ್ತ್‍ಗೆ ಬಂದಿದ್ದ ಸಿಬ್ಭಂದಿ ಸಹ ಉಳಿದ ಹೊರೆಗಳನ್ನು ಎತ್ತಿ ಹೊರಗೆ ತೆಗೆದುಕೊಂಡು ಹೋಗಿ ಕಸದ ತ್ಯಾಜ್ಯ ಘಟಕದಲ್ಲಿ ಹಾಕಲು ಆರಂಭಿಸಿದಾಗ ಸಾರ್ವಜನಿಕರು ಕೈಜೋಡಿಸಿದರು. ಪೆÇಲೀಸ್ ಇನ್‍ಸ್ಪೆಕ್ಟರ್ ಪಂಡಿತ ಸಗರ ಸ್ವಚ್ಛತಾ ಕಾರ್ಯಕ್ಕೆ ಸಾರ್ವಜನಿಕರಿಂದ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಅವರು ಹೊರೆ ಎತ್ತಿ ಸಾಗಿಸುವುದು ಕಸಗೂಡಿಸುವ ವೀಡಿಯೋ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದೆ.
ಕಲಬುರಗಿ: ವಕ್ಫ್ ಬೋರ್ಡ್ ವಿರುದ್ಧ ಹೋರಾಟ ಮಾಡುತ್ತಿರುವ ಯತ್ನಾಳ ಟೀಮ್ ಗೆ ಬೆಂಬಲವಿಲ್ಲ ಭಾರತೀಯ ಜನತಾ ಪಕ್ಷದ ಯುವ ಮುಖಂಡ…
ಕಲಬುರಗಿ: ನ.25- ಕೇಂದ್ರ ಸರ್ಕಾರ ವಕ್ಫ್ ತಿದ್ದುಪಡಿ ಮಸೂದೆ-2024 ಜಾರಿಗೆ ತರಲು ಮುಂದಾಗಿದ್ದನ್ನು ಆಲ್ ಇಂಡಿಯಾ ಮುಸ್ಲೀಮ ವೈಯಕ್ತಿಕ ಕಾನೂನು…
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…