ಅಪ್ಪಾ ಪಬ್ಲಿಕ್ ಶಾಲೆಯಲ್ಲಿ ಎರಡು ದಿನದ ಅಂತರ-ಶಾಲೆ ಸ್ಪೆಲ್ಲಿಂಗ್ ಬೀ ಹಬ್ಬ

0
152

ಕಲಬುರಗಿ: ಅಪ್ಪಾ ಪಬ್ಲಿಕ್ ಶಾಲೆಯಲ್ಲಿ ಎರಡು ದಿನದ ಅಂತರ-ಶಾಲೆ ಸ್ಪೆಲ್ಲಿಂಗ್  ಬೀ ಸ್ಪರ್ಧೆ 13 ಮತ್ತು 18 ರಂದು ಏರ್ಪಡಿಸಲಾಯಿತು.

ಪ್ರತಿ ಶಾಲೆಯಿಂದ ೩ ವಿದ್ಯಾರ್ಥಿಗಳಂತೆ, ಜಿಲ್ಲಾದ್ಯಂತ ೨೫ ಶಾಲೆಯನ್ನೊಳಗೊಂಡು, ೭೫ ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದರು. ಕಿರಿಯರಿಗೆ (೬ರಿಂದ – ೮ನೆಯ ತರಗತಿವರೆಗೆ) ಮತ್ತು ಹಿರಿಯರಿಗೆ (೯ ರಿಂದ – ೧೨ ನೆಯ ತರಗತಿವರೆಗೆ) ಈ ಸ್ಪರ್ಧೆಯನ್ನು ನೆಡಸಲಾಯಿತು.

Contact Your\'s Advertisement; 9902492681

ಕಿರಿಯರ ಸ್ಪರ್ಧೆಯನ್ನು ಶರಣಬಸವೇಶ್ವರ ವಸತಿ ಪದವಿ ಪೂರ್ವ ಕಾಲೇಜಿನ ಮೇಲ್ವಿಚಾರಕರಾದ ಶ್ರೀ ಶ್ರೀಶೈಲ್ ಹೊಗಾಡೆ ಇವರು ಉದ್ಘಾಟಿಸಿ ವಿದ್ಯಾರ್ಥಿಗಳಿಗೆ ಸ್ಪೆಲ್ಲಿಂಗ್ ಬೀ ಸ್ಪರ್ಧೆಯು ಆಂಗ್ಲ ಭಾಷೆಯ ಕಲಿಕೆಯಲ್ಲಿ ಮಹತ್ವದ ಪಾತ್ರ ವಹಿಸುತ್ತದೆಯೆಂದು ತಿಳಿಹೇಳಿದರು. ನಂತರ ನೆಡದ ಸ್ಪರ್ಧೆಯೆಲ್ಲಿ ಪ್ರತಿಯೋಗಿತರು ಆತ್ಮವಿಶ್ವಾಸದಿಂದ ಮತ್ತು ಬುದ್ಧಿವಂತಿಕೆಯಿಂದ ಸ್ಪೆಲ್ಲಿಂಗ್ ಹೇಳುವುದರ ಮೂಲಕ  ವೀಕ್ಷಕರ ಮೆಚ್ಚುಗೆಗೆ ಪಾತ್ರರಾದರು.

16 ಸುತ್ತುಗಳಲ್ಲಿ ನೆಡದ ಸ್ಪೆಲ್ಲಿಂಗ್ ಬೀ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಕುಮಾರ  ಸಾಯಿ ಸೂರ್ಯ (ವಿಕಾಟ್ ಡಿಏವಿ ಸ್ಕೂಲ್, ಛತ್ತ್ರಷಾಲ), ದ್ವಿತೀಯ ಸ್ಥಾನ ಕುಮಾರ ಮೊಹಮ್ಮದ್ ಫೈಜನ್ (ಚಂದ್ರಕಾಂತ್ ಪಾಟೀಲ್ ಇಂಗ್ಲಿಷ್ ಮಧ್ಯಮ ಸ್ಕೂಲ್, ಕಲಬುರಗಿ) ಮತ್ತು ತೃತೀಯ ಸ್ಥಾನ ಕುಮಾರ ಶ್ರೇಯಸ್ ಮೇತ್ರೆ (ಆರ್ಯನ್ ಪಬ್ಲಿಕ್ ಸ್ಕೂಲ್, ಕಲಬುರಗಿ) ಪಡೆದು ತಮ್ಮ ಶಾಲೆಯ ಕೀರ್ತಿಗೆ ಪಾತ್ರರಾದರು.

ಕಿರಿಯರ ವಿಭಾಗದಲ್ಲಿ ಅಪ್ಪಾ ಪಬ್ಲಿಕ್ ಶಾಲೆಯ ತಂಡ (೮ನೆಯ ತರಗತಿಯ ಕುಮಾರಿ ಕೃತಜ್ನ್ಯ ಮಲ್ಲಿ, ಕುಮಾರ ಹರ್ಷವರ್ಧನ್ ಪಾಟೀಲ್ & ೭ ನೆಯ ತರಗತಿಯ ಕುಮಾರಿ ಶ್ರಿಯಾ ಮುಧೋಳ್) ಹೆಚ್ಚಿನ ಅಂಕ ಪಡೆದು ಸಮಗ್ರ ಪ್ರಶಸ್ತಿಗೆ ಪಾತ್ರರಾದರು.

ಹಿರಿಯರ ವಿಭಾಗದ ಸ್ಪರ್ಧೆಯನ್ನು ಶರಣಬಸವ ವಿಶ್ವವಿದ್ಯಾಲಯದ ಉಪ ಕುಲಪತಿಗಳಾದ  ಡಾ. ನಿರಂಜನ್ ನಿಷ್ಠಿ (ಹೃದಯ ರೋಗ ತಜ್ಞರು) ಸ್ಪರ್ಧೆಯನ್ನು ಉದ್ಘಾಟಿಸಿ ಸ್ಪರ್ಧಾಳುಗಳಿಗೆ ಶುಭಕೋರಿದರು. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಯಶಷ್ವಿಯಾಗಲು ಸ್ಪರ್ಧಾ ಮನೋಭಾವ ಅವಶ್ಯಕವಾಗಿದೆಯೆಂದು ಅಭಿಪ್ರಾಯ ವ್ಯಕ್ತಪಡಿಸಿದರು. ಸೋಲು ಗೆಲುವು ಎರಡನ್ನು ಸಮವಾಗಿ ಸ್ವೀಕರಿಸಿ ಮುನ್ನೆಡಯಬೇಕೆಂದು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಟ್ಟರು.

13 ಸುತ್ತುಗಳಲ್ಲಿ ನೆಡದ ಹಿರಿಯರ ವಿಭಾಗದಲ್ಲಿ ಪ್ರಥಮ ಸ್ಥಾನ ಕುಮಾರಿ ಆರ್ನಾ ಪಾಟೀಲ್ (೧೦ನೆಯ ತರಗತಿ – ಅಪ್ಪ ಪಬ್ಲಿಕ್ ಶಾಲೆ, ಕಲಬುರಗಿ), ದ್ವಿತೀಯ ಸ್ಥಾನ ಕುಮಾರಿ ಅನುಷ್ಕಾ ಕಾಮಶೆಟ್ಟಿ (೧೦ನೆಯ ತರಗತಿ – ಅಪ್ಪ ಪಬ್ಲಿಕ್ ಶಾಲೆ, ಕಲಬುರಗಿ) & ತೃತೀಯ ಸ್ಥಾನ  ರಿಷಿಕಾ ಪಟ್ಟೇದಾರ್ (೧೦ನೆಯ ತರಗತಿ – ಡೋಕಾ ಜೈನ ಸ್ಕೂಲ್, ಯಾದಗಿರಿ) ವಿಜೇತರಾದರು.

ಹಿರಿಯರ ವಿಭಾಗದಲ್ಲಿ ಅಪ್ಪಾ ಪಬ್ಲಿಕ್ ಶಾಲೆಯ ತಂಡ (೧೦ನೆಯ ತರಗತಿಯ ಕುಮಾರಿ ಆರ್ನಾ ಪಾಟೀಲ್ ಮತ್ತು ಕುಮಾರಿ ಅನುಷ್ಕಾ ಕಾಮಶೆಟ್ಟಿ & ೯ ನೆಯ ತರಗತಿಯ ವೀರ ರತ್ಕಲ್) ಹೆಚ್ಚಿನ ಅಂಕ ಪಡೆದು ಸಮಗ್ರ ಪ್ರಶಸ್ತಿ ತಮ್ಮದಾಗಿಸಿಕೊಂಡರು.

ಎರಡೂ ದಿನದ ಸ್ಪರ್ಧೆಯ ಕಿರಿಯ ಮತ್ತು ಹಿರಿಯ ವಿಭಾಗದ ವಿಜೇತರಿಗೆ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿಗಳಾದ ಶ್ರೀ ಬಸವರಾಜ್ ದೇಶಮುಖ ವಿಜೇತ ವಿದ್ಯಾರ್ಥಿಗಳಿಗೆ ಪ್ರಶಂಸೆ ಪತ್ರ, ಪಾರಿತೋಷಕ ಮತ್ತು ನಗದು ಬಹುಮಾನ (ಹಿರಿಯರಿಗೆ) ನೀಡಿ ಗೌರವಿಸಿದರು. ಸಭೆಯನ್ನುದ್ದೇಶಿಸಿ ಮಾತನಾಡಿದ ವಿದ್ಯಾರ್ಥಿಗಳ ಸ್ಪೆಲ್ಲಿಂಗ್ ಪ್ರತಿಭೆ ವೀಕ್ಷಿದ ಶ್ರೀ ಬಸವರಾಜ್ ದೇಶಮುಖ ತಮ್ಮ ಹರ್ಷ ವ್ಯಕ್ತ ಪಡಿಸುತ್ತಾ, ಎಂಥ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉಜ್ವಲ ಭವಿಷ್ಯ ಕಂಡುಕೊಳ್ಳುವಲ್ಲಿ ಸಂದೇಹವಿಲ್ಲ ಎಂದು ಮೆಚ್ಚುಗೆಯ ಮಾತುಗಳನ್ನು ನುಡಿದರು.

ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ಪ್ರತಿಸ್ಪರ್ಧಿಗಳು ಮತ್ತು ಅವರ ತಂಡಗಳ ಮಾರ್ಗದರ್ಶಿ-ಶಿಕ್ಷಕರು ಸ್ಪರ್ಧೆ ಮತ್ತು ವ್ಯವಸ್ಥೆಯ ಬಗ್ಗೆ ಹರ್ಷ ವ್ಯಕ್ತ ಪಡಿಸಿದರು.

ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ವಿದ್ಯಾ ಭಂಡಾರಿ ಪೂಜ್ಯ ಡಾ. ಶರಣಬಸವಪ್ಪ ಅಪ್ಪಾ & ಚೇರ್ ಪರ್ಸನ್ ಮಾತೋಶ್ರೀ ದಾಕ್ಷಾಯಣಿ ಅವ್ವಾಜಿ ಇವರು ಸ್ಪರ್ಧೆಯಲ್ಲಿ ಭಾಗವಹಿಸದ ಎಲ್ಲಾ ಶಾಲೆಯ ಪ್ರಾಚಾರ್ಯರಿಗೆ ಮತ್ತು ವಿದ್ಯಾರ್ಥಿಗಳಿಗೆ ಅಭಿನಂದಿಸಿ ಆಶೀರ್ವಾದ ತಿಳಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here